ನವದೆಹಲಿ: ದೆಹಲಿಯಿಂದ (Delhi) ಪುಣೆಗೆ (Pune) ಹೊರಟಿದ್ದ ವಿಸ್ತಾರಾ UK971 ವಿಮಾನಕ್ಕೆ (Flight) ಬಾಂಬ್ ಬೆದರಿಕೆ ಕರೆ (Bomb Threat Call)ಬಂದಿದೆ. ಬೆಳಗ್ಗೆ 7:30ರ ಸುಮಾರಿಗೆ ಬೋರ್ಡಿಂಗ್ ಪ್ರಗತಿಯಲ್ಲಿದ್ದಾಗ ಜಿಎಂಆರ್ ಕಾಲ್ ಸೆಂಟರ್ಗೆ ಕರೆ ಮಾಡಿರುವ ಅಪರಿಚಿತರು ಬಾಂಬ್ ಬೆದರಿಕೆ ಒಡ್ಡಿದ್ದಾರೆ.
ಕರೆ ಬೆನ್ನಲ್ಲೆ ಬೋರ್ಡಿಂಗ್ ನಿಲ್ಲಿಸಿ, ಪ್ರತ್ಯೇಕವಾದ ಸ್ಥಳದಲ್ಲಿ ವಿಮಾನದ ತಪಾಸಣೆ ಮಾಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಭದ್ರತಾ ತಂಡಗಳು ವಿಮಾನ ಪರಿಶೀಲನೆ ಮಾಡಿದ್ದು ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ವಾನಗಳಿಂದಾಗಿ ಜಗಳ- ನೆರೆಮನೆಯ ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!
Advertisement
Advertisement
ಈ ನಡುವೆ ಎಲ್ಲಾ ಪ್ರಯಾಣಿಕರು ಮತ್ತು ಅವರ ಲಗೇಜುಗಳನ್ನು ಸುರಕ್ಷಿತವಾಗಿಡಲಾಗಿದೆ. ಪ್ರಯಾಣಿಕರಿಗೆ ಉಪಹಾರ ನೀಡುವುದು ಸೇರಿದಂತೆ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ವಕ್ತಾರರು ಹೇಳಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ವಿಶೇಷ ಗೌರವ – ಟ್ರಸ್ಟ್ ಚಿಂತನೆ ಏನು?
Advertisement
Web Stories