ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಗೋಧಿ ನುಚ್ಚಿನ ಪೊಂಗಲ್ ಮಾಡಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಗೋಧಿ ನುಚ್ಚು- 1 ಕಪ್
* ಹೆಸರುಬೇಳೆ- ಅರ್ಧ ಕಪ್
* ಹಾಲು ಅರ್ಧ ಲೀಟರ್
* ಬೆಲ್ಲ- 1 ಕಪ್
* ತುಪ್ಪ – ಅರ್ಧ ಕಪ್
* ಒಣಕೊಬ್ಬರಿ- ಅರ್ಧ ಕಪ್
* ಲವಂಗದ ಪುಡಿ-1 ಚಮಚ
* ಏಲಕ್ಕಿ ಪುಡಿ -1 ಚಮಚ
* ಗೋಡಂಬಿ, ದ್ರಾಕ್ಷಿ – ಸ್ವಲ್ಪ
Advertisement
ಮಾಡುವ ವಿಧಾನ:
* ಹೆಸರುಬೇಳೆ ಮತ್ತು ಗೋಧಿನುಚ್ಚನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು.
Advertisement
* ನಂತರ ಹುರಿದ ಬೇಳೆ ಮತ್ತು ಗೋಧಿ ನುಚ್ಚನ್ನು ಕುಕ್ಕರಿನಲ್ಲಿ ಹಾಕಿ. ನೀರು ಮತ್ತು ಹಾಲನ್ನು ಸೇರಿಸಿ. 5-6 ವಿಷಲ್ ಕೂಗಿಸಿ.
* ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಕಾಲು ಕಪ್ ನೀರು ಸೇರಿಸಿ ಕುದಿಸಿ ಸೋಸಿಕೊಳ್ಳಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
* ನಂತರ ಬೆಲ್ಲದ ನೀರಿನ ಮಿಶ್ರಣಕ್ಕೆ ಒಣ ಕೊಬ್ಬರಿಯನ್ನು ಸೇರಿಸಿ. ಗಟ್ಟಿಯಾಗುತ್ತಾ ಬಂದಾಗ ತುಪ್ಪವನ್ನು ಚಿಟಿಕೆ ಉಪ್ಪನ್ನು ಸೇರಿಸಿ. ಲವಂಗ, ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ತಯಾರಿಸಿ ಕೊಂಡ ಪೊಂಗಲ್‍ಗೆ ಮಿಶ್ರಣ ಮಾಡಿ. ರುಚಿಯಾದ ಗೋಧಿ ನುಚ್ಚಿನ ಸಿಹಿ ಪೊಂಗಲ್ ತಯಾರಿಸಿ ಸವಿಯಲು ಸಿದ್ಧವಾಗುತ್ತದೆ.