BellaryDistrictsKarnatakaLatestMain Post

ಸಮಾವೇಶಕ್ಕೂ ಮುನ್ನವೇ ದೇವರ ಮೊರೆ ಹೋದ ಕಾಂಗ್ರೆಸ್‌ ನಾಯಕರು- ಬಳ್ಳಾರಿಯಲ್ಲಿ ಹೋಮ

ಬಳ್ಳಾರಿ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಯು (Bharat Jodo Yatra) ಅ. 17ರಂದು ಬಳ್ಳಾರಿಗೆ ಬರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ (Congress) ಕಾರ್ಯಕರ್ತರಿಂದ ಮುನ್ಸಿಪಲ್ ಮೈದಾನದಲ್ಲಿ ಹೋಮ ಮಾಡಲಾಯಿತು.

ಈಗಾಗಲೇ ರಾಹುಲ್ ಗಾಂಧಿ ಪಾದಯಾತ್ರೆ ರಾಜ್ಯವನ್ನು ಪ್ರವೇಶ ಮಾಡಿದೆ. ಅಕ್ಟೋಬರ್ 18ರಂದು ಗಣಿನಾಡು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಮಾಡಲು ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಮುನ್ಸಿಪಲ್ ಮೈದಾನದಲ್ಲಿ ಹೋಮ ಮಾಡಲಾಯಿತು.

ಸಮಾವೇಶಕ್ಕೂ ಮುನ್ನವೇ ದೇವರ ಮೊರೆ ಹೋದ ಕಾಂಗ್ರೆಸ್‌ ನಾಯಕರು- ಬಳ್ಳಾರಿಯಲ್ಲಿ ಹೋಮ

ಸಮಾವೇಶ ಯಶಸ್ವಿಗೆ ಸುದರ್ಶನ ಹೋಮ ಮಾಡಿದ್ದು, ಪಾದಯಾತ್ರೆ ಮತ್ತು ಸಮಾವೇಶ ನಿರ್ವಿಘ್ನವಾಗಿ ನಡೆಯಲೆಂದು ಹೋಮ ಮಾಡಲಾಗಿದೆ. ಇಂದು ಬೆಳಗಿನ ಜಾವ ಆರಂಭವಾದ ಸುದರ್ಶನ ಹೋಮದಲ್ಲಿ ಸ್ಥಳ ಶುದ್ಧಿ ಮಾಡೋ ಮೂಲಕ ಕೃಷ್ಣ ಮಠದ ಪುರೋಹಿತ ನಾಗರಾಜ್ ನೇತೃತ್ವದಲ್ಲಿ ವಿಶೇಷ ಈ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರಿಂದ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಾ – ಬೊಮ್ಮಾಯಿಗೆ ಸಿದ್ದು ತಿರುಗೇಟು

ಸಮಾವೇಶಕ್ಕೂ ಮುನ್ನವೇ ದೇವರ ಮೊರೆ ಹೋದ ಕಾಂಗ್ರೆಸ್‌ ನಾಯಕರು- ಬಳ್ಳಾರಿಯಲ್ಲಿ ಹೋಮ

KPCC ಕಾರ್ಯದರ್ಶಿ ಆಂಜನೇಯಲು ಅವರ ನೇತೃತ್ವದಲ್ಲಿ ಹೋಮ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮೇಯರ್ ರಾಮೇಶ್ವರಿ ಹಾಗೂ ಹಲವು ಕಾಂಗ್ರೆಸ್‌ನ ಹಿರಿಯ ಮುಖಂಡರು ಭಾಗಿಯಾಗಿದ್ದರು. ಗಣಿನಾಡು ಬಳ್ಳಾರಿಗೆ ಅ. 17ಕ್ಕೆ ಬರುವ ನಿರೀಕ್ಷೆಯಿದ್ದು, 18 ರಂದು ಬೃಹತ್ ಸಮಾವೇಶ ನಡೆಯುತ್ತಿದೆ. ಹೀಗಾಗಿ ಸಮಾವೇಶಕ್ಕೂ ಮುನ್ನವೇ ಕೈ ನಾಯಕರು ದೇವರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಮತ್ತೊಂದು ಧರ್ಮ ದಂಗಲ್ – ಮದರಸಾ ಬ್ಯಾನ್‍ಗೆ ಹಿಂದೂ ಸಂಘಟನೆಗಳಿಂದ ಒತ್ತಾಯ

Live Tv

Leave a Reply

Your email address will not be published. Required fields are marked *

Back to top button