ಬೆಂಗಳೂರು: ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವದಲ್ಲಿ ನೀರಾನೆಯೊಂದು (Hippopotamus) ಮುದ್ದಾದ ಮರಿಗೆ ಜನ್ಮ ನೀಡಿರುವ ಹಿನ್ನೆಲೆ ಉದ್ಯಾನದಲ್ಲಿ ಸಂತಸ ಮನೆಮಾಡಿದೆ.
ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ ಹೆಸರಿನ ಹಿಪ್ಪೋ ಹಾಗೂ ನಾಗ ಸೇರಿ ಹೊಸ ಮರಿಗೆ ಜನ್ಮ ನೀಡಿವೆ. ಸದ್ಯಕ್ಕೆ ತಾಯಿ ಮತ್ತು ಮರಿ ಎರಡೂ ಆರೋಗ್ಯವಾಗಿವೆ. ಮರಿಗೆ ಕೆಲ ದಿನಗಳ ಕಾಲ ಐಸೋಲೇಷನ್ ಮಾಡಿ ಆರೈಕೆ ಮಾಡಲಾಗುವುದು. ತಾಯಿ ದಶ್ಯ ಕೂಡ ಮರಿ ಹಿಪ್ಪೋವನ್ನ ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ಇದನ್ನೂ ಓದಿ: ಬೆಂಗಳೂರು ಪೊಲೀಸರು ರಾಜಸ್ಥಾನದಲ್ಲಿ ಟ್ರ‍್ಯಾಪ್ – ಆರೋಪಿ ಬಳಿ 2 ಲಕ್ಷಕ್ಕೆ ಬೇಡಿಕೆ ಇಟ್ಟು ಲಾಕ್
ವೈದ್ಯರು ಮತ್ತು ಉದ್ಯಾನದ ಸಿಬ್ಬಂದಿ ತಾಯಿ ಮತ್ತು ಮರಿಯ ಮೇಲೆ ವಿಶೇಷ ನಿಗಾ ಇಟ್ಟಿದ್ದಾರೆ. ಈ ಮರಿಯ ಜನನದ ಮೂಲಕ ಉದ್ಯಾನದಲ್ಲಿ ಹಿಪ್ಪೋಪೊಟಮಸ್‌ಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇತ್ತ ಪ್ರವಾಸಿಗರು ಮರಿ ಹಿಪ್ಪೋವನ್ನು ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಪ್ರೇಯಸಿಯ ಕೊಲೆ
ಹಿಪ್ಪೋ ಮರಿ ಹೆಣ್ಣಾಗಿದ್ದರೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಕರ್ತವ್ಯದ ವೇಳೆ ಹಿಪ್ಪೋ ದಾಳಿಗೆ ಮೃತಪಟ್ಟಿದ್ದ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಗೌರವಾರ್ಥವಾಗಿ ಸಮೀಕ್ಷಾ ಎಂದು ಹೆಸರಿಡಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಟ್ಟ ಆಶ್ವಾಸನೆ ಸಮರ್ಪಕವಾಗಿ ಈಡೇರಿಸಿಲ್ಲ, ಮರು ಅರ್ಜಿ ಕರೆದಿರೋದು ಸರಿಯಲ್ಲ – ಗೃಹಲಕ್ಷ್ಮಿಯರ ಆಕ್ರೋಶ
