ಮಳೆಗಾಲದ ಸಂಜೆಗೆ ಬಿಸಿ ಬಿಸಿ ಸ್ನ್ಯಾಕ್ಸ್ ಸವಿಯುವ ಆಸೆಯೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಸೂಪರ್ ರೆಸಿಪಿ! ಸಾಮಾನ್ಯವಾಗಿ ಬದನೆಕಾಯಿ ಎಂದರೆ ಇಷ್ಟಪಡದಿರುವವರೇ ಹೆಚ್ಚು. ಆದರೆ ಅದೇ ಬದನೆಕಾಯಿಯಿಂದ ಗರಿಗರಿಯಾದ, ಬಾಯಿಯಲ್ಲಿ ನೀರೂರಿಸುವ ‘ಬದನೆಕಾಯಿ ಬಜ್ಜಿ’ (Baingan Ke Pakore) ಮಾಡಿದರೆ ಪ್ಲೇಟ್ ಖಾಲಿಯಾಗುವುದು ಗ್ಯಾರಂಟಿ.

ಬೇಕಾಗುವ ಪದಾರ್ಥಗಳು:
ಬದನೆಕಾಯಿ
ಕಡಲೆ ಹಿಟ್ಟು
ಅರಿಶಿನ ಪುಡಿ:
ಜೀರಿಗೆ ಪುಡಿ
ಧನಿಯಾ ಪುಡಿ
ಇಂಗು
ಕರಿಬೇವು
ಉಪ್ಪು
ಎಣ್ಣೆ

ಮಾಡುವ ವಿಧಾನ:
ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ತೆಳುವಾದ ಮತ್ತು ವೃತ್ತಾಕಾರದಲ್ಲಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಹೆಚ್ಚಿದ ಕರಿಬೇವು, ಅರಿಶಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ಗಂಟಿಲ್ಲದಂತೆ ಮಧ್ಯಮ ಹದಕ್ಕೆ (ಬಜ್ಜಿ ಹಿಟ್ಟಿನ ಹದಕ್ಕೆ) ಕಲಸಿಕೊಳ್ಳಿ. ಇದನ್ನೂ ಓದಿ: ವೀಕೆಂಡ್ ಸ್ಪೆಷಲ್ – ತಿಂಡಿಗೆ ಆರೋಗ್ಯಕರ ಸ್ಟಫ್ಡ್ ಪಾಲಕ್ ಇಡ್ಲಿ ಮಾಡಿ

