ಬೆಳಗಾವಿ: ಆಸ್ತಿಗಾಗಿ ಅತ್ತೆ ಮತ್ತು ಅಳಿಯನ ಭೀಕರ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ (Belagavi Double ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ನಡೆದಿದೆ.
ಬಸವ್ವ ನಾಯ್ಕರ್(60) ಹಾಗೂ ತಮ್ಮನ ಮಗ ರಮೇಶ್ ನಾಯ್ಕರ್(26) ಕೊಲೆಯಾದ ದುರ್ದೈವಿಗಳು. ರವಿ ಮತ್ತು ಪುಂಡಲೀಕ ಕೊಲೆಗೈದ ಆರೋಪಿಗಳು.
ಹತ್ತು ಎಕರೆ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರ ನಡುವೆ ಆಗಾಗ ಜಗಳವಾಗುತ್ತಿತ್ತು. ಮೃತ ಬಸವ್ವ ಅವರ ಸಹೋದರಿಯರ ಮಕ್ಕಳಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಕೊಡಲಿಯಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಸೇರಿ ಸ್ಥಳೀಯ ಪೊಲೀಸರು ಹಾಗೂ ಸುಕೋ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಹಾಸನ | 38 ಕಾಡಾನೆಗಳ ಹಿಂಡು ಬೇಲೂರಿಗೆ ವಾಪಸ್ – ಜನರಲ್ಲಿ ಆತಂಕ
ಇನ್ನು ಘಟನೆ ಕುರಿತು ಎಸ್ಪಿ ಕೆ.ರಾಮರಾಜನ್ ಮಾತನಾಡಿ, ನಿನ್ನೆ 9ರಿಂದ 9:30ರ ಅವಧಿಯಲ್ಲಿ ಕೊಲೆ ಮಾಡಲಾಗಿದೆ. ಆಸ್ತಿಗಾಗಿ ಸಹೋದರಿಯರ ಮಕ್ಕಳಿಂದಲೇ ಕೊಲೆಯಾಗಿದೆ. ರವಿ ಮತ್ತು ಪುಂಡಲೀಕ ಎಂಬವರು ಕೊಲೆ ಮಾಡಿದ್ದಾರೆಂಬ ಮಾಹಿತಿ ಇದೆ. ಸ್ಥಳ ಪರಿಶೀಲನೆ ಮಾಡಿ ಮಾರ್ಗದರ್ಶನ ಮಾಡಿದ್ದೇನೆ. ಆರೋಪಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕುಟುಂಬದಲ್ಲಿ ಆಸ್ತಿ ವಿವಾದ ಸಾಕಷ್ಟು ವರ್ಷಗಳಿಂದ ಇತ್ತು. ಈ ಮೊದಲು ಸಣ್ಣಪುಟ್ಟ ಗಲಾಟೆ ಆಗುತ್ತಿತ್ತು. ಮಾರ್ಚ್ ತಿಂಗಳಲ್ಲಿ ರವಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಎಷ್ಟು ಜನ ಸೇರಿ ಕೊಲೆ ಮಾಡಿದ್ದಾರೆ ಎಂಬ ತನಿಖೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ – ಸುಪ್ರೀಂ ಕೋರ್ಟ್ನಿಂದ ಐವರು ಆರೋಪಿಗಳಿಗೆ ರಿಲೀಫ್
