ಬೆಂಗಳೂರು: ಧಾರವಾಡ (Dharwad) ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda Murder Case) ತೀರ್ಪು ನಮ್ಮ ಪರ ಬರದಿದ್ರೆ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರ ಹಾಗೂ ಯೋಗೇಶ್ ಆಪ್ತ ಬಸವರಾಜ್ ಕೊರವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಒಂಬತ್ತುವರೆ ವರ್ಷಗಳ ಕಾಲ ಹೋರಾಟ ನಡಿಸಿದ್ದೇವೆ. ಇವತ್ತು ತೀರ್ಪು ಬರಲಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇದೆ. ಯೋಗೇಶ್ ಗೌಡ ಕೊಲೆಗೆ ನ್ಯಾಯ ಸಿಗಲಿದೆ ಎಂದಿದ್ದಾರೆ. ಇದನ್ನೂ ಓದಿ: ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ: ತೀರ್ಪಿಗೂ ಮುನ್ನ ವಿನಯ್ ಕುಲಕರ್ಣಿ ರಿಯಾಕ್ಷನ್
ಈ ಪ್ರಕರಣದಲ್ಲಿ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸಿಬಿಐ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸಿತ್ತು. ಇದು ಅತ್ಯಂತ ವಿಶೇಷ ಪ್ರಕರಣವಾಗಿದ್ದು, ಜಿಲ್ಲಾ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ. ಈಗ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಬರುತ್ತಿದೆ.
ತೀರ್ಪು ಬರಲಿ, ತೀರ್ಪು ಬಂದ ಬಳಿಕ ಏನಾಗಲಿದೆ ಎಂದು ನೋಡುತ್ತೇವೆ. ತೀರ್ಪು ನಮ್ಮ ಪರವಾಗಿ ಬರದೇ ಇದ್ರೇ ನಮ್ಮ ಹೋರಾಟ ಮತ್ತೆ ಮುಂದುವರೆಯಲಿದೆ ಎಂದಿದ್ದಾರೆ. ಇದನ್ನೂ ಓದಿ: ತಂದೆ ಮಗನ ಲಾಕಪ್ ಡೆತ್ ಕೇಸ್ – ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

