ಶಿವಮೊಗ್ಗ: ಆಟೋ (Auto) ಚಾಲಕನನ್ನು (Driver) ದೊಣ್ಣೆಯಿಂದ ಹೊಡೆದು ಹತ್ಯೆ (Murder) ಮಾಡಿರುವ ಘಟನೆ ಭದ್ರಾವತಿ ಆರ್ಎಂಸಿ ಆವರಣದಲ್ಲಿ ನಡೆದಿದೆ.
ಮೃತ ಆಟೋ ಚಾಲಕನನ್ನು ಶಿವಮೊಗ್ಗದ ನಿವಾಸಿ ರೂಪೇಶ್ ಕುಮಾರ್ (45) ಎಂದು ಗುರುತಿಸಲಾಗಿದೆ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ರೂಪೇಶ್ ಮೃತದೇಹದ ಪಕ್ಕ ರಕ್ತಸಿಕ್ತವಾದ ದೊಣ್ಣೆ ಪತ್ತೆಯಾಗಿರುವ ಕಾರಣ, ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾರಿನ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ – ಭಯೋತ್ಪಾದನೆ ಲಿಂಕ್
ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಭದ್ರಾವತಿ ಹಳೆನಗರ ಠಾಣೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಹತ್ಯೆಗೆ ಕಾರಣ ತಿಳಿಯಬೇಕಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು