Connect with us

Districts

ನಟ ಶಿವರಾಜ್ ಕುಮಾರ್‍ಗೆ ಕೋರ್ಟ್‍ನಿಂದ ಬಿಗ್ ರಿಲೀಫ್

Published

on

ಶಿವಮೊಗ್ಗ: ನಟ ಶಿವರಾಜ್ ಕುಮಾರ್‍ಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಎಂದು ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಕಾಂತ್ ವಿರುದ್ಧ ದೂರು ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಇಂದು ಇವರೆಲ್ಲರೂ ಖುಲಾಸೆಗೊಂಡಿದ್ದಾರೆ.

2014ರ ಏಪ್ರಿಲ್ 16ರಂದು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಎಂದು ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಶಿವಮೊಗ್ಗದ ವಿನೋಬಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಬಾರಿ ಶಿವರಾಜ್ ಕುಮಾರ್ ದಂಪತಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಮೂರನೇ ಜೆಎಂಎಫ್‍ಸಿ ನ್ಯಾಯಾಧೀಶರಾದ ಶ್ವೇತಾ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ವಕೀಲ ಶ್ರೀಪಾಲ್ ನಟ ಶಿವರಾಜ್ ಕುಮಾರ್ ಪರ ವಾದ ಮಂಡನೆ ಮಾಡಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ – ಕೋರ್ಟ್‍ಗೆ ಹಾಜರಾದ ಶಿವರಾಜ್‍ಕುಮಾರ್ ದಂಪತಿ

Click to comment

Leave a Reply

Your email address will not be published. Required fields are marked *

www.publictv.in