ಜೈಪುರ: ಭಾರತದ ಮೊಟ್ಟಮೊದಲ ಸ್ವದೇಶಿ ವಿನ್ಯಾಸದ, ಎರಡು ಹಂತದಲ್ಲಿ ಅಭಿವೃದ್ಧಿಪಡಿಸಲಾಗಿರುವ, ವಾಹನದ ಮೇಲೆ ಅಳವಡಿಸಬಹುದಾದ, ಡ್ರೋನ್ ಬೇಟೆಗಾರ `ಭಾರ್ಗವಾಸ್ತ್ರ’ (Bhargavastra) ತನ್ನ ಅಭಿವೃದ್ಧಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ರಾಜಸ್ಥಾನದ (Rajasthan) ಪೋಖ್ರಾನ್ (Pokhran) ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಗುರುವಾರ (ನ.26) ಸ್ವದೇಶಿ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದ್ದು, ಈ ವಾಯು ರಕ್ಷಣಾ ವ್ಯವಸ್ಥೆಯ ಆಂತರಿಕ ಅಭಿವೃದ್ಧಿ ಪರೀಕ್ಷೆಗಳನ್ನು ನವೆಂಬರ್ 20 ರಿಂದ 24 ರವರೆಗೆ ನಡೆಸಲಾಗಿದೆ. ಇದು ಶತ್ರುಗಳ ಡ್ರೋನ್ಗಳ ಮೇಲೆ ದಾಳಿ ಹಾಗೂ ಏಕಕಾಲದಲ್ಲಿ ಗುಂಪು ಗುಂಪಾಗಿ ಬರುವ ಡ್ರೋನ್ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.ದನ್ನೂ ಓದಿ: ಸಿಎಂ ಡಿಕೆಶಿ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ – ಆಟೋ ಚಾಲಕನ ಮೂಲಕ ಪೊಲೀಸರಿಗೆ ಅನಾಮಿಕ ಕಾಲ್!
ಎರಡು ಹಂತದ ರಕ್ಷಣಾ ವ್ಯವಸ್ಥೆ
ಭಾರ್ಗವಾಸ್ತ್ರವನ್ನು ಎರಡು ಆವೃತ್ತಿಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆವೃತ್ತಿ-1 ವಾಯು ರಕ್ಷಣಾ ರಾಕೆಟ್ಗಳನ್ನು ಬಳಸಿದರೆ, ಆವೃತ್ತಿ-2 ನಿಖರವಾದ ದಾಳಿಗಾಗಿ ಸ್ವಯಂಚಾಲಿತ ಮಾರ್ಗದರ್ಶನ ಹೊಂದಿದೆ. ಈ ವ್ಯವಸ್ಥೆಯ ಪತ್ತೆ ಮತ್ತು ಟ್ರ್ಯಾಕಿಂಗ್ ನೆಟ್ವರ್ಕ್ನಲ್ಲಿ ರೇಡಿಯೋ-ಫ್ರೀಕ್ವೆನ್ಸಿ ಡಿಟೆಕ್ಟರ್ಗಳು ಮತ್ತು ರಾಡಾರ್ಗಳನ್ನು ಒಳಗೊಂಡಿದೆ.
#WATCH | Solar Defence and Aerospace Limited (SDAL) has successfully designed, developed and integrated Bhargavastra, a Vehicle-Mounted Counter Swarm Drone System (VMCSDS), and completed its in-house development trials at Pokaran field firing ranges from 20th to 24th November 2026. The system offers an effective, two-layer defence against enemy drone swarms, with the capability to engage multiple drones simultaneously. Bhargavastra is India’s first indigenously designed and developed two-layer vehiclemounted counter-swarm drone system, combining air defence rockets and guided micro-missiles to provide an integrated solution against this emerging threat.
(Video Source: Solar Defence and Aerospace Limited (SDAL)
— ANI (@ANI) November 26, 2026
ಈ ಡ್ರೋನ್ನಲ್ಲಿ ವಾಯು ರಕ್ಷಣಾ ರಾಕೆಟ್ಗಳು ಮತ್ತು ನಿಖರವಾಗಿ ಗುರಿ ತಲುಪುವ ಮಾರ್ಗದರ್ಶಿತ ಸೂಕ್ಷ್ಮ ಕ್ಷಿಪಣಿಗಳನ್ನು ಬಳಕೆ ಮಾಡಲಾಗುತ್ತದೆ. ಜೊತೆಗೆ ಇದು ರಾಡಾರ್, ಸಂವೇದಕಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ನಿಯಂತ್ರಣ ವ್ಯವಸ್ಥೆಯ ನೆರವಿನಿಂದ ಡ್ರೋನ್ಗಳ ಪತ್ತೆ ಮತ್ತು ನಿಗಾವಹಿಸಲಿದೆ.
ಈ ಡ್ರೋನ್ ಅನ್ನು ಸೋಲಾರ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ್ದು, 2027ರ ಮಾರ್ಚ್ವರೆಗೆ ಭಾರತೀಯ ಸೇನೆಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಡ್ರೋನ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತದ ಬತ್ತಳಿಕೆಗೆ ಮತ್ತೊಂದು ಸ್ವದೇಶಿ ಅಸ್ತ್ರ ಸೇರ್ಪಡೆಯಾಗಲಿದೆ.ಓದಿ: ವಿದ್ಯುತ್ ಬಳಕೆಗೆ ಇನ್ಮುಂದೆ ಟೈಮ್ ಲೆಕ್ಕ – ಕೇಂದ್ರದಿಂದ ಹೊಸ ಸ್ಕೀಂ
