Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಾಂಗ್ಲಾದಲ್ಲಿ ಬಿಎನ್‌ಪಿ ಕ್ಲೀನ್‌ ಸ್ವೀಪ್‌| 20 ವರ್ಷದ ಬಳಿಕ ಅಧಿಕಾರಕ್ಕೆ, ಪ್ರಧಾನಿಯಾಗಲಿದ್ದಾರೆ ಖಲೀದಾ ಜಿಯಾ ಪುತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಬಾಂಗ್ಲಾದಲ್ಲಿ ಬಿಎನ್‌ಪಿ ಕ್ಲೀನ್‌ ಸ್ವೀಪ್‌| 20 ವರ್ಷದ ಬಳಿಕ ಅಧಿಕಾರಕ್ಕೆ, ಪ್ರಧಾನಿಯಾಗಲಿದ್ದಾರೆ ಖಲೀದಾ ಜಿಯಾ ಪುತ್ರ

Latest

ಬಾಂಗ್ಲಾದಲ್ಲಿ ಬಿಎನ್‌ಪಿ ಕ್ಲೀನ್‌ ಸ್ವೀಪ್‌| 20 ವರ್ಷದ ಬಳಿಕ ಅಧಿಕಾರಕ್ಕೆ, ಪ್ರಧಾನಿಯಾಗಲಿದ್ದಾರೆ ಖಲೀದಾ ಜಿಯಾ ಪುತ್ರ

Public TV
Last updated: February 13, 2026 9:12 pm
Public TV
Share
2 Min Read
Tarique Rahman 1
SHARE

ಢಾಕಾ: ಬಾಂಗ್ಲಾದೇಶದ 13ನೇ ಲೋಕಸಭಾ ಚುನಾವಣೆಯಲ್ಲಿ (Bangladesh Election Results) ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (BNP) ಕ್ಲೀನ್ ಸ್ವಿಪ್ ಮಾಡಿದೆ. 299 ಕ್ಷೇತ್ರಗಳ ಪೈಕಿ ಬಿಎನ್‌ಪಿ 213 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ.ಇಸ್ಲಾಮಿಸ್ಟ್ ಜಮಾತ್-ಇ-ಇಸ್ಲಾಮಿ (Jamaat-e-Islami) ನೇತೃತ್ವದ 11 ಪಕ್ಷಗಳ ಮೈತ್ರಿಕೂಟ 77 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.

ಮಾಜಿ ಪ್ರಧಾನಿ ದಿವಂಗತ ಖಲೀದಾ ಜಿಯಾ ಪುತ್ರ ತಾರೀಕ್ ರೆಹಮಾನ್ (Tarique Rahman) ಬಾಂಗ್ಲಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ 2006 ರಲ್ಲಿ ಖಲೀದಾ ಜಿಯಾ ಅವರ ಅಧಿಕಾರಾವಧಿ ಕೊನೆಯಾದ 20 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬಂದಿದೆ.

ಶೇಖ್ ಹಸೀನಾ ಪದಚ್ಯುತಿ ಬಳಿಕ ಬಿಎನ್‌ಪಿ ಮೇಲಿದ್ದ ನಿರ್ಬಂಧಗಳು ತೆರವುಗೊಂಡ ಕಾರಣ 17 ವರ್ಷಗಳ ಬಳಿಕ ತಾರೀಖ್ ರೆಹಮಾನ್ ಬಾಂಗ್ಲಾದೇಶಕ್ಕೆ ಮೊದಲ ಭೇಟಿ ನೀಡಿ ಚುನಾವಣಾ ಅಖಾಡದಲ್ಲಿ ಬಿಎನ್‌ಪಿ ಪಕ್ಷವನ್ನ ಇಳಿಸಿದ್ದರು.  ಇದನ್ನೂ ಓದಿ: ರಷ್ಯಾದ ಸುದರ್ಶನ ಚಕ್ರಕ್ಕೆ ಬಲ – 288 ಎಸ್‌-400 ಕ್ಷಿಪಣಿ ಖರೀದಿಗೆ ಮುಂದಾದ ಭಾರತ 

 

ಸದ್ಯ ಪ್ರಚಂಡ ಬಹುಮತ ಪಡೆದಿರುವ ಬಿಎನ್‌ಪಿ ಗೆಲವನ್ನು ಭಾರತ ತುಂಬಾ ತೀಕ್ಷಗಣ್ಣಿನಿಂದ ನೀಡುತ್ತಿದೆ. ಬಾಂಗ್ಲಾ ಫಸ್ಟ್ ಎಂಬ ನೀತಿಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ತಾರೀಖ್ ದಿಲ್ಲಿಯೂ ಇಲ್ಲ, ಪಿಂಡಿಯೂ ಇಲ್ಲ. ಬಾಂಗ್ಲಾ ವಿಕಾಸ ಮೊದಲು ಅಂತ ಹೇಳುವ ಮೂಲಕ ಭಾರತ ಮತ್ತು ಪಾಕಿಸ್ತಾನದೊಂದಿಗಿನ ಸಂಬಂಧಕ್ಕಿಂತ ಬಾಂಗ್ಲಾದೇಶದ ವಿಕಾಸ ಮೊದಲು ಎಂದು ಹೇಳಿದ್ದರು.

 

আমি বাংলাদেশে অনুষ্ঠিত সংসদীয় নির্বাচনে বিএনপিকে নির্ণায়ক বিজয়ের অভিমুখে নেতৃত্ব দেওয়ার জন্য জনাব তারেক রহমানকে আন্তরিক অভিনন্দন জানাই।

এই ফলাফল আপনার নেতৃত্বের প্রতি বাংলাদেশের জনগণের আস্থার প্রতিফলন।

ভারত একটি গণতান্ত্রিক, প্রগতিশীল ও অন্তর্ভুক্তিমূলক বাংলাদেশের পক্ষে তার…

— Narendra Modi (@narendramodi) February 13, 2026

 

ಸದ್ಯ ರೆಹಮಾನ್ ಗೆಲುವಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ಇದಕ್ಕೂ ಮೊದಲು ತಾರೀಖ್ ತಾಯಿ ಖಲೀದಾ ಜಿಯಾ ಮೃತಪಟ್ಟಾಗ ಖುದ್ದು ವಿದೇಶಾಂಗ ಸಚಿವ ಜೈಶಂಕರ್ ಬಾಂಗ್ಲಾಗೆ ಹೋಗಿ ತಾರೀಖ್ ಭೇಟಿ ಮಾಡಿ ಬಂದಿದ್ದರು. ಇವು ಢಾಕಾ ಮತ್ತು ದೆಹಲಿ ಬಾಂಧವ್ಯ ಗಟ್ಟಿಯಾಗುವ ಸೂಚನೆ ನೀಡಿದ್ದವು. ಇದನ್ನೂ ಓದಿ: 4 ಕಾರುಗಳಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಇಸ್ಲಾಂಗೆ ಮತಾಂತರಕ್ಕೆ ಬ್ಲ್ಯಾಕ್‌ಮೇಲ್‌

ಜುಲೈ 2024 ರ ದಂಗೆಯ ನಂತರದ ಮೊದಲ ಚುನಾವಣೆ ಗುರುವಾರ ನಡೆದಿತ್ತು. 17 ಕೋಟಿ ಜನಸಂಖ್ಯೆ ಹೊಂದಿರುವ ಬಾಂಗ್ಲಾದಲ್ಲಿ 12.7 ಕೋಟಿ ಜನರು ಮತದಾನದಲ್ಲಿ ಭಾಗವಹಿಸಿದ್ದರು. 299 ಲೋಕಸಭಾ ಕ್ಷೇತ್ರಗಳಿಗೆ 1,981 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಭ್ಯರ್ಥಿಯೊಬ್ಬರ ಮರಣದಿಂದಾಗಿ ಒಂದು ಕ್ಷೇತ್ರದ ಮತದಾನವನ್ನು ರದ್ದುಪಡಿಸಲಾಯಿತು.
TAGGED:Bangladesh ElectionBNPTarique Rahmanಚುನಾವಣೆಢಾಕಾತಾರೀಕ್ ರೆಹಮಾನ್ಬಾಂಗ್ಲಾದೇಶಬಿಎನ್‌ಪಿ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Patahi Airport
Latest

ಬಿಹಾರದಲ್ಲಿ ಮತ್ತೊಂದು ಏರ್‌ಪೋರ್ಟ್‌ ನಿರ್ಮಾಣ – ಶೀಘ್ರದಲ್ಲೇ ವಿಮಾನ ಸೇವೆ ಆರಂಭ

Public TV
By Public TV
13 minutes ago
a man from Belthangady who was going to sabarimala temple fell from the train and died in kerala
Dakshina Kannada

ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿ ರೈಲಿನಿಂದ ಬಿದ್ದು ದುರ್ಮರಣ

Public TV
By Public TV
19 minutes ago
Donald Trump Asim Munir Shehbaz Sharif
Latest

ಅಮೆರಿಕದ ವಿರುದ್ಧ ಮುನೀರ್‌ ಡಬಲ್‌ಗೇಮ್‌ – ಟ್ರಂಪ್‌ಗೆ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ

Public TV
By Public TV
36 minutes ago
Davanagere Kavya Murder Case
Crime

ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

Public TV
By Public TV
48 minutes ago
Pahalgam QR Code IdentificationS
Latest

ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

Public TV
By Public TV
2 hours ago
pm modi meeting
Latest

ದೇಶವನ್ನು ಉದ್ದೇಶಿಸಿ ಭಾಷಣ – ಮೋದಿ ವಿರುದ್ಧ ಕಾಂಗ್ರೆಸ್‌, ಸಿಪಿಎಂನಿಂದ ದೂರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?