Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ಇದು Gen-Z ನಿವೃತ್ತಿ ಮನೆ – ನಿಮ್ಮಲ್ಲಿನ ಒತ್ತಡಕ್ಕೆ ವಿರಾಮ ಹಾಕಿ.. ನೆಮ್ಮದಿಯ ಮಡಿಲು ನೀಡುತ್ತೆ!
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇದು Gen-Z ನಿವೃತ್ತಿ ಮನೆ – ನಿಮ್ಮಲ್ಲಿನ ಒತ್ತಡಕ್ಕೆ ವಿರಾಮ ಹಾಕಿ.. ನೆಮ್ಮದಿಯ ಮಡಿಲು ನೀಡುತ್ತೆ!

Latest

ಇದು Gen-Z ನಿವೃತ್ತಿ ಮನೆ – ನಿಮ್ಮಲ್ಲಿನ ಒತ್ತಡಕ್ಕೆ ವಿರಾಮ ಹಾಕಿ.. ನೆಮ್ಮದಿಯ ಮಡಿಲು ನೀಡುತ್ತೆ!

Public TV
Last updated: February 1, 2026 3:58 pm
Public TV
Share
7 Min Read
Generation Z Retirement Home
SHARE

ದಿನ ಕಳೆದಂತೆ ಎಲ್ಲವೂ ಬದಲಾಗುತ್ತಿದೆ. ಈ ಮೊದಲು ನಮ್ಮ ಪೂರ್ವಜರ ಕಾಲದಲ್ಲಿ ಸ್ತ್ರೀಯರಿಗೆ ಅಥವಾ ಯುವಕರಿಗೆ ಓದು, ಉದ್ಯೋಗ ಇದೆಲ್ಲದರ ಮೇಲೆ ಹೆಚ್ಚಿನ ಆಸಕ್ತಿ ಇದ್ದರೂ ಕೂಡ ಅವರಿಗೆ ಅವಕಾಶವಿರುತ್ತಿರಲಿಲ್ಲ. ಇಂದಿನ ಯುವ ಪೀಳಿಗೆಗೆ ಎಲ್ಲಾ ಇದ್ದರೂ ಕೂಡ ಇದರಿಂದ ಹೊರಬರುವ ಆಸೆ. ಹೀಗಿರುವಾಗ ಉದ್ಯೋಗದ ಒತ್ತಡದಿಂದ ಹಳ್ಳಿಯ ಜೀವನ ಅಥವಾ ನೆಮ್ಮದಿಯ ಜೀವನ ಹುಡುಕಿಕೊಂಡು ಹೊರಡುತ್ತಾರೆ. ಇದೆಲ್ಲದಕ್ಕೂ ಅವಕಾಶ ನೀಡುವ ಒಂದು ಜಾಗವೆಂದರೆ ಅದು GEN-Z ನಿವೃತ್ತಿ ಮನೆ. ಏನಿದು? ಈ ಮನೆಯಲ್ಲಿ ಏನಿದೆ? ಎಲ್ಲದಕ್ಕೂ ಉತ್ತರ ಇಲ್ಲಿದೆ.

GEN-Z ಯುಗದಲ್ಲಿರುವ ಯುವಜನತೆ ಉದ್ಯೋಗ, ಓದು ಹಾಗೂ ವ್ಯವಹಾರ ಇನ್ನಿತರ ಕೆಲಸಗಳಲ್ಲಿ ತೊಡಗಿ ಬೇಸತ್ತಿದ್ದಾರೆ. ಬೆಳಗ್ಗೆ ಆದರೆ ಆಫೀಸ್ ಕೆಲಸ, ಮತ್ತೆ ರಾತ್ರಿ ಬಂದು ಮಲಗುವುದು ಇಷ್ಟೇ ಜೀವನ ಆಗಿಬಿಟ್ಟಿದೆ. ಇದೆಲ್ಲದರ ಮಧ್ಯೆ ದಿಕ್ಕು ತೋಚದೆ ಇನ್ನೂ ಕೆಲವರು ಪರಿತಪಿಸುತ್ತಿದ್ದಾರೆ. ಹೀಗಾಗಿ GEN-Z  ಯುವಜನತೆಗಾಗಿಯೇ ಶುರುವಾಗಿದ್ದು Generation-Z Retirement Home.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

20 ರಿಂದ 30ರ ವರೆಗಿನ ಯುವಕರಿಗೆ ಇದು ತುಂಬಾ ಅನುಕೂಲಕರವಾದ ಜಾಗ. ದಿನದ 24 ಗಂಟೆಯೂ ಕೆಲಸ ಮಾಡಿ ಬೇಸತ್ತು ಹೊರ ಬಂದಿರುವ ಯುವಜನತೆಗೆ ಸಂಪೂರ್ಣವಾಗಿ ವಿಭಿನ್ನತೆಯನ್ನು ನೀಡುತ್ತದೆ. ಮಲೇಷ್ಯಾದ ಪೆರಾಕ್ ನ ಗೋಪೆಂಗ್ ಎಂಬಲ್ಲಿ 8 ಎಕರೆ ಜಾಗದಲ್ಲಿ ಈ ಮನೆ ಇದೆ. ಯಾವುದೇ ರೀತಿಯ ವೇಳಾಪಟ್ಟಿ ಇಲ್ಲದೆ ಯುವ ಜನತೆ ತಮ್ಮಿಷ್ಟದಂತೆ ಬದುಕಲು ಅನುವು ಮಾಡಿಕೊಡುತ್ತದೆ.

ಏನಿದು GEN-Z?
ಪ್ರಾರಂಭದಿಂದಲೂ ಭೂಮಿ ಉಗಮವಾದಾಗಿನಿಂದ ಒಂದೊಂದು ರೀತಿಯ ಹೊಸ ಅಂಶಗಳು  ಸೃಷ್ಟಿಯಾಗುತ್ತವೆ. ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಹೀಗಿರುವಾಗ ಹೊಸ ಸಂಶೋಧನೆ ಹಾಗೂ ಹೊಸ ಹೊಸ ಕಲ್ಪನೆಗಳಿಗೆ ಇಂದಿನ ಯುವಕರ ಪಾತ್ರವೂ ಕೂಡ ಇದೆ. ಅದೇ ರೀತಿ ಕ್ರಿ.ಶ ಪ್ರಾರಂಭವಾದಾಗಿನಿಂದ ಇತಿಹಾಸವನ್ನು ನಾವು ನೋಡುತ್ತಾ ಬಂದರೆ ಹೊಸತನವನ್ನು ಕಾಣಬಹುದು. ಇನ್ನು ಸ್ವತಂತ್ರ ಪೂರ್ವ ಭಾರತಕ್ಕೂ ಹಾಗೂ ಸ್ವಾತಂತ್ರೋತ್ತರ ಭಾರತಕ್ಕೂ ತುಂಬಾ ವ್ಯತ್ಯಾಸವಿದೆ.

 

ಇದೆಲ್ಲದಕ್ಕೂ ಆ ಕಾಲದ ಅಥವಾ ಆ ಯುಗದ ಜನರ, ಅಂದಿನ ಯುವಕರ ಪಾತ್ರ ಪ್ರಮುಖವಾದದ್ದು. ಅದರಂತೆ 1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ.

AI Image
AI Image

GEN-Z ಯುಗದ ವಿಭಿನ್ನತೆಯೇನು?

  • ಯಾವಾಗ ಭೂಮಿಯ ಮೇಲೆ ಇಂಟರ್ನೆಟ್ ಪ್ರಾರಂಭವಾಯಿತು ಅದೇ ಸಮಯದೊಂದಿಗೆ ಜನಿಸಿದ ಮಕ್ಕಳೇ ಇವರು. ಅದಲ್ಲದೆ ಡಿಜಿಟಲ್ ಯುಗ ಸೇರಿದಂತೆ ಇನ್ನಿತರ ಬದಲಾವಣೆಗಳೊಂದಿಗೆ ಈ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರು.
  • 1990ಕ್ಕು ಮುನ್ನ ಮೊಬೈಲ್ ಎನ್ನುವುದು ಒಂದು ವಸ್ತುವಾಗಿತ್ತು. ಆದರೆ ಇದರ ನಂತರ ಇಂಟರ್ನೆಟ್ ಪ್ರಾರಂಭವಾದಂತೆ ಮೊಬೈಲ್ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬದಲಾಗಲು ಪ್ರಾರಂಭವಾಯಿತು.
  • ಈ GEN-Z ಯುಗವು ಇಂಟರ್ನೆಟ್, ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ ಜ್ಞಾನದೊಂದಿಗೆ ಬೆಳೆದು ಬಂದ ಮೊದಲ ಪೀಳಿಗೆ ಇದಾಗಿದೆ.
    ಈ ಪೀಳಿಗೆ ವರ್ಚುಯಲ್ ಹಾಗೂ ಆಫ್ಲೈನ್ ಅನುಭವಗಳನ್ನ ಪಡೆದುಕೊಳ್ಳುತ್ತಾ ಬೆಳೆದ ಯುಗ ಇದಾಗಿದೆ. ಅತ್ಯಂತ ವೈವಿಧ್ಯಮಯ ಯುಗ ಎಂದರೆ ತಪ್ಪಾಗಲಿಕ್ಕಿಲ್ಲ.ಈ ಯುಗದಲ್ಲಿ ಪ್ರಾರಂಭವಾದ ಪ್ರತಿಯೊಂದು ತಂತ್ರಜ್ಞಾನ ಸಮಾಜಕ್ಕೆ ಹೆಚ್ಚಿನ ಲಾಭವನ್ನು ಕೊಡುತ್ತಲೇ ಬರುತ್ತದೆ.
  • 1997 ರಿಂದ 2012ರ ಮಧ್ಯದಲ್ಲಿ ಜನಿಸಿದ 13 ರಿಂದ 28 ವರ್ಷದ ಒಳಗಿನವರನ್ನು ಈ GEN-Z ಗೆ ಸೇರಿಸಲಾಗುತ್ತದೆ.
  • ಇನ್ನು GEN-Z ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಬಂದ ನಂತರ ಇದರ ಬಳಕೆ ಹೆಚ್ಚಾಗಿ ಪ್ರಾರಂಭವಾಯಿತು. ಮೊಬೈಲ್, ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದ ಪ್ರಭಾವ ಜನರ ಮೇಲೆ ಹೆಚ್ಚಾಗಲು ಪ್ರಾರಂಭಿಸಿತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಏನಿದರ ವಿಶಿಷ್ಟತೆ?
ನಿಮಗಿದು ಮನೆಯಂತೆ ಭಾಸವಾಗುತ್ತದೆ. ಊಟ, ಗೃಹಬಳಕೆಯ ವಸ್ತುಗಳು ಸೇರಿದಂತೆ ಎಲ್ಲವನ್ನು ಇದು ನೀಡುತ್ತದೆ. ಇಲ್ಲಿ ಯಾವುದೇ ರೀತಿಯ ವೇಳಾಪಟ್ಟಿ ಅಥವಾ ಈ ಕೆಲಸಕ್ಕೆ ನಿಗದಿತ ಸಮಯವೆಂದಿಲ್ಲ. ನಿಮ್ಮಿಷ್ಟದಂತೆ ಇಲ್ಲಿ ಬದುಕಬಹುದು. ತಿಂಗಳಿಗೆ ಅಂದಾಜು 39,000 ರೂ.ಯಿಂದ 40,000 ರೂ.ವರೆಗೆ ವೆಚ್ಚವಾಗುತ್ತದೆ. ಈ ಮೊತ್ತವನ್ನು ಪಾವತಿಸಿದರೆ 20 ರಿಂದ 30 ವರ್ಷದ ಯುವಕ ಯುವತಿಯರು ಇಲ್ಲಿ ವಾಸಿಸಬಹುದು. 

ಪ್ರಕೃತಿಯ ಮಡಿಲಲ್ಲಿ ಒತ್ತಡದಿಂದ ಮುಕ್ತರಾಗಲು ಇದು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಜೀವನದಿಂದ ಶಾಶ್ವತ ಮುಕ್ತಿ ನೀಡದೆ ಇದ್ದರೂ ಕೂಡ ಒಂದು ನಿರ್ದಿಷ್ಟ ಅವಧಿಗೆ ಇದು ಉತ್ತಮವಾದ ಅನುಭವವನ್ನು ನೀಡುತ್ತದೆ. ಬೆಳಗಾದರೆ ಕೆಲಸ ಎನ್ನುವ ಇಂದಿನ ಯುವ ಜನರು ಸ್ವಲ್ಪ ದಿನಗಳ ಕಾಲ ಅದರಿಂದ ಹೊರಬಂದು ವಿಭಿನ್ನವಾಗಿ ಬದುಕಲು ಇದು ದಾರಿ ಮಾಡಿಕೊಡುತ್ತದೆ. ಇದೆಲ್ಲದರ ಜೊತೆಗೆ ಇದು ಇಂದಿನ ಯುವ ಪೀಳಿಗೆಗೆ ಮಾನಸಿಕ ಆರೋಗ್ಯ, ವಿಶ್ರಾಂತಿ ಮತ್ತು ಜೀವನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಆದ್ಯತೆ ನೀಡುತ್ತದೆ.

AI Image
AI Image

ಸಾಮಾನ್ಯವಾಗಿ ಈಗಿನ ಯುವಜನತೆ ಸಮಯ ಸಿಕ್ಕರೆ ಸಾಕು ಟ್ರಿಪ್, ಪ್ರವಾಸ ಅಥವಾ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಲು ಇಚ್ಚಿಸುತ್ತಾರೆ. ಅಂಥವರು ಕೂಡ ಇಲ್ಲಿಗೆ ಬಂದು ಅನುಭವ ಪಡೆದುಕೊಳ್ಳಬಹುದು.

ಇಲ್ಲಿಗೆ ಬಂದವರಿಗೆ ಮುಖ್ಯವಾಗಿ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮದಿಂದ ದೂರವಿಡಲಾಗುತ್ತದೆ. ತಮ್ಮ ಊಟವನ್ನು ತಾವೇ ತಯಾರಿಸಿಕೊಂಡು ಊಟ ಮಾಡುವುದರಿಂದ ಹಿಡಿದು, ಓದುವುದು, ಯೋಗ, ಧ್ಯಾನ, ಆಟಗಳು ಹಾಗೂ ಕೆಲವೊಮ್ಮೆ ಏಕಾಂಗಿಯಾಗಿಯೂ ಸಮಯ ಕಳೆಯುತ್ತಾರೆ. ಹೆಚ್ಚಿನ ಸಮಯ ಇಲ್ಲಿ ವಿಶ್ರಾಂತಿಗೆ ಆದ್ಯತೆ ನೀಡಲಾಗುತ್ತದೆ.

ಈ ಮನೆಯಲ್ಲಿ ವಾಸವಿರಲು ನಿರ್ದಿಷ್ಟವಾದ ಕಾಲಮಿತಿ ಇಲ್ಲ. ವಾರವು ಇರಬಹುದು, ತಿಂಗಳು ಕೂಡ ಇರಬಹುದು. ಇದರ ಜೊತೆಗೆ ಇದು ಉದ್ಯೋಗದೊಂದಿಗೆ ವಿಶ್ರಾಂತಿಯು ಎಷ್ಟು ಮುಖ್ಯ ಎಂಬ ಪಾಠ ಹೇಳಿಕೊಡುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇದರ ಹಿಂದಿನ ಕಾರಣವೇನು?
ಇದು ಸ್ಪರ್ಧಾತ್ಮಕ ಜಗತ್ತು. ಎಲ್ಲಿ ನೋಡಿದರೂ ಸ್ಪರ್ಧೆ. ಇಂದಿನ ಪೀಳಿಗೆ ಕಾಲೇಜು ಮುಗಿದರೆ ಸಾಕು ತಕ್ಷಣ ಉದ್ಯೋಗಕ್ಕೆ ಹೊರಟುಬಿಡುತ್ತಾರೆ. ಅಲ್ಲಿ ಹೆಚ್ಚಿನ ಸ್ಪರ್ಧೆ ಅಥವಾ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ. ಇದರಿಂದ ಉದ್ಯೋಗದ ಜೊತೆ ಜೊತೆಗೆ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಜೀವನದ ಸಮತೋಲನ ಹದಗೆಡುತ್ತದೆ. ಇಂಥವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಕ್ತಿ ನೀಡುವ ಕೆಲಸ ಮಾಡಿ, ಪ್ರಕೃತಿಗೆ ಹತ್ತಿರ ಮಾಡಲು ಇದು ಸಹಾಯಮಾಡುತ್ತದೆ.

ಮೂಲ ಉದ್ದೇಶವೇನು?
GEN-Z ಈ ಪೀಳಿಗೆಯವರು ತಮ್ಮ ಕೆಲಸ, ಕಾರ್ಪೊರೇಟ್ ಜಗತ್ತು, ಸಾಮಾಜಿಕ ಮಾಧ್ಯಮ ಇದರಲ್ಲಿಯೇ ಮುಳುಗಿ ಹೋಗಿದ್ದಾರೆ. ಇಂಥವರಿಗೆ ಒತ್ತಡದಿಂದ ಹೊರ ತರುವ ಉದ್ದೇಶವನ್ನು ಮತ್ತು ಇದಕ್ಕೆ ಒಂದು ಅಲ್ಪ ವಿರಾಮ ನೀಡುವ ಉದ್ದೇಶ ಹೊಂದಿದೆ. ಒಬ್ಬರು ಇಬ್ಬರಲ್ಲ ಮಿಲಿಯನ್ಗಟ್ಟಲೆ ಯುವಜನತೆ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ದುಡ್ಡು ಗಳಿಸುವ ಉದ್ದೇಶವಿಲ್ಲದ ಇಲ್ಲಿರುವವರು ಬಾಡಿಗೆ, ಗೃಹಪಯೋಗಿ ವಸ್ತುಗಳು, ಸೋಶಿಯಲ್ ಮೀಡಿಯಾ ಅಥವಾ ಅಡುಗೆ ಇದು ಯಾವುದರ ಬಗ್ಗೆಯೂ ಚಿಂತಿಸಿದೆ ತಮಗೆ ಹೆಚ್ಚಿನ ಸಮಯ ನೀಡಲು ಅವಕಾಶ ಮಾಡಿಕೊಡುತ್ತದೆ. ದುಡ್ಡು ಗಳಿಸುವ ಯೋಜನೆಯನ್ನ ಬಿಟ್ಟು ವಿಶ್ರಾಂತಿ ಮತ್ತು ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳುವ ಹಾದಿಯನ್ನು ತೋರಿಸುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

GEN-Zಗೂ ಮುನ್ನ ಇದೇ ರೀತಿ ಹಲವು ಯುಗಗಳೆಂದು ಗುರುತಿಸಲಾಗಿತ್ತು.
The Greatest Generation 1901-1927 : ಈ ಪೀಳಿಗೆಯು ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಬುದ್ಧವಾಯಿತು. ಈ ಸಮಯದಲ್ಲಿ ತಮ್ಮ ಕೆಲಸ ಹಾಗೂ ತ್ಯಾಗದಿಂದಲೇ ಹೆಸರುವಾಸಿಯಾಗಿದ್ದಾರೆ.

The Silent Generation 1928-1945:  Greatest Generation ಪೀಳಿಗೆಯ ನೆರಳಿನಲ್ಲಿ ಬೆಳೆದ ಈ ಯುಗವು ಯುದ್ಧದ ಸಮಯದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಿತು.

Baby Boomers 1946-1964: ಎರಡನೇ ಮಹಾಯುದ್ಧದ ನಂತರ ಸಂಭವಿಸಿದ “ಬೇಬಿ ಬೂಮ್” ನಿಂದ ಈ ಪೀಳಿಗೆಗೆ ಈ ಹೆಸರು ಬಂದಿದೆ. ಬೂಮರ್‌ಗಳು 1960 ಮತ್ತು 70ರ ದಶಕದ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Generation X 1965-1980: ಒಂದೇ ಕುಟುಂಬದಲ್ಲಿ ಇಬ್ಬರು ಆದಾಯ ಪಡೆಯುವವರು ಹಾಗೂ  ತಾಯಿ ಅಥವಾ ತಂದೆ ಮಾತ್ರ ಇರುವ ಕುಟುಂಬದಲ್ಲಿ ಕೆಲವು ಮಕ್ಕಳು ಅಗತ್ಯ ಮೀರಿ ಕಾಳಜಿಯಲ್ಲಿ  ಬೆಳೆದವು. ಹೀಗಾಗಿ ಜೆನ್ X ಎಂದು ಕರೆದರು. ಇದೇ ಯುಗದಲ್ಲಿ ಕಂಪ್ಯೂಟರ್‌ ಹಾಗೂ ತಂತ್ರಜ್ಞಾನದ ಉದಯವಾಯಿತು.

Millennials 1981-1996: ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಬೆಳವಣಿಗೆಯೊಂದಿಗೆ ಬೆಳೆದ ಮೊದಲ ಪೀಳಿಗೆ.

Generation Z  1997-2012:1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ.

Generation Alpha 2013-2024: GEN-Z ಪ್ರಾರಂಭವಾದಂತೆ 2012ರ ನಂತರ ಅಂದರೆ 2013 ರಿಂದ 2020 ರ ವರೆಗೆ ಜನಿಸಿದ ಮಕ್ಕಳನ್ನು ಈ ಯುಗಕ್ಕೆ ಸೇರಿಸಲಾಗುತ್ತದೆ. GEN-Z ಯುಗವನ್ನು ಸಂಪೂರ್ಣವಾಗಿ ಅನುಸರಿಸಿಕೊಂಡು ಬಂದ ಯುಗವನ್ನು GEN- ALPHA ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿಸಿಕೊಂಡು ಡಿಜಿಟಲ್‌ ಜಗತ್ತಿನಲ್ಲಿ ಮುಂದುವರೆಯುತ್ತಿದ್ದಾರೆ.

Generation Beta 2025-2039: ಇದು ಮುಂದಿನ ಪೀಳಿಗೆಯಾಗಿದ್ದು, ಇವರನ್ನು ಜೆನ್‌ Z ನ ಮಕ್ಕಳು ಎನ್ನುತ್ತಾರೆ.

ಈ ಹೊಸ ಪದ್ದತಿ ಅಥವಾ ಈ ನಿವೃತ್ತಿ ಮನೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಜಕ್ಕೂ ಇಂದಿನ ಯುವಕರು ಎದುರಿಸುತ್ತಿರುವ ಮಾನಸಿಕ ತೊಂದರೆಗಳನ್ನ ಅಥವಾ ಒತ್ತಡವನ್ನು ಇದು ಬಗೆಹರಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದು ಒಂದು ಕಡೆಯಾದರೆ ಇನ್ನೊಂದೆಡೆ ಇದು ನಿಜಕ್ಕೂ ಉತ್ತೇಜನ ನೀಡುತ್ತದೆ ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂದು ತಿಳಿದುಬಂದಿದೆ.

TAGGED:Gen Z Retirement HomeGEN-ZGen-Z ನಿವೃತ್ತಿ ಮನೆGopengMalaysiaPerakRetirement Homeಗೋಪೆಂಗ್ನಿವೃತ್ತಿ ಮನೆಪೆರಾಕ್ಮಲೇಷ್ಯಾ
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

ಸಾಂದರ್ಭಿಕ ಚಿತ್ರ
Latest

ಬಂಗಾಳದಲ್ಲಿ ಕೇಸರಿ ಸುನಾಮಿ – ಮಮತಾ ಆಡಳಿತಕ್ಕೆ ಅಂತ್ಯ ಹಾಡಲು ಆರ್‌ಎಸ್‌ಎಸ್ ‘ಸೈಲೆಂಟ್ ಆಪರೇಷನ್’ ಯಶಸ್ವಿ!

Public TV
ByPublic TV
14 minutes ago
Duck
Chikkamagaluru

ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Public TV
ByPublic TV
16 minutes ago
01 1
Latest

ಗಂಗೋತ್ರಿಯಿಂದ ಗಂಗಾ ಸಾಗರದ ತನಕ ಕಮಲ ಅರಳಿದೆ, ಬಂಗಾಳ ಭಯಮುಕ್ತವಾಗಿದೆ: ಮೋದಿ

Public TV
ByPublic TV
25 minutes ago
pm modi 5
Latest

ಬಂಗಾಳದಲ್ಲಿ ಕಮಲ ಅರಳಿದೆ, ಅದ್ಭುತ ಜನಾದೇಶ ಸಿಕ್ಕಿದೆ: ಮೋದಿ ಕೃತಜ್ಞತೆ

Public TV
ByPublic TV
1 hour ago
Siddaramaiah
Bengaluru City

SIR ಮೋಸದಾಟ, ಚುನಾವಣಾ ಆಯೋಗದ ಕೈವಾಡದಿಂದ ಮಮತಾಗೆ ಸೋಲು: ಸಿದ್ದರಾಮಯ್ಯ ಆಕ್ರೋಶ

Public TV
ByPublic TV
1 hour ago
Narenndra Modi BJP Victory Specch delhi lection
Latest

ವಾಜಪೇಯಿ ಕನಸು ನನಸು – ಬಿಜೆಪಿ ಆಡಳಿತ ರಾಜ್ಯಗಳ ಸಂಖ್ಯೆ 20ಕ್ಕೆ ಏರಿಕೆ

Public TV
ByPublic TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?