ಬೆಂಗಳೂರು: ನಡು ರಸ್ತೆಯಲ್ಲಿ ಕೊಚ್ಚಿ ಕೊಲೆಯಾಗಿದ್ದ ಅರ್ಚನಾ ರೆಡ್ಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರಕರಣ ಸಂಬಂಧ ಆರೋಪಿ ನವೀನ್‍ಗೆ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಅರ್ಚನಾ ರೆಡ್ಡಿ ಮಗಳು ಯುವಿಕಾ ರೆಡ್ಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
Advertisement
ಅರ್ಚನಾ ರೆಡ್ಡಿ ಕೊಲೆಯಾಗುವ ದಿನ ಅಮ್ಮನ ಚಲನವಲನದ ಬಗ್ಗೆ ಯುವಿಕಾ ರೆಡ್ಡಿ, ನವೀನ್‍ಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ತನಿಖೆ ವೇಳೆ ಗೊತ್ತಾಗುತ್ತಿದಂತೆ ಯುವಿಕಾ ರೆಡ್ಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಪತಿ ಬಿಟ್ಟಾಕೆ ಪ್ರಿಯಕರನೊಂದಿಗೂ ಜಗಳ ಮಾಡಿಕೊಂಡು ಕೊಲೆಯಾದ್ಲು!
Advertisement
Advertisement
ಯುವಿಕಾ ಅಮ್ಮನ ಬಾಯ್ ಫ್ರೆಂಡ್ ನವೀನ್‍ನನ್ನು ಮದುವೆಯಾಗಿದ್ದಳು. ಈ ಹಿಂದೆ ಅರ್ಚನಾ ರೆಡ್ಡಿ ಜೊತೆ ನವೀನ್‍ಗೆ ಸಂಬಂಧವಿತ್ತು. ಇದು ತಿಳಿದಿದ್ದರು ಕೂಡ ನವೀನ್ ಜೊತೆ ಯುವಿಕಾ ರಿಜಿಸ್ಟ್ರಾರ್ ಮ್ಯಾರೇಜ್ ಆಗಿದ್ದಳು. ಬಳಿಕ ಅಮ್ಮನ ಆಸ್ತಿಯನ್ನು ಹೊಡೆಯಬೇಕು ಅಂದರೆ ಅವಳು ಸಾಯಬೇಕು ಎಂದು ನಿರ್ಧರಿಸಿ ಅಮ್ಮನನ್ನು ಯುವಿಕಾ ಕೊಲೆ ಮಾಡಲು ಮುಂದಾಗಿದ್ದಳು. ಈ ನಡುವೆ ಯುವಿಕಾ, ನವೀನ್‍ನನ್ನು ಮದುವೆ ಆಗಿರುವ ವಿಚಾರ ಅರ್ಚನಾಗೆ ತಿಳಿದಿದೆ. ಹಾಗಾಗಿ ಇಬ್ಬರನ್ನೂ ಬೇರೆ ಮಾಡಲು ಅರ್ಚನಾ ಓಡಾಡ್ತಾ ಇದ್ದಳು. ಇದನ್ನು ಸಹಿಸದೇ ಅಮ್ಮನನ್ನೇ ಕೊಲೆ ಮಾಡಲು ಯುವಿಕಾ ಮುಂದಾಗಿದ್ದಾಳೆ. ಅಂತೆಯೇ ನವೀನ್‍ಗೆ ಸಹಾಯ ಮಾಡಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
Advertisement
ಮಗಳಿಗೆ ಬೇಕಿತ್ತು ಐಷಾರಾಮಿ ಜೀವನ:
ಯುವಿಕಾ ಐಷಾರಾಮಿ ಜೀವನ ಮಾಡೋದಕ್ಕೆ ಇಷ್ಟ ಪಡುತ್ತಾ ಇದ್ದಳು. ಆದರೆ ಹಣ ಮಾತ್ರ ಅರ್ಚನಾ ಕೊಡುತ್ತಾ ಇರ್ಲಿಲ್ಲ. ಹಣಕ್ಕಾಗಿ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದ ಯುವಿಕಾ, ನವೀನ್ ಮನೆಗೆ ಹೋಗಿ ಉಳಿದುಕೊಂಡಿದ್ದಳು. ಆದರೆ ನವೀನ್ ಬಳಿ ಹಣ ಇರಲಿಲ್ಲ. ನವೀನ್ ಕೂಡ ಯಾವುದೇ ಕೆಲಸ ಮಾಡುತ್ತಾ ಇರಲಿಲ್ಲ. ಇದರಿಂದಾಗಿ ಯುವಿಕಾಗೆ ಯಾವುದೇ ಐಷಾರಾಮಿ ಜೀವನ ಮಾಡೋಕೆ ಆಗುತ್ತಿರಲಿಲ್ಲ. ಹಾಗಾಗಿ ಅಮ್ಮನನ್ನು ಕೊಂದರೆ ಎಲ್ಲಾ ಆಸ್ತಿ ನಮ್ಮ ಪಾಲಿಗೆ ಬರುತ್ತೆ ಅಂದುಕೊಂಡು ನವೀನ್ ಜೊತೆ ಸಂಚುರೂಪಿಸಿ ಕೊಂದಿದ್ದಾಳೆ.
ಅರ್ಚನಾ ರೆಡ್ಡಿ ಮತ್ತು ನವೀನ್ ಅಕ್ರಮ ಸಂಬಂಧ:
2014ರಲ್ಲಿ ಅರ್ಚನಾಗೆ ನವೀನ್ ಪರಿಚಯವಾಗಿದ್ದ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮತ್ತು ಪ್ರಾಪರ್ಟಿ ಲಿಟೆಗೇಷನ್ ವಿಚಾರದಲ್ಲಿ ಅರ್ಚನಾಗೆ ಸಹಾಯ ಮಾಡುತ್ತಿದ್ದ. ಇಬ್ಬರ ನಡುವಿನ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿತ್ತು. 2017ರಲ್ಲಿ ಅರ್ಚನಾಳನ್ನು ನವೀನ್ ವಿವಾಹವಾಗಿದ್ದ. 2019ರಲ್ಲಿ ಇಬ್ಬರ ನಡುವೆ ಸಣ್ಣ ವಿಚಾರಗಳಿಗೆ ಮನಸ್ತಾಪ ಉಂಟಾಗಿತ್ತು. 2021ರಲ್ಲಿ ಮಗಳು ಯುವಿಕಾ, ನವೀನ್ ಜೊತೆ ಅಕ್ರಮ ಸಂಬಂಧ ಹೊಂದಿರೋದು ಅರ್ಚನಾಗೆ ಗೊತ್ತಾಗಿತ್ತು. ಈ ವಿಚಾರಕ್ಕೆ ನವೀನ್ ಮತ್ತು ಯುವಿಕಾಗೆ ಅರ್ಚನಾ ವಾರ್ನ್ ಮಾಡಿದ್ದಳು. ವಾರ್ನ್ ಮಾಡಿದ್ರೂ ಕೂಡ ಇಬ್ಬರ ನಡುವಿನ ಸಂಬಂಧ ಕಂಟಿನ್ಯೂ ಅಗಿತ್ತು. ಇದೇ ವಿಚಾರಕ್ಕೆ ಜಗಳವಾಗಿ ನವೀನ್ ಮತ್ತು ಯುವಿಕಾಳನ್ನು ಮನೆಯಿಂದ ಅರ್ಚನಾ ಹೊರ ಹಾಕಿದ್ದಳು. ನವೀನ್ ಮತ್ತು ಯುವಿಕಾ ಮನೆಯಿಂದ ಹೊರ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅನಂತರ ನವೀನ್ ಜಿಮ್ ಟ್ರೈನರ್ ಅಗಿ ಕೆಲಸ ಮಾಡಿಕೊಂಡಿದ್ದ. ಆದರೆ ಐಷರಾಮಿ ಜೀವನಕ್ಕೆ ಅಡ್ಜೆಸ್ಟ್ ಆಗಿದ್ದ ನವೀನ್ ಮತ್ತು ಯುವಿಕಾಗೆ ಜೀವನ ನಡೆಸಲು ಹಣದ ಕೊರತೆ ಎದುರಾಗಿದೆ. ಈ ವೇಳೆ ಅರ್ಚನಾ ಹತ್ಯೆಯಾದ್ರೆ ಆಸ್ತಿ ಎಲ್ಲಾ ನಮ್ಮ ಪಾಲಾಗುತ್ತೆ ಎಂದು ಯುವಿಕಾ ಪ್ಲಾನ್ ಮಾಡಿದ್ದಳು. ಇದನ್ನೂ ಓದಿ: ಹೊಸೂರು ರೋಡ್ ಮರ್ಡರ್‌ಗೆ ಟ್ವಿಸ್ಟ್ – 3 ಮದ್ವೆಯಾಗಿದ್ದ ಅರ್ಚನಾ ಆಸ್ತಿ ಮೇಲೆ ಕಣ್ಣು
ಈ ನಡುವೆ ಅರ್ಚನಾ ತಾಯಿ ಕೂಡ ಇತ್ತೀಚೆಗೆ ನಿಧನರಾಗಿದ್ರು. ಅವರ ಅಷ್ಟು ಆಸ್ತಿಗೆ ಮುಂದಿನ ವಾರಸುದಾರರು ಅರ್ಚನಾ ಮತ್ತು ಯುವಿಕಾ ಮಾತ್ರ ಆಗಿದ್ದರು. ಹಾಗಾಗಿ ಅರ್ಚನಾ ನಂತರ ಆಸ್ತಿಗೆ ವಾರಸುದಾರರಳು ನಾನೇ ಎಂದು ಯುನಿಕಾ, ನವೀನ್ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಒಂದೂವರೆ ತಿಂಗಳುಗಳ ಕಾಲ ಅರ್ಚನಾ ಹತ್ಯೆಗೆ ಪ್ಲಾನ್ ನಡೆದಿತ್ತು. ಕೊಲೆ ಮಾಡಲು ಸ್ನೇಹಿತರಿಗೆ ನವೀನ್, ಕತೆಯೇ ಬೇರೆ ಹೇಳಿದ್ದ. ನಾನು ಅರ್ಚನಾಗೆ ಇಷ್ಟೆಲ್ಲಾ ಸಹಾಯ ಮಾಡಿದ್ದೆ. ಆದರೆ ನನ್ನನ್ನೇ ಮನೆಯಿಂದ ಹೊರ ಹಾಕಿದಳು ಅಂತ ಕಣ್ಣೀರಿನ ಕತೆ ಕಟ್ಟಿದ್ದ. ಆದರೆ ತನ್ನ ಸ್ನೇಹಿತರಿಗೆ ಯುವಿಕಾ ಜೊತೆಗಿದ್ದ ಅಕ್ರಮ ಸಂಬಂಧಧ ಬಗ್ಗೆ ನವೀನ್ ಹೇಳಿರಲಿಲ್ಲ.
ಕೊಲೆಗೆ ಪ್ಲಾನ್ ಮಗಳಿಂದ ಅಮ್ಮನ ಚಲನವಲನ ಮಾಹಿತಿ:
ಅರ್ಚನಾ ರೆಡ್ಡಿ ಈ ಹಿಂದೆ ವಾಸಿಸುತ್ತಿದ್ದ ಜಿಗಣಿಯಿಂದ ಬೇರೆ ಕಡೆ ಮನೆ ಬದಲಿಸಿದ್ದಳು. ಇದು ಯುವಿಕಾ ಮತ್ತು ನವೀನ್‍ಗೆ ತಿಳಿದಿರಲಿಲ್ಲ. ಇದನ್ನು ತಿಳಿದುಕೊಳ್ಳಲು ಅರ್ಚನಾ ರೆಡ್ಡಿಯ ಗಾಡಿಯನ್ನು ಫಾಲೋ ಮಾಡಲು ತನ್ನ ಸ್ನೇಹಿತರಿಗೆ ನವೀನ್ ಹೇಳಿದ್ದ. ಜೊತೆಗೆ ಯಾವುದಾದರೂ ಒಂದು ಸಿಗ್ನಲ್ ಬಳಿಯೇ ಹತ್ಯೆ ಮಾಡಬೇಕೆಂದು ಸಂಚು ರೂಪಿಸಿದ್ದರು. ಮೊದಲ ಎರಡು ಸಿಗ್ನಲ್ 2 ಸೆಕೆಂಡ್ ಮಾತ್ರ ಇದ್ದಿದ್ರಿಂದ ಗಾಡಿ ನಿಂತಿರಲಿಲ್ಲ. ಹೊಸುರು ರೋಡ್ ಜಂಕ್ಷನ್ ಸಿಗ್ನಲ್‍ನಲ್ಲಿ 21 ಸೆಕೆಂಡ್ ಕಾಲವಕಾಶದಲ್ಲಿ ಸಿಕ್ಕಿತು. ಈ ವೇಳೆ ಸಿಗ್ನಲ್‍ನಲ್ಲಿ ಕಾರು ನಿಂತ ಕೂಡಲೇ ನವೀನ್ ಸ್ನೇಹಿತ ಅನೂಪ್ ಡಿಯೋ ಬೈಕ್ ತಂದು ಅಡ್ಡ ಹಾಕಿದ. ಈ ವೇಳೆ ಅರ್ಚನಾ ಕಾರಿನ ಡ್ರೈವರ್ ತಕ್ಷಣವೇ ಕಾರನ್ನ ಮುಂದಕ್ಕೆ ಚಲಾಯಿಸಿದ್ದ. ಆದರೆ ಬೈಕ್ ಅಡ್ಡ ಇದ್ದಿದ್ದರಿಂದ ಕಾರು ಮುಂದಕ್ಕೆ ಹೋಗಿರಲಿಲ್ಲ. ಅಷ್ಟೇ ಅಲ್ಲದೇ ಕಾರಿನ ಚಕ್ರವನ್ನು ಮಚ್ಚಿನಿಂದ ಹೊಡೆದು ಪಂಕ್ಚರ್ ಮಾಡಿದರು. ಆಗ ಅರ್ಚನಾ ಕಾರಿನಲ್ಲಿದ್ದ ಇಬ್ಬರು ಹುಡುಗರು ಮತ್ತು ಡ್ರೈವರ್ ಓಡಿ ಹೋದರು. ಇದೆಲ್ಲಾ ತಿಳಿದಿದ್ದರೂ ಕೂಡ ಪೊಲೀಸರ ಮುಂದೆ ಏನೂ ಗೊತ್ತಿಲ್ಲದ್ದಂತೆ ಮಗಳು ಯುನಿಕಾ ಡ್ರಾಮಾ ಮಾಡಿದ್ದಳು. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!
ತಮ್ಮನನ್ನು ಬಚಾವ್ ಮಾಡಿದ್ದ ಯುವಿಕಾ:
ತಮ್ಮ ಯಾವಾಗಲೂ ಅಮ್ಮನ ಜೊತೆಯಲ್ಲಿ ಇರ್ತಾನೆ. ನಮಗೆ ಇರೋದು ಅಮ್ಮನ ಮೇಲೆ ದ್ವೇಷ ಅಷ್ಟೇ. ನನ್ನ ತಮ್ಮನ ಕೊಲೆ ಮಾಡುವ ಯೋಚನೆಯನ್ನು ಮಾಡಬಾರದು. ಅವನಿಗೆ ಸಣ್ಣ ಗಾಯವೂ ಆಗಬಾರದು. ಹಾಗಿದ್ರೆ ಮಾತ್ರ ಅಮ್ಮನ ಕೊಲೆ ಮಾಡು. ಆಕಸ್ಮಾತ್ ತಮ್ಮ ಸಿಕ್ಕಿದ್ರೂ ಕೂಡ ಅವನನ್ನು ಬಿಟ್ಟು ಕಳಿಸೋದು ನಿನ್ನ ಜವಾಬ್ದಾರಿ ಎಂದು ನವೀನ್‍ಗೆ ಯುವಿಕಾ ಸೂಚನೆ ಕೊಟ್ಟಿದ್ದಳು. ಅದರಂತೆ ಕೊಲೆಯಾದ ದಿನ ಅರ್ಚನಾ ಜೊತೆಯಲ್ಲಿ ಮಗ ಇದ್ದ. ಅರ್ಚನಾ ಹತ್ಯೆ ಮಾಡುವಾಗ ಮಗನನ್ನು ಕಾರಿಂದ ಇಳಿಸಿ ನವೀನ್ ಕಳುಹಿಸಿದ್ದ.
ಏಳು ಆರೋಪಿಗಳ ಬಂಧನ:
ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ ನೀಡಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡಿ. 27ರಂದು ಅರ್ಚನಾ ರೆಡ್ಡಿ ಕೊಲೆ ನಡೆದಿತ್ತು. ಹೊಸೂರು ರಸ್ತೆ ಬಳಿ ಅರ್ಚನಾ ರೆಡ್ಡಿ ಕೊಲೆಯಾಗಿತ್ತು. ಇನ್ನೋವಾ ಕಾರಿನಲ್ಲಿ ಅರ್ಚನಾ ಬರ್ತಿದ್ದಾಗ ಕಾರನ್ನು ಅಡ್ಡಗಟ್ಟಿ ಕೊಲೆ ಮಾಡಲಾಗಿತ್ತು. ಸಿಸಿ ಟಿವಿ ಆಧಾರದ ಮೇಲೆ ಈ ಕೊಲೆ ಪ್ರಕರಣ ತನಿಖೆ ಕೈಗೊಳ್ಳಲಾಗಿತ್ತು. ಈ ಪ್ರಕರಣ ಸಂಬಂಧ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ಮುಖ್ಯವಾದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಕೊಲೆ ಪ್ರಕರಣ ಸಂಬಂಧ ಇದೀಗ ಏಳು ಆರೋಪಿಗಳನ್ನು ಬಂಧಿಸಿದ್ದೇವೆ. ಆಸ್ತಿಯನ್ನ ಕಬಳಿಸಲು ಈ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ. ಎ1 ಆರೋಪಿ ಗೂ ಕೊಲೆಯಾದ ಅರ್ಚನಾ ಪತಿ-ಪತ್ನಿಯರಾಗಿದ್ದರು. ಕೊಲೆ ಪ್ರಕರಣದಲ್ಲಿ ಕೊಲೆಯಾದಾಕೆಯ ಮಗಳು ಕೂಡ ಆರೋಪಿಯಾಗಿದ್ದಾಳೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮೂರು ತಿಂಗಳಿಂದ ಅರ್ಚನಾ ಕೊಲೆಗಾಗಿ ಗ್ಯಾಂಗ್ ಹಿಂದೆ ಬಿದ್ದಿತ್ತು. ಅರ್ಚನಾ ಎಲ್ಲೆಲ್ಲಿ ಹೋಗ್ತಾಳೆ ಒಂಟಿಯಾಗಿ ಯಾವಾಗ ಸಿಕ್ತಾಳೆ ಅಂತ ಗ್ಯಾಂಗ್ ಬೆನ್ನು ಬಿದ್ದಿತ್ತು. ಕೊಲೆ ನಡೆಯುವ ರಾತ್ರಿ ಜಿಗಣಿಯಿಂದ ಫಾಲೋ ಮಾಡಿದ್ದರು. ಜಿಗಣಿಯಿಂದ ಇಂಡಿಕಾ ಕಾರ್ ಅಲ್ಲಿ ಫಾಲೋ ಮಾಡಿಕೊಂಡು ಒಂದು ಡಿಯೋ ಸ್ಕೂಟರ್ ಇಂದ ಅಡ್ಡಗಟ್ಟಿ ಗ್ಯಾಂಗ್ ಹತ್ಯೆ ಮಾಡಿತ್ತು.
7 ಮಂದಿ ಆರೋಪಿಗಳು ಅರೆಸ್ಟ್:
ನವೀನ್ ಕುಮಾರ್ (ಅರ್ಚನಾ ಮೂರನೆ ಪತಿ), ಯುವಿಕಾ ರೆಡ್ಡಿ (ಅರ್ಚನಾ ರೆಡ್ಡಿ ಮಗಳು), ನವೀನ್‍ನ ಸ್ನೇಹಿತರಾದ ಸಂತೋಷ್, ಅನೂಪ್, ಆನಂದ್, ನರೇಂದ್ರ ಹಾಗೂ ದೀಪುವನ್ನು ಪೊಲೀಸರು ಬಂಧಿಸಿದ್ದಾರೆ.