ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ತಮ್ಮ ನೋಟದಿಂದಲ್ಲೇ ಪಡ್ಡೆ ಹುಡುಗರ ನಿದ್ದೆ ಕದ್ದವರು. ಅಭಿಮಾನಿಗಳು ಸನ್ನಿ ಅಪ್ ಡೇಟ್ಸ್ ಗಾಗಿ ಕಾಯುತ್ತಿರುತ್ತಾರೆ. ಈಗ ಮತ್ತೆ ಕನಸಿನ ರಾಣಿ ಸನ್ನಿ ಬೀಚ್ ಬಳಿ ನಿಂತುಕೊಂಡು ತೆಗೆಸಿಕೊಂಡಿರುವ ಹಾಟ್ ಫೋಟೋ ಮತ್ತು ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
View this post on Instagram
ಸನ್ನಿ ಬೇಸಿಗೆಗೆಂದು ಪತಿ ಡೇನಿಯಾಲ್ ವೆಬಲ್ ಜೊತೆ ಮಾಲ್ಡೀವ್ಸ್ ಬೀಚ್ಗೆ ಔಟಿಂಗ್ ಹೋಗಿದ್ದು, ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸನ್ನಿ, ನಾನು ಮಗುವಿನಂತೆ ಓಡುತ್ತಿದ್ದೇನೆ. ನಮಗಾಗಿ ಈ ಖಾಸಗಿ ದ್ವೀಪ ಎಂದು ಬರೆದು, ಕ್ಯಾಮರಾ ಹಿಂದೆ ಸನ್ನಿ ಬೀಚ್ ಡ್ರೆಸ್ನಲ್ಲಿ ಓಡಿಬರುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್ಗೆ ಅವಾರ್ಡ್
View this post on Instagram
ಈ ವೀಡಿಯೋ ಜೊತೆಗೆ ಸನ್ನಿ ಮಾಲ್ಡೀವ್ನಲ್ಲಿ ಕಾಲ ಕಳೆದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಸನ್ನಿ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಸನ್ನಿ ಅಭಿಮಾನಿಗಳು ಫೋಟೋವನ್ನು ಫುಲ್ ಶೇರ್ ಮಾಡುತ್ತಿದ್ದಾರೆ.