ಲಕ್ನೋ: 2 ದಿನಗಳಿಂದ ಕಾಣೆಯಾಗಿದ್ದ 2 ವರ್ಷದ ಬಾಲಕಿಯ (Girl) ಶವವು ನೆರೆ ಮನೆಯ ಬಾಗಿಲಿಗೆ (Door) ನೇತು ಹಾಕಿದ್ದ ಬ್ಯಾಗ್‌ನಲ್ಲಿ ( Bag) ಪತ್ತೆಯಾದ ಘಟನೆ ಗ್ರೇಟರ್ ನೋಯ್ಡಾದಲ್ಲಿ (Greater Noida) ನಡೆದಿದೆ.
ಮಾನ್ಸಿ (2) ಮೃತ ಬಾಲಕಿ. ಮಾನ್ಸಿ, ಸಹೋದರ ಹಾಗೂ ತಂದೆ, ತಾಯಿಯೊಂದಿಗೆ ದೇವ್ಲಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯ ತಂದೆ, ತಾಯಿಯರಿಬ್ಬರೂ ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಾಗಿದ್ದರು. ಆಕೆಯ ತಂದೆ ಶಿವಕುಮಾರ್ ಕೆಲಸಕ್ಕೆ ಹೋಗಿದ್ದ. ಜೊತೆಗೆ ತಾಯಿ ಮಂಜು ಸಹಾ ಮಾರುಕಟ್ಟೆಗೆ ಹೋಗಿದ್ದಳು. ಈ ವೇಳೆ ಮಾನ್ಸಿ ಕಾಣಿಯಾಗಿದ್ದಳು. ಎಷ್ಟೇ ಹುಡುಕಿದರೂ ಕಾಣೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದರು.
Advertisement
Advertisement
ಕಳೆದ 2 ದಿನಗಳ ನಂತರ ತನ್ನ ನೆರೆ ಮನೆಯಲ್ಲಿದ್ದ ರಾಘವೇಂದ್ರ ಮನೆಯಿಂದ ದುರ್ವಾಸನೆ ಬರುತ್ತಿದೆ. ಆದರೆ ಮನೆಗೆ ಬೀಗ ಹಾಕಲಾಗಿದೆ ಎಂದು ದೂರಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರ ನೆರವಿನಿಂದ ಶಿವಕುಮಾರ್ ಮನೆ ಪ್ರವೇಶಿಸಿದ್ದಾನೆ. ಈ ವೇಳೆ ಮನೆಯ ಬಾಗಿಲಿಗೆ ನೇತು ಹಾಕಿದ್ದ ಚೀಲದಲ್ಲಿ ಮಾನ್ಸಿಯ ಶವ ಪತ್ತೆಯಾಗಿದೆ.
Advertisement
ಕಳೆದ ವಾರ ಮಗು ಕಾಣೆಯಾದಾಗ ನೆರೆಹೊರೆಯವರು ಆಕೆಯ ಪೋಷಕರಿಗೆ ಮಗುವನ್ನು ಹುಡುಕಲು ಸಹಾಯ ಮಾಡುವಂತೆ ನಟಿಸಿದ್ದರು. ಆದರೆ ಮೃತದೇಹದಿಂದಾಗಿ ಅವರ ಮನೆಯಲ್ಲಿ ವಾಸನೆ ಬರಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಅವರು ನಾಪತ್ತೆ ಆಗಿದ್ದಾರೆ ಎಂದು ಮಾನ್ಸಿ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ರಾಜಕೀಯ ಸಭೆಯಲ್ಲಿ ಶಾಲಾ ಮಕ್ಕಳ ದುರ್ಬಳಕೆ
Advertisement
ಮಾನ್ಸಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದರೂ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿರಲಿಲ್ಲ. ಆರೋಪಿ ಪರಾರಿಯಾಗಿದ್ದಾನೆ. ಆದರೆ ಪೊಲೀಸ್ ತಂಡಗಳು ಆತನನ್ನು ಹುಡುಕುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ – ಅಂಥವರಿಗೆ ಕೋಲಾರದ ಜನ ಮರುಳಾಗ್ಬೇಡಿ: HDK