Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜಮೀರ್‌ಗೆ ದೇಶ, ರಾಜ್ಯ ಬೇಡ, ತಮ್ಮ ಜನಸಂಖ್ಯೆ, ಮತದಾರರು ಹೆಚ್ಚಾಗಬೇಕು ಅಂತ ಮನೆ ಕೊಡ್ತಿದ್ದಾರೆ – ಯತ್ನಾಳ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಜಮೀರ್‌ಗೆ ದೇಶ, ರಾಜ್ಯ ಬೇಡ, ತಮ್ಮ ಜನಸಂಖ್ಯೆ, ಮತದಾರರು ಹೆಚ್ಚಾಗಬೇಕು ಅಂತ ಮನೆ ಕೊಡ್ತಿದ್ದಾರೆ – ಯತ್ನಾಳ್

Bengaluru City

ಜಮೀರ್‌ಗೆ ದೇಶ, ರಾಜ್ಯ ಬೇಡ, ತಮ್ಮ ಜನಸಂಖ್ಯೆ, ಮತದಾರರು ಹೆಚ್ಚಾಗಬೇಕು ಅಂತ ಮನೆ ಕೊಡ್ತಿದ್ದಾರೆ – ಯತ್ನಾಳ್

Public TV
Last updated: January 1, 2026 3:44 pm
Public TV
Share
3 Min Read
Basanagouda Patil Yatnal 1
SHARE

– ನಾನು ವಾಪಸ್ ಪಕ್ಷಕ್ಕೆ ಸೇರಬೇಕು ಅಂತ ಬಿಜೆಪಿ ಶಾಸಕರ ಅಭಿಪ್ರಾಯ 

ಬೆಂಗಳೂರು: ಜಮೀರ್‌ಗೆ ದೇಶ, ರಾಜ್ಯ ಬೇಡ, ತಮ್ಮ ಜನಸಂಖ್ಯೆ, ಮತದಾರರು ಹೆಚ್ಚಾಗಬೇಕು ಅಂತ ಮನೆ ಕೊಡ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ.

ಕೋಗಿಲು ಲೇಔಟ್ ಅಕ್ರಮ ನಿವಾಸಗಳಿಗೆ ಸರ್ಕಾರದಿಂದ ಮನೆ ಕೊಡ್ತಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅವರೆಲ್ಲಾ ಮುಸ್ಲಿಂ ಇದ್ದಾರೆ ಅಂತ ಜಮೀರ್ ಮಾತಾಡ್ತಾ ಇದ್ದಾರೆ. ಜಮೀರ್‌ಗೆ ದೇಶ, ರಾಜ್ಯ ಬೇಕಾಗಿಲ್ಲ. ತಮ್ಮ ಜನಸಂಖ್ಯೆ, ತಮ್ಮ ಮತದಾರರು ಹೆಚ್ಚಾಗಬೇಕು. ಈ ದೇಶವನ್ನು ಆದಷ್ಟು ಬೇಗ ಇಸ್ಲಾಂಮೀಕರಣ ಮಾಡಬೇಕು ಅಂತ ಟಾರ್ಗೆಟ್ ಬಿಟ್ಟರೆ, ಅವರ ತಲೆಯಲ್ಲಿ ಏನು ಇರಲ್ಲ. ದುರ್ದೈವ ಅಂದರೆ ಸಿದ್ದರಾಮಯ್ಯ ಅಂತಹವರು ಜಾತ್ಯಾತೀತ ಅನ್ನೋ ಹೆಸರಿನಿಂದ ಮುಸ್ಲಿಂ ತುಷ್ಟೀಕರಣ ಮಾಡೋದು ಬಿಟ್ಟು ಬೇರೆ ಜನರ ಸಮಸ್ಯೆ ಗೊತ್ತಿಲ್ಲ. ಹೀಗಾಗಿ ಇಂತಹ ನಿರ್ಣಯ ಆಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆ ಮುಟ್ಟಿದೆ. ಸಿದ್ದರಾಮಯ್ಯ ನಿಜವಾದ ಕನ್ನಡಿಗರು, ಮೂಲ ನಿವಾಸಿಗಳಿಗೆ ವಸತಿ ಕೊಡೋದು ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂಗೆ ವಾರ್ನಿಂಗ್ ಮಾಡಿದ್ದರಿಂದ ಲೋಕಲ್ ಅಲ್ಲದೆ ಇರುವವರಿಗೆ ಮನೆ ಕೊಡ್ತಾ ಇದ್ದಾರೆ. ಅವರೆಲ್ಲಾ ಯಾವ ದೇಶದವರು ಅಂತ ತನಿಖೆ ಮಾಡದೇ ವೋಟ್ ಬ್ಯಾಂಕ್ ಸಲುವಾಗಿ ಸರ್ಕಾರ ಮನೆ ಕೊಡುವ ನಿರ್ಧಾರ ಮಾಡ್ತಿದೆ. ಇದನ್ನ ನಾವು ವಿರೋಧ ಮಾಡ್ತೀವಿ. ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಇದ್ದಾರೆ ಅವರನ್ನ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಗಿಲು ಲೇಔಟ್‌ನಲ್ಲಿ ಇರೋರು ಎಲ್ಲರೂ ಬಾಂಗ್ಲಾದೇಶದವರೇ: ಅಶ್ವಥ್ ನಾರಾಯಣ

ದಶಕಗಳಿಂದ ಉತ್ತರ ಕರ್ನಾಟಕದ ಜನ ಕೂಲಿ-ನಾಲಿ, ಜೀವನ ಮಾಡಲು ಬೆಂಗಳೂರು ಬಂದವರಿಗೆ ಪುನರ್ ವಸತಿ ಕಲ್ಪಿಸಬೇಕು. ಆದರೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆಬಾಗಿ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಈ ಸರ್ಕಾರ ಮಾಡ್ತಿದೆ, ಸರ್ಕಾರದ ನಡೆ ಖಂಡಿಸುತ್ತೇನೆ ಅಂತ ಕಿಡಿಕಾರಿದ್ದಾರೆ.

ಅಕ್ರಮ ಬಾಂಗ್ಲಾದೇಶದವರ ಬಗ್ಗೆ ಕೇಂದ್ರ ಸರ್ಕಾರ ತನಿಖೆ ಶುರು ಮಾಡಿತ್ತು. ಈಗ ಯಾಕೆ ನಿಂತಿದೆ ಗೊತ್ತಿಲ್ಲ. ಕೂತು ಚರ್ಚೆ ಮಾಡುವ ಅವಶ್ಯಕತೆ ಇದೆ. ದೇಶದಲ್ಲಿ ಎಸ್‌ಐಆರ್ ನಡೆಯುತ್ತಿದೆ. ತಮಿಳುನಾಡಿನ 1 ಕೋಟಿ ನಕಲಿ ಮತದಾರರು ಸಿಕ್ಕಿದ್ದಾರೆ. ಪಶ್ಚಿಮ ಬಂಗಾಳ ದಲ್ಲಿ 1 ಕೋಟಿ ನಕಲಿ ಮತದಾರರು ಸಿಕ್ಕಿದ್ದಾರೆ. ಕರ್ನಾಟಕದಲ್ಲೂ ನಕಲಿ ಮತದಾರರು, ಬಾಂಗ್ಲಾ, ರೋಹಿಂಗ್ಯಾಗಳ ಇದ್ದಾರೆ. ನಾನು ಈಗಾಗಲೇ ವಿಜಯಪುರ ಡಿಸಿಗೆ ಜಿಲ್ಲೆಯಲ್ಲಿ 19 ಸಾವಿರ ನಕಲಿ ಮತದಾರರು ಇದ್ದಾರೆ ಎಂದು ಮಾಹಿತಿ ಕೊಟ್ಟಿದ್ದೇನೆ. ಕರ್ನಾಟಕದಲ್ಲೂ ಎಸ್‌ಐಆರ್ ಪ್ರಾರಂಭ ಮಾಡಬೇಕು. ನಕಲಿ ಮತದಾರರನ್ನ ಭಾರತದ ಗಡಿಯಿಂದ ಆಚೆ ಹಾಕುವ ಕೆಲಸ ಸರ್ಕಾರ ಮಾಡಬೇಕು. ಅವರು ಹೋಗದೇ ಇದ್ದರೆ ಬಾಂಗ್ಲಾದೇಶದಲ್ಲಿ ಹೇಗೆ ಹಿಂದೂಗಳನ್ನು ಕೊಲೆ ಮಾಡುತ್ತಿದ್ದಾರೆ, ಅದೇ ರೀತಿ ಅನಿವಾರ್ಯವಾಗಿ ಭಾರತದ ಜನರೇ ಅವರನ್ನು ಕೊಲೆ ಮಾಡೋ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ 2026ಕ್ಕೆ ಬಿಜೆಪಿಗೆ ವಾಪಸ್ ಬರ್ತಿರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ನಾನು ವಾಪಸ್ ಬರಬೇಕು ಅಂತ ಅನೇಕ ಶಾಸಕರ ಅಭಿಪ್ರಾಯ ಇದೆ. 2026 ಏನ್ ಆಗುತ್ತೋ ನೋಡಬೇಕು. ಯಾರಿಗೆ ಶುಭ ಸುದ್ದಿ, ಯಾರಿಗೆ ಅಶುಭ ಸುದ್ದಿ ಆಗುತ್ತೋ, ಯಾರು ಮನೆಗೆ ಹೋಗ್ತಾರೋ, ಯಾರು ಮೇಲೆ ಹೋಗ್ತಾರೋ ಗೊತ್ತಿಲ್ಲ ಎಂದಿದ್ದಾರೆ.

ಅನೇಕ ಶಾಸಕರು ಬಿಜೆಪಿಗೆ ಬರಬೇಕು ಅಂತ ಹೇಳ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಬಿಜೆಪಿಗೆ ಬರಬೇಕು ಅಂತ ಕೇಳಿದ್ರು. ಇಲ್ಲದೆ ಹೋದ್ರೆ ಜನರನ್ನು ಆಕರ್ಷಣೆ ಮಾಡದೇ ಇರೋ ವ್ಯಕ್ತಿಯ ಮುಂದೆ ನಾವು ಜೋತು ಬಿದ್ದು ಹಣ ಖರ್ಚು ಮಾಡಿ, ಜನ ಸೇರಿಸಿ ಕಾರ್ಯಕ್ರಮ ಮಾಡೋದ್ರಲ್ಲಿ ಸತ್ತು ಹೋಗಿದ್ದೇವೆ ಎಂದು ಶಾಸಕರು ಹೇಳ್ತಿದ್ದಾರೆ. ನಾನು ಹೋದರೆ ಜನ ದುಡ್ಡು ಇಲ್ಲದೆ ಸೇರುತ್ತಾರೆ. ನಮ್ಮ ಶಾಸಕರಿಗೆ ಈ ವರ್ಷ ಖರ್ಚು ಕಡಿಮೆ ಆಗೋ ವರ್ಷ ಆಗಲಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೋಗಿಲು ಲೇಔಟ್‌ಗೆ ಅಕ್ರಮವಾಗಿ ಜನ ಹೇಗೆ ಬಂದರು ತನಿಖೆ ಆಗಲಿ: ಸುರೇಶ್ ಕುಮಾರ್

TAGGED:Basanagouda Patil Yatnalbengalurubjpcongressಕಾಂಗ್ರೆಸ್ಕೋಗಿಲು ಲೇಔಟ್‌ಬಸನಗೌಡ ಪಾಟೀಲ್ ಯತ್ನಾಳ್ಬಿಜೆಪಿಬೆಂಗಳೂರು
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Nida Khan TCS
Crime

ನಾನು ತುಂಬು ಗರ್ಭಿಣಿ: ಜಾಮೀನಿಗೆ ಕೋರ್ಟ್‌ ಮೊರೆ ಹೋದ ಟಿಸಿಎಸ್‌ ‘ಮತಾಂತರ’ ಆರೋಪಿ ನಿದಾ ಖಾನ್‌

Public TV
By Public TV
23 minutes ago
Harivansh
Latest

ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ್ ಸತತ 3ನೇ ಬಾರಿಗೆ ಅವಿರೋಧ ಪುನರಾಯ್ಕೆ

Public TV
By Public TV
25 minutes ago
CRIME
Bengaluru City

ವಾಸ್ತು ಹೆಸರಲ್ಲಿ ಗರ್ಭಿಣಿಗೆ ಲೈಂಗಿಕ ದೌರ್ಜನ್ಯ  – ಇತ್ತ ಬಟ್ಟೆ ಬಿಚ್ಕೊಂಡು ನಿನ್ಮೇಲೆ ಕೇಸ್ ಹಾಕ್ತೀನಿ, ಮಹಿಳೆಯಿಂದ್ಲೇ ಗುರೂಜಿಗೆ ಬೆದರಿಕೆ

Public TV
By Public TV
30 minutes ago
mahindra car 1
Bengaluru City

ಕುಡಿದು ಬಂದವನಿಗೆ ಟೆಸ್ಟ್ ಡ್ರೈವ್ ನೀಡಿ ಕಾರ್ ಶೋರೂಂ ಸಿಬ್ಬಂದಿ ಎಡವಟ್ಟು – 4 ವಾಹನಗಳಿಗೆ ಡಿಕ್ಕಿ

Public TV
By Public TV
38 minutes ago
Yadagiri Bus Fire
Bengaluru City

ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು – 6 ಮಂದಿ ಸಜೀವ ದಹನ

Public TV
By Public TV
1 hour ago
Dhoni
Cricket

ಸಿಎಸ್‌ಕೆ ಬಸ್ ಹತ್ತಿದ ಧೋನಿ – ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ ತಲಾ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?