– ಬೆಟ್ಟದ ಪಾದದ ಕಾಲ್ನಡಿಗೆಯಿಂದ ಬರುವವರಿಗೆ ಬೆಳಗ್ಗೆ 5 ಗಂಟೆಯ ನಂತರ ಪ್ರವೇಶ
– ವಿಶೇಷ ದರ್ಶನಕ್ಕೆ ಟಿಕೆಟ್ ಭಾರೀ ದುಬಾರಿ; – ಬೆಳಗ್ಗೆ 6:30 ರಿಂದ ಬಸ್ ಸೌಲಭ್ಯ
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ (Ashada Masa) ಸಂಭ್ರಮ ಕಳೆಗಟ್ಟಿದೆ, ವಿವಿಧ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬುಧವಾರ (ಇಂದು) ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಭೇಟಿ ನೀಡಿ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ನಗರದ ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡಿದ್ದ ಅವರಿಂದು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಜು.17 ರಿಂದ ಶುರುವಾಗಲಿರುವ ಆಷಾಢ ಮಾಸದ ಸಿದ್ಧತೆಗಳನ್ನ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ಸಿದ್ಧತೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೀನಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅನುಕೂಲ ಮಾಡಿ ಕೊಡಬೇಕು. ವಿಐಪಿಗಳಿಗೆ ಈಗಾಗಲೇ ಸಮಯ ನಿಗದಿ ಮಾಡಿದ್ದೇವೆ. 9:30 ರ ಒಳಗೆ ಎಲ್ಲಾ ವಿಐಪಿಗಳು ದರ್ಶನ ಮಾಡಬೇಕು. ಬೇಕಾದ ಸಮಯದಲ್ಲಿ ವಿಐಪಿಗಳು ಬಂದು ದರ್ಶನ ಮಾಡುವಂತಿಲ್ಲ. ವಿಐಪಿ ಗಳಿಗೆ ವಾಹನಗಳನ್ನ ಮಹಿಷಾಸುರ ಪ್ರತಿಮೆಯ ಬಳಿ ಪಾರ್ಕಿಂಗ್ ಮಾಡಬೇಕು. ವಿಐಪಿ ಹೆಸರು ಹೇಳಿಕೊಂಡು ಬಂದರೆ ಒಳಗೆ ಬಿಡಲ್ಲ ಎಂದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿ.ಪಂ ಸಿಇಒ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
೨/೨ pic.twitter.com/rxg0URfQ92— Dr Yathindra Siddaramaiah (@Dr_Yathindra_S) July 15, 2026
ಬೆಳಗ್ಗೆ 5 ಗಂಟೆ ಬಳಿಕ ಪ್ರವೇಶ
ಈಗಾಗಲೇ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಕೂಡ ಆಷಾಢ ಮಾಸ ಪೂಜೆ ಸಿದ್ಧತೆ ಪರಿಶೀಲಿಸಿದ್ದಾರೆ. ಜು.17, 24, 31 ಆಗಸ್ಟ್ 7 ರಂದು ಆಢಾಶ ಶುಕ್ರವಾರ ಮತ್ತು ಆ.4 ರಂದು ಚಾಮುಂಡೇಶ್ವರಿ ವರ್ಧಂತಿ ಉತ್ಸವ ಇದೆ. 4 ವಾರಗಳ ವಾರಾಂತ್ಯದಂದು ಲಲಿತಮಹಲ್ ಮೈದಾನ ಮತ್ತು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಬಸ್ ಸೌಲಭ್ಯ ಇರಲಿದ್ದು, ರಾತ್ರಿ 8:30 ಕ್ಕೆ ಕೊನೆಯಾಗಲಿದೆ. ಬೆಟ್ಟದ ಪಾದದ ಕಾಲ್ನಡಿಗೆಯಿಂದ ಬರುವವರಿಗೆ ಬೆಳಗ್ಗೆ 5 ಗಂಟೆಯ ನಂತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಅದಕ್ಕೂ ಮುನ್ನವೇ ಕಾಯೋದು ಬೇಡ ಎಂದು ಹೇಳಿದ್ದಾರೆ.
ವಿಶೇಷ ದರ್ಶನಕ್ಕೆ ಟಿಕೆಟ್ ಭಾರೀ ದುಬಾರಿ
ಇನ್ನೂ ಭಕ್ತರ ವಿಶೇಷ ದರ್ಶನಕ್ಕೆ ಇದ್ದ 300 ರೂಪಾಯಿ ಟಿಕೆಟ್ ಅನ್ನು ಈ ಬಾರಿ ರದ್ದು ಮಾಡಲಾಗಿದೆ. 2 ಸಾವಿರ ರೂಪಾಯಿ ಟಿಕೆಟ್ ಖರೀದಿ ಮಾಡಿದರೆ ಸರತಿ ಇಲ್ಲದೇ ನೇರವಾಗಿ ದೇವರ ದರ್ಶನ ಪಡೆಯಬಹುದು. ಇನ್ನೂ ಈ ಟಿಕೆಟ್ ಜೊತೆಗೆ ಚಾಮುಂಡೇಶ್ವರಿ ಫೋಟೊ, ಲಾಡು ಪ್ರಸಾದ ಒಳಗೊಂಡ ವಿಶೇಷ ಕಿಟ್ ಕೊಡಲಾಗುತ್ತದೆ.
ಆಷಾಢ ಶುಕ್ರವಾರದಂದು ನಡೆಯಲಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ವಿಶೇಷ ಪೂಜೆಯ ಪ್ರಯುಕ್ತ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ದರ್ಶನಕ್ಕಾಗಿ ಕೈಗೊಂಡಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ವ್ಯವಸ್ಥೆಗಳು, ಸಮನ್ವಯ ಹಾಗೂ ಸೌಕರ್ಯಗಳ ಕುರಿತು ಸಮಗ್ರ ಚರ್ಚೆ ನಡೆಸಿ, ಅಗತ್ಯ… pic.twitter.com/It556W7pA5
— Dr Yathindra Siddaramaiah (@Dr_Yathindra_S) July 15, 2026
ವಿಐಪಿ ದರ್ಶನಕ್ಕೆ ಸಮಯ ನಿಗದಿ
ಇನ್ನೂ ಮುಂಜಾನೆ 5.30 ರಿಂದ 9.30ರ ವರೆಗೆ ಮಾತ್ರ ವಿಐಪಿ ಹಾಗೂ ವಿವಿಐಪಿಗೆ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಹೊರತುಪಡಿಸಿ ಶಿಷ್ಟಾಚಾರದ ನಿಯಮಕ್ಕೆ ಒಳಪಟ್ಟವರು ಇದ್ದರೆ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಶಿಫಾರಸು ಪತ್ರಗಳನ್ನು ತಂದವರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಇಲ್ಲ. ವಿಐಪಿ ಮತ್ತು ವಿವಿಐಪಿ ಗಳ ವಾಹನಗಳು ಮಹಿಷಾಸುರನ ಪ್ರತಿಮೆ ವೃತ್ತದ ಬಳಿ ಪಾರ್ಕಿಂಗ್ ಮಾಡಬೇಕು. ಮೆಟ್ಟಿಲು ಹತ್ತಿಕೊಂಡು ಬರುವ ಬರುವ ಭಕ್ತಾಧಿಗಳಿಗೆ ಹಾಲು ಮತ್ತು ನೀರು ಸಿಗುವಂತಹ ವ್ಯವಸ್ಥೆ ಇರಲಿದೆ.
ಆಗಸ್ಟ್ 7 ರವರೆಗೂ ವಿಶೇಷ ಪೂಜೆ
ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತಾದಿಗಳು ಬರ್ತಾರೆ. ಜುಲೈ 17 ರಿಂದ ಆಗಸ್ಟ್ 7 ರವರಗೂ ಆಷಾಢ ಮಾಸದ ವಿಶೇಷ ಪೂಜೆ ನಡೆಯಲಿದೆ. ಸಾಮಾನ್ಯ ಜನರಿಗೆ ತೊಂದರೆ ಆಗಬಾರದು. ಲಲಿತ ಮಹಲ್ ಪ್ಯಾಲೇಸ್ ಮೈದಾನದಿಂದ ವಾಹನದ ವ್ಯವಸ್ಥೆ ಇದೆ. ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.
