Bengaluru City
ಮಳೆಯಿಂದ ಚರಂಡಿ ಒಳಗೆ ಬಿದ್ದ ಶ್ವಾನವನ್ನು ರಕ್ಷಿಸಿದ ರೆಸ್ಕ್ಯೂ ಟೀಮ್

ಬೆಂಗಳೂರು: ಮಳೆಯಿಂದ ಚರಂಡಿಗೆ ಒಳಗೆ ಬಿದ್ದ ಶ್ವಾನವನ್ನು ಸಿವಿಲ್ ಡಿಫೆನ್ಸ್ ಕ್ವಿಕ್ ರೆಸ್ಕ್ಯೂ ಟೀಮ್ ರಕ್ಷಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಒಂದೇ ಸಮನೆ ಸುರಿದ ಮಳೆಯಿಂದ ತಪ್ಪಿಸಿಕೊಳ್ಳಲು ಹೋಗಿ ವಿದ್ಯಾರಣ್ಯಪುರದಲ್ಲಿ ನಾಯಿಯೊಂದು ತೆರೆದ ಸ್ಲ್ಯಾಬ್ ನಿಂದಾಗಿ ಚರಂಡಿ ಒಳಗೆ ಹೋಗಿದೆ. ನಂತರ ಮೇಲೆ ಬರಲಾರದೇ ಸುಮಾರು ಎರಡು ಗಂಟೆ ಒದ್ದಾಡಿದೆ.
ಇದನ್ನು ಕಂಡ ಸ್ಥಳೀಯರು ಕೊನೆಗೆ ಸಿವಿಲ್ ಡಿಫೆನ್ಸ್ ಕ್ವಿಕ್ ರೆಸ್ಕ್ಯೂ ಟೀಮ್‍ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಟೀಮ್ ಡ್ರೈನೇಜ್‍ನಲ್ಲಿ ಒದ್ದಾಡಿ ಗೋಳಿಡುತ್ತಿದ್ದ ನಾಯಿಯನ್ನು ಅರ್ಧಗಂಟೆ ಕಾರ್ಯಚರಣೆ ಮಾಡಿ ರಕ್ಷಿಸಿದ್ದಾರೆ. ಚರಂಡಿಯಿಂದ ಹೊರ ಬರುತ್ತಿದ್ದಂತೆ ನಾಯಿ ಖುಷಿಯಿಂದ ರಕ್ಷಿಸಿದ ಟೀಮ್ ನತ್ತ ಕೃತಜ್ಞತಾ ದೃಷ್ಟಿ ಬೀರಿದೆ.
