ಬೆಂಗಳೂರು: ಆರ್ ಎಸ್‍ಎಸ್ (RSS) ನಿಷೇಧಿಸಲಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommi) ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಂಘಸಂಸ್ಥೆ ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಒಂದು ಸಮುದಾಯದ ತುಷ್ಠೀಕರಣಕ್ಕೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಯಾರನ್ನು ತುಷ್ಠೀಕರಣ ಮಾಡ್ತಿದ್ದಾರೋ, ಅವರನ್ನೂ ಯಾಮಾರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಆರ್ ಎಸ್‍ಎಸ್, ಬಜರಂಗದಳ (Bajrangdal) ನಿಷೇಧದ ಬಗ್ಗೆ ಸಿಎಂ ಅವರು ತಮ್ಮ ಅಭಿಪ್ರಾಯ, ನಿಲುವು ಸ್ಪಷ್ಟಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತ ಜನತೆಗೆ ತಿಳಿಸಲಿ. ಆರ್ ಎಸ್‍ಎಸ್ ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ. ಇಂತಹ ಸಾಹಸಕ್ಕೆ ಕೈಹಾಕಿದವರನ್ನು ಜನ ಈಗಾಗಲೇ ಮನೆಗೆ ಕಳಿಸಿದ್ದಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: RSS ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ: ನಳಿನ್ ಕುಮಾರ್ ಕಟೀಲ್
Advertisement
ನೂತನ ಸರ್ಕಾರ ರಚನೆಯಾಗಿದೆ, ಎಂಟು ಜನ ಸಚಿವರಾಗಿದ್ದಾರೆ. ಈ ಸಚಿವರು ರಾಜ್ಯ, ಜನರ ಹಿತದೃಷ್ಟಿಯಿಂದ ಮಾತಾಡ್ತಿಲ್ಲ. ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಬದಲು ದ್ವೇಷದ ರಾಜಕಾರಣವೇ ಈ ಸರ್ಕಾರಕ್ಕೆ ಪ್ರಮುಖವಾಗಿದೆ. ಅವರು ಏನೇ ಕೇಸ್ ಹಾಕಿದರೂ ಸಮರ್ಥವಾಗಿ ಎದುರಿಸುತ್ತೇವೆ. ಹಿಂದೆನೂ ಅವರು ಕೇಸ್ ಗಳನ್ನು ಹಾಕಿದ್ರು. ಒಂದು ಚುನಾಯಿತ ಸರ್ಕಾರದ ಎದುರು ಹಲವು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡುವ ವಿಚಾರ ಎಲ್ಲೂ ಕಾಣ್ತಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಪ್ರಯತ್ನ ಆಗಿಲ್ಲ ಎಂದರು.
Advertisement
ಸಿಎಂ ಆಯ್ಕೆ ವಿಚಾರ, ಭಿನ್ನಾಭಿಪ್ರಾಯ ಗಮನಿಸಿದ್ದೇನೆ. ಅವರಲ್ಲಿರುವ ಎರಡು ಬಣಗಳು, ಮಂತ್ರಿಗಳ ಆಯ್ಕೆಯಲ್ಲಿ ಗೊಂದಲ ಎಲ್ಲ ನೋಡುತ್ತಿದ್ದೇನೆ. ಇದು ಎಲ್ಲೋ ಒಂದು ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ರೀತಿ ಇದೆ. ಒಂದೇ ಪಕ್ಷದಲ್ಲಿ ಸಮ್ಮಿಶ್ರ ಸರ್ಕಾರ ಇದೆ ಅನಿಸ್ತಿದೆ. ಕಳೆದ ಸಮ್ಮಿಶ್ರ ಸರ್ಕಾರವು ಲೋಕಸಭೆ ಚುನಾವಣೆವರೆಗೆ ಮಾತ್ರ ಇತ್ತು. ಈ ಸಮ್ಮಿಶ್ರ ಸರ್ಕಾರವೂ ಲೋಕಸಭೆ ಚುನಾವಣೆ ವರೆಗೆ ಮಾತ್ರ ಇರುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ಬಗ್ಗೆ ಬೊಮ್ಮಾಯಿ ಭವಿಷ್ಯ ನುಡಿದರು.