ಬೆಂಗಳೂರು: ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆಯಿಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ನಗರದ ಹುಸ್ಕೂರು ಬಳಿ ಇರುವ ಎಬಿನೈಜರ್ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಇಂದು ಬೆಳಗ್ಗೆ ಆಗಂತುಕರು ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಶಾಲಾ ಸಿಬ್ಬಂದಿ ಶಾಲೆಯಿಂದ ಹೊರ ಬಂದಿದ್ದಾರೆ. ಇದನ್ನೂ ಓದಿ: E-ಸೈಕಲ್ ಖರೀದಿಗೆ ಬಂಪರ್ ಆಫರ್ ಕೊಟ್ಟ ದೆಹಲಿ ಸರ್ಕಾರ : ಯಾರಿಗೆ ಸಿಗುತ್ತೆ?
Advertisement
Advertisement
ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬರುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಧಾವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗೆ ಬಾಂಬ್ ನಿಷ್ಕ್ರಿಯಾ ದಳ ಹಾಗೂ ಶ್ವಾನ ದಳ ಕೂಡಾ ದೌಡಾಯಿಸಿದೆ. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ
Advertisement