ಬೆಂಗಳೂರು: ಕಬಡ್ಡಿ ಪಂದ್ಯಾವಳಿ ವೇಳೆ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಜಿ. ಪರಮೇಶ್ವರ್ (G Parameshwar) ವಿರುದ್ಧ ಎಫ್‌ಐಆರ್ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಏನಿದು ಪ್ರಕರಣ?
ಚಿಕ್ಕೋಡಿ vs ವಿಜಯಪುರ ನಡುವೆ ಕಬಡ್ಡಿ ಪಂದ್ಯಾವಳಿ (Kabaddi Tournament) ನಡೆಯುತ್ತಿತ್ತು. ಈ ವೇಳೆ ಚಿಕ್ಕೋಡಿ ತಂಡ ಗೆಲ್ಲುವುದಾಗಿ ಪರಮೇಶ್ವರ್ ಅವರು 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದರು. ವಿಜಯಪುರ ತಂಡ ಗೆದ್ದ ಬಳಿಕ ಡಿಸಿಗೆ 500 ರೂಪಾಯಿ ಹಣ ನೀಡಿದ್ರು ಸಚಿವರು. ಇದನ್ನೂ ಓದಿ: ಇನ್‌ಸ್ಪೆಕ್ಟರ್‌ಗೆ ಕಿರುಕುಳ ಆರೋಪ – ವರದಿ ನೀಡಲು ಸೂಚಿಸಿದ್ದೇನೆ: ಪರಮೇಶ್ವರ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ನಾಗಭೂಷಣ್ ಎಂಬುವವರು ಕೋರ್ಟ್‌ಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್, ಗೃಹಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಸೂಚನೆ ನೀಡಿದೆ. ಇದನ್ನೂ ಓದಿ: ಕೇರಳ | ತ್ರಿಶೂರ್ ಪೂರಂ ಉತ್ಸವಕ್ಕೆ ಸಿಡಿಮದ್ದು ತಯಾರಿಸುತ್ತಿದ್ದ ಸ್ಥಳದಲ್ಲಿ ಭಾರೀ ಸ್ಫೋಟ – 13 ಮಂದಿ ಸಾವು



