ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಡರ್ ಹೆಡ್ ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ.
ಹೈದರಾಬಾದ್ ಮೂಲದ ಟೆಕ್ಕಿ ಎಲ್.ಸಾಯಿಕೃಷ್ಣ ಬಂಧಿತ ಆರೋಪಿ. ಕಳೆದ ವರ್ಷ ಫೆಬ್ರವರಿ 26ರಂದು ಟೆಕ್ಕಿ ಸಾಯಿಕೃಷ್ಣ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಆಫರ್ಸ್ ನಿಯರ್ ಬೈ ಎಂಬ ಮೊಬೈಲ್ ಅಪ್ಲಿಕೇಶನ್ ಬ್ರಾಂಡ್ ಅಂಬಾಸಿಡರ್ ಆಗುವಂತೆ ಟಾಲಿವುಡ್ ಸ್ಟಾರ್ ನಟ ವಿಜಯ ದೇವರಕೊಂಡ ಅವರಿಗೆ ಸುಳ್ಳು ಮಾಹಿತಿ ನಮೂದಿಸಿ ರಿಜಿಸ್ಟರ್ ಪೋಸ್ಟ್ ಮಾಡಿದ್ದ.
Advertisement
Advertisement
ತನ್ನ ಅಪ್ಲೀಕೇಶನ್‍ಗೆ ಬ್ರಾಂಡ್ ಅಂಬಾಸಿಡರ್ ಆಗುವಂತೆ ತೆಲುಗು ನಟ ವಿಜಯದೇವರ ಕೊಂಡ ಅವರಿಗೆ ಪತ್ರ ಬರೆದಿದ್ದ ಟೆಕ್ಕಿ, ಇದಕ್ಕೆ ಇನ್ಫೋಸಿಸ್ ಸುಧಾಮೂರ್ತಿ ಫೋರ್ಜರಿ ಸಹಿ ಮಾಡಿ ಪೋಸ್ಟ್ ಮಾಡಿದ್ದ. ಆದ್ದರಿಂದ ಆರೋಪಿ ವಿರುದ್ಧ ಕ್ರಮ ಕ್ರಮಕೈಗೊಳ್ಳುವಂತೆ ಇನ್ಫೋಸಿಸ್ ಪೌಂಡೇಷನ್ ಕಚೇರಿಯ ಲೆ.ಕರ್ನಲ್ ರಮೇಶ್ ಪೊಲೀಸರಿಗೆ ದೂರು ನೀಡಿದ್ದರು.
Advertisement
Advertisement
ದೂರಿನ ಹಿನ್ನೆಲೆ ಐಪಿಸಿ ಸೆಕ್ಸನ್ 419, 465, 471, 468 ಅಡಿ ಪ್ರಕರಣ ದಾಖಲಾಗಿತ್ತು. ಸುಧಾಮೂರ್ತಿ ಅವರು ಸೈನ್ ಹಾಕಿ ಕಳಿಸಿದ್ದಾರೆ ಎಂದರೆ ವಿಜಯ್ ದೇವರಕೊಂಡ ಒಪ್ಪಿಕೊಳ್ಳುತ್ತಾರೆ ಎಂಬ ದೃಷ್ಟಿಯಲ್ಲಿ ಲೆಟರ್ ಹೆಡ್ ತಯಾರಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.