ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್‌ಗಳ (CET Course) ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಹಂಚಿಕೆಯಾಗಿದ್ದ ಸೀಟುಗಳನ್ನು ಆನ್‌ಲೈನ್ ಮೂಲಕ ರದ್ದುಪಡಿಸಿಕೊಳ್ಳಲು ಆ.29ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.
ಹಾಗೆಯೇ ಪ್ರವೇಶಕ್ಕೆ ಇದ್ದ ಆ.28ರ ಗಡುವನ್ನು ಆ.29ರವರೆಗೆ ಚಾಯ್ಸ್ ದಾಖಲಿಸಲು ವಿಸ್ತರಿಸಲಾಗಿದೆ. ಶುಲ್ಕ ಪಾವತಿಸಿ, ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಆ.31 ಕೊನೆ ದಿನ ಎಂದು ಅವರು ವಿವರಿಸಿದ್ದಾರೆ. ಅಭ್ಯರ್ಥಿಯು, ಚಾಯ್ಸ್- 1 ಆಯ್ಕೆ ಮಾಡದೆ ಮೂರನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ಎರಡನೇ ಸುತ್ತಿನಲ್ಲಿ ಹಂಚಿಕೆಯಾಗಿದ್ದ ಸೀಟನ್ನು 5,000 ರೂ. ದಂಡ ಪಾವತಿಸಿ ರದ್ದುಪಡಿಸಿಕೊಳ್ಳಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ವೇಗ; ಬೀಚ್‌ಗಳು, ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು
ಸೀಟು ರದ್ದುಪಡಿಸುವ ಪ್ರಕ್ರಿಯೆಗೆ ಖುದ್ದು ಅಭ್ಯರ್ಥಿ ಹಾಜರಾತಿ ಕಡ್ಡಾಯ ಇದ್ದ ಕಾರಣ ಗುರುವಾರ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪೋಷಕರ ಜೊತೆ ಕೆಇಎ ಕಚೇರಿಗೆ ಬಂದಿದ್ದರು. ನಂತರ ಈ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕವೇ ಮಾಡಲು ವ್ಯವಸ್ಥೆ ಮಾಡಲಾಯಿತು. ಆ.29ರಂದು ಮಧ್ಯಾಹ್ನ 3 ಗಂಟೆಯೊಳಗೆ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಸೀಟು ರದ್ದುಪಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ನೇಪಾಳ ಪ್ರವಾಹ ದುರಂತದಲ್ಲಿ 8 ಮಂದಿ ಕನ್ನಡಿಗರು ನಾಪತ್ತೆ: ಪರಮೇಶ್ವರ್
ಚಾಯ್ಸ್- 1 ಆಯ್ಕೆ ಮಾಡುವ ಅಭ್ಯರ್ಥಿಗಳು ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯ. ಆದರೆ ಕೆಲವರು ಇನ್ನೂ ಉತ್ತಮ ಸೀಟಿಗೆ ಬಡ್ತಿ ಪಡೆಯಲು ಆಸಕ್ತಿ ಇದ್ದಲ್ಲಿ ಅಂತಹವರು ಕೂಡ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಲಾಗಿನ್ ಮಾಡುವ ಮೂಲಕ ಭಾಗವಹಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ನೇಪಾಳಕ್ಕೆ ಮತ್ತೊಂದು ಪ್ರವಾಹದ ಎಚ್ಚರಿಕೆ ಕೊಟ್ಟ ಚೀನಾ..! – ಮೂರೇ ದಿನದಲ್ಲಿ ‘ಬ್ಯಾರಿಯರ್ ಲೇಕ್’ ಒಡೆಯುವ ಸಾಧ್ಯತೆ!
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಿರುವ ಕೆಲವು ಅಭ್ಯರ್ಥಿಗಳಿಗೆ ಎರಡನೇ ಸುತ್ತಿನಲ್ಲಿ ಎಂಜಿನಿಯರಿAಗ್ ಸೇರಿದಂತೆ ಇತರ ಸೀಟುಗಳು ಹಂಚಿಕೆಯಾಗಿವೆ. ಅಂತಹವರು ತಮ್ಮ ಸೀಟು ಇಷ್ಟ ಇಲ್ಲದಿದ್ದರೆ ಚಾಯ್ಸ್ -4 ಹಾಕುವುದಕ್ಕೂ ಅವಕಾಶವಿದೆ. ಹಾಗೆ ಮಾಡಿದ ನಂತರವೂ ವೈದ್ಯಕೀಯ ಕೋರ್ಸ್ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವುದಕ್ಕೆ ಯಾವ ತೊಂದರೆ ಇಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: ಹಾವೇರಿ | ಕಾಡುಹಂದಿ ಕಾಟ ತಪ್ಪಿಸಲು ಇಟ್ಟಿದ್ದ ನಾಡಬಾಂಬ್ ಸ್ಫೋಟ; ಮೂರು ಪ್ರಾಣಿ ಬಲಿ
ವೈದ್ಯಕೀಯ ತಾತ್ಕಾಲಿಕ ಫಲಿತಾಂಶ ಪ್ರಕಟ:
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೊದಲ ಸುತ್ತಿನ ಎರಡನೇ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರ ಇಂದು ಪ್ರಕಟಿಸಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದವರ ವಿರುದ್ಧ ಕೇಸ್ ದಾಖಲು – ಓರ್ವ ಬಂಧನ
ಮೊದಲ ಸುತ್ತಿನಲ್ಲೇ ಎಲ್ಲ ವೈದ್ಯಕೀಯ (11,875) ಮತ್ತು ದಂತ ವೈದ್ಯಕೀಯ (2,684) ಸೀಟುಗಳು ಹಂಚಿಕೆಯಾಗಿವೆ. ಎಂಸಿಸಿ ಸೇರಿದಂತೆ ಇತರ ರಾಜ್ಯಗಳಲ್ಲಿ ಸೀಟು ಪಡೆದಿದ್ದ ಒಟ್ಟು 478 ಮಂದಿ ತಮ್ಮ ಕೆಇಎ ಸೀಟುಗಳನ್ನು ರದ್ದುಪಡಿಸಿದ್ದರು. ಆ ಸೀಟುಗಳನ್ನು ಸೇರಿಸಿಕೊಂಡು ಮತ್ತೊಮ್ಮೆ ಸೀಟು ಹಂಚಿಕೆ ಮಾಡಲಾಗಿದೆ. ಅಂತಿಮ ಫಲಿತಾಂಶ ಪ್ರಕಟಣೆ ನಂತರ ಪ್ರವೇಶಕ್ಕೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಮ್ಮ ದೇಶಕ್ಕೇ ಚಿನ್ನದ ಮೊಟ್ಟೆ ಇಡುವ ಕೋಳಿ, ಇನ್ನಷ್ಟು ಸುಧಾರಣೆ ಮಾಡಬೇಕು: ಕೃಷ್ಣ ಬೈರೇಗೌಡ
