ಕಾಮಿಡಿಯನ್, ನಿರೂಪಕಿ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿರುವ ಕಾಮಿಡಿ ಕ್ವೀನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
- Advertisement 2
ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಹರ್ಷ ಲಿಂಬಾಚಿಯಾ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇಟ್ಸ್ ಎ ಬಾಯ್ (ಇದು ಗಂಡು ಮಗು) ಎಂದು ಬರೆದಿರುವ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೂ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ಯಾಗಿ ಅಗ್ನಿಸಾಕ್ಷಿ ವೈಷ್ಣವಿ ಮೋಡಿ
- Advertisement 3
View this post on Instagram
- Advertisement 4
ಇತ್ತೀಚೆಗೆ ಭಾರತಿ ಸಿಂಗ್ ತಮ್ಮ ಗರ್ಭಾವಸ್ಥೆ ಕ್ಷಣಗಳ ಫೊಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಭಾರೀ ಸುದ್ದಿಯಾಗಿದ್ದರು. ಆನೆ ವಾಲೇ ಬೇಬಿ ಕಿ ಮಮ್ಮಿ(ಬರಲಿರುವ ಮಗುವಿನ ತಾಯಿ) ಎಂಬ ಮಜವಾದ ಶೀರ್ಷಿಕೆ ನೀಡಿದ ಪೋಸ್ಟ್ ಅನ್ನು ಅಭಿಮಾನಿಗಳು ಅತಿಯಾಗಿ ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ
ಜನಪ್ರಿಯ ಶೋಗಳನ್ನು ನಿರೂಪಣೆ ಮಾಡುವ ಭಾರತಿ ತುಂಬು ಗರ್ಭಿಣಿಯಾಗಿದ್ದಾಗಲೂ ಹೆರಿಗೆ ವರೆಗೂ ಆ್ಯಕ್ಟಿವ್ ಆಗಿರಲು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ ಎಂದು ತಿಳಿಸಿದ್ದರು.