ಬೆಳಗಾವಿ:ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯದ್ದೇ ಸದ್ದು. ಇದರ ಬೆನ್ನಲ್ಲೇ ಗಡಿ ಜಿಲ್ಲೆ ಬೆಳಗಾವಿಯ ಕಾಂಗ್ರೆಸ್ (Belagavi Congress) ಶಾಸಕರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ಹೊಸ ದಾಳ ಉರುಳಿಸಿದ್ದಾರೆ. ಬೆಳಗಾವಿ ಜಿಲ್ಲೆಗೆ ಎರಡಲ್ಲ, ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಬಿಗಿಪಟ್ಟು ಮುಂದುವರಿಸಿದ್ದಾರೆ.
ತಮಗೆ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ನೀಡಲಾಗಿತ್ತು, ಹೀಗಾಗಿ ಕಾಂಗ್ರೆಸ್ ಸರ್ಕಾರದಲ್ಲೂ ಕನಿಷ್ಠ ಮೂರು ಸ್ಥಾನ ಬೇಕೇ ಬೇಕು ಎನ್ನುವುದು ಈ ನಾಯಕರ ವಾದ. ಈ ಮೂರು ಸಚಿವ ಸ್ಥಾನಗಳ ಬೇಡಿಕೆಯ ಹಿಂದೆ ಬೆಳಗಾವಿ ಕಾಂಗ್ರೆಸ್ ನಾಯಕರ ದೊಡ್ಡ ರಾಜಕೀಯ ತಂತ್ರಗಾರಿಕೆ ಅಡಗಿದೆ
ರಾಜಕೀಯ ಮೂಲಗಳ ಪ್ರಕಾರ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ನಾಯಕ ಲಕ್ಷ್ಮಣ ಸವದಿ(Laxman Savadi) ಅವರಿಗೆ ಸಚಿವ ಸ್ಥಾನ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹೈಕಮಾಂಡ್ ಮಟ್ಟದಲ್ಲಿ ಅಥವಾ ಜಾತಿ ಸಮೀಕರಣದಲ್ಲಿ ಲಕ್ಷ್ಮಣ ಸವದಿ ಅವರಿಗೆ ಮಂತ್ರಿಗಿರಿ ಕೈತಪ್ಪಿದರೆ, ತಮ್ಮ ಆಪ್ತ ವಲಯದ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರಿಗೆ ಮತ್ತೊಂದು ಅವಕಾಶ ನೀಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ. ಲಿಂಗಾಯತ ಹಾಗೂ ಮಹಿಳಾ ಕೋಟಾದ ಅಡಿಯಲ್ಲಿ ಹೆಬ್ಬಾಳ್ಕರ್‌ಗೆ ಮಂತ್ರಿಗಿರಿ ಸುಲಭವಾಗಿ ಸಿಗಬಹುದು ಎಂಬ ಲೆಕ್ಕಾಚಾರ ಅವರದ್ದಾಗಿದೆ. ಅಂದರೆ, ಡಿಕೆಶಿ ಕೋಟಾದಲ್ಲಿ ಸವದಿ ಅಥವಾ ಹೆಬ್ಬಾಳ್ಕರ್ ಪೈಕಿ ಒಬ್ಬರಿಗೆ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಕೇರಳ ಸಿಎಂ
ವಾಗ ಜಿಲ್ಲೆಗೆ ಮೂರು ಸ್ಥಾನಗಳು ಸಿಗುತ್ತವೆ ಎಂಬ ಚರ್ಚೆ ಶುರುವಾಯಿತೋ, ಅಲ್ಲಿಗೆ ಇನ್ನುಳಿದ ಶಾಸಕರಾದ ಅಶೋಕ ಪಟ್ಟಣ್, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಆಸೀಫ್ ಸೇಠ್ ಲೆಕ್ಕಾಚಾರಗಳು ಬಿರುಸುಗೊಂಡಿವೆ.
ಈ ನಾಲ್ಕೂ ಜನ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಅತ್ಯಂತ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಂದು ಸ್ಥಾನ ಡಿಕೆಶಿ ಕೋಟಾಗೆ ಹೋದರೂ, ಜಿಲ್ಲೆಗೆ ಮೂರು ಸ್ಥಾನ ಸಿಕ್ಕರೆ ಉಳಿದ ಎರಡು ಸ್ಥಾನಗಳಲ್ಲಿ ತಮಗೂ ಅವಕಾಶ ಸಿಗಬಹುದು ಎಂಬುದು ಈ ನಾಲ್ವರ ಲೆಕ್ಕಾಚಾರ. ಸಿದ್ದರಾಮಯ್ಯ ಅವರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಹೇಗಾದರೂ ಮಾಡಿ ಮಂತ್ರಿ ಮಂಡಲ ಸೇರಲೇಬೇಕು ಎಂದು ಈ ನಾಯಕರು ಹೊಸ ವರಸೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ – ರಾಜಮನೆತನ, ಪ್ರತಾಪ್ ಸಿಂಹ ವಿರೋಧ, ಅಶೋಕ್ ರೈ ಸಮರ್ಥನೆ
