ರಾಮನಗರ: ಕಂಚುಗಲ್ ಬಂಡೇಮಠ (BandeMutt) ಶ್ರೀ ಆತ್ಮಹತ್ಯೆ ಪ್ರಕರಣವು ದಿನಕ್ಕೊಮದು ತಿರುವು ಪಡೆದುಕೊಳ್ಳುತ್ತಿದೆ. ಕಾವಿಯಿಂದಲೇ ಕಾವಿಗೆ ಖೆಡ್ಡಾ ತೋಡಿರುವ ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ನೀಲಾಂಬಿಕೆ (Neelambike) ಅಲಿಯಾಸ್ ಚಂದು ಮೋಹಕ್ಕೆ ಬಂಡೇಮಠ ಶ್ರೀ ಬಿದ್ದಿದ್ದಾರೆ. ಕಣ್ಣೂರು ಶ್ರೀ, ನೀಲಾಂಬಿಕೆ, ಮಹದೇವಯ್ಯ ಮೊಬೈಲ್ (Mobile) ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ನೀಲಾಂಬಿಕೆ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಶಾಕ್ ಆಗಿದೆ. ನೀಲಾಂಬಿಕೆ ಮೊಬೈಲ್‍ನಲ್ಲಿ ಸ್ಫೋಟಕ ರಹಸ್ಯ ವೀಡಿಯೋ ಲಭ್ಯವಾಗಿರುವ ಮಾಹಿತಿ ಲಭಿಸಿದೆ.
Advertisement
Advertisement
ನೀಲಾಂಬಿಕೆ ಫೋನ್‍ನಲ್ಲಿ ಮಠಾಧೀಶರು, ಪ್ರಭಾವಿಗಳ ಮೊಬೈಲ್ ನಂಬರ್ ದೊರೆತಿದೆ. ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್ ಮಾಡಲಾಗುತ್ತಿತ್ತು. ಪ್ರತಿನಿತ್ಯ ಎಲ್ಲರಿಗೂ ಬೆಳಗ್ಗಿನ ವಂದನೆ ಹಾಗೂ ಶುಭರಾತ್ರಿ ಮೆಸೇಜ್ ಕಳುಹಿಸಲಾಗುತ್ತಿತ್ತು. ಬಸವಲಿಂಗಶ್ರೀಗಳ ಜೊತೆ ನೀಲಾಂಬಿಕೆ ಆಡಿಯೋ ಹಾಗೂ ವಿಡಿಯೋ ಕಾಲ್ ಮಾಡಲಾಗುತ್ತಿತ್ತು. ಇದನ್ನೂ ಓದಿ: ಬಂಡೆ ಶ್ರೀ ಪ್ರಖ್ಯಾತಿಯನ್ನು ಸಹಿಸದೇ ಹನಿಟ್ರ್ಯಾಪ್ – ಕಣ್ಣೂರು ಶ್ರೀ ಕುತಂತ್ರ ಬಯಲು
Advertisement
ಬಸವಲಿಂಗ ಸ್ವಾಮೀಜಿ (Basavalinga Swmiji) ಗೆ ನೀಲಾಂಬಿಕೆ ಪ್ರತಿನಿತ್ಯ ಮೆಸೇಜ್ ಮಾಡುತ್ತಿದ್ದಳು. ಒಂದೊಂದು ಮೆಸೇಜ್ ಮಾಡಿ ಪರಿಚಯವಾಗಿದ್ದಾಳೆ. ನಾನು ಸಹ ಮಠದ ಭಕ್ತೆ, ನನಗೆ ಸನ್ಯಾಸತ್ವದ ಬಗ್ಗೆ ಮಾಹಿತಿ ಇದೆ. ನನಗೆ ಸನ್ಯಾಸತ್ವದ ದೀಕ್ಷೆ ಕೊಡಿ ಎಂದಿದ್ದಳು. ದಿನ ಕಳೆದಂತೆ ಸ್ನೇಹ, ಗೆಳತನ ಹೆಚ್ಚಾಗಿ ವಾಟ್ಸಪ್ ಕಾಲ್‍ನಲ್ಲಿ ಸಂಭಾಷಣೆ ಬಳಿಕ ವೀಡಿಯೋ ಕಾಲ್‍ನಲ್ಲಿ ಮಾತು ಆರಂಭವಾಗಿದೆ. ನಂತರ ಎಲ್ಲಾ ರೆಕಾರ್ಡ್ ಮಾಡಿ ಬಲೆಗೆ ಸ್ಕೆಚ್ ಹಾಕಲಾಗಿದೆ. ಇದನ್ನೂ ಓದಿ: ಬಂಡೆ ಶ್ರೀಗೆ ಖೆಡ್ಡಾ ತೋಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅರೆಸ್ಟ್
ಮೊದ ಮೊದಲಿಗೆ 500, 1000 ಸಹಾಯ ಕೇಳ್ತಿದ್ದ ನೀಲಾಂಬಿಕೆ, ಶ್ರೀಗಳ ನಗ್ನ ವೀಡಿಯೋ ಹಾಗೂ ಏಕಾಂತದ ವೀಡಿಯೋ ಸೆರೆ ಹಿಡಿದಿದ್ದಾಳೆ. ವೀಡಿಯೋ ಮಾಡಿದ ಬಳಿಕ ಕೋಟಿ ಕೋಟಿಗೆ ಬ್ಲಾಕ್‍ಮೇಲ್ ಶುರು ಮಾಡಿದ್ದಾಳೆ. ನಂತರ ವೀಡಿಯೋವನ್ನು `ಆ’ ನಾಯಕನಿಗೆ ಕಳಿಸಿದ್ದಾಳೆ ಎಂಬ ಮಾಹಿತಿ ದೊರಕಿದೆ. ಒಟ್ಟಿನಲ್ಲಿ ನೀಲಾಂಬಿಕೆಯನ್ನು ಬಳಸಿಕೊಂಡೇ ಬಸವಲಿಂಗಾಶ್ರೀಗೆ ಕಣ್ಣೂರು ಶ್ರೀ ಖೆಡ್ಡಾ ತೋಡಿದ್ದಾರೆ ಎನ್ನಲಾಗಿದೆ.