ಕರ್ನಾಟಕಕ್ಕೆ ಒಂದು ಚೊಂಬು ಕೊಟ್ಟಿದ್ದಾರೆ: ಬಜೆಟ್‌ನಿಂದ ಅನ್ಯಾಯ ಆಗಿದೆ ಎಂದ ಸಿದ್ದರಾಮಯ್ಯ

2 Min Read

ಕಲಬುರಗಿ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ. ಕರ್ನಾಟಕಕ್ಕೆ ಒಂದು ಚೊಂಬು ಕೊಟ್ಟಿದ್ದಾರೆ ಎಂದು ಕೇಂದ್ರ ಬಜೆಟ್ (Union Budget) ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಗುಡುಗಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡೆರಡು ಬೆಂಗಳೂರು-ಹೈದರಾಬಾದ್ ಹಾಗೂ ಬೆಂಗಳೂರು-ಚೆನೈ ಹೈಸ್ಪಿಡ್ ರೈಲು ಕೊಟ್ಟಿದ್ದಾರೆ. ಅದು ಸಹ 5 ವರ್ಷ ಸಮಯ ತೆಗೆದುಕೊಂಡಿದ್ದಾರೆ. ನಮಗೆ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ರೈಲು ಬೇಕಾಗಿತ್ತು. ನೀರಾವರಿ ಯೋಜನೆಗೆ ಹಣ ಕೇಳಿದ್ದೇವೆ. ಆದರೆ, ನೀರಾವರಿ ಯೋಜನೆಗೆ ಒಂದೇ ಒಂದು ಶಬ್ದ ಇಲ್ಲ. ಅಪರ್ ಕೃಷ್ಣಾ ಹಾಗೂ ಅಪರ್ ಭದ್ರಾ ಯೋಜನೆಗೆ ಸಹಾಯ ಕೇಳಿದ್ರೂ ಏನು ಕೊಟ್ಟಿಲ್ಲ. ಈ ಹಿಂದೆ ಬಜೆಟ್‌ನಲ್ಲಿ ಯೋಜನೆಗೆ 5,200 ಕೋಟಿ ಹಣ ಕೊಡ್ತೀವಿ ಅಂದ್ರು. ಆದರೆ, ಒಂದು ರೂಪಾಯಿ ಸಹ ಕೊಟ್ಟಿಲ್ಲ. ಮೇಕೆದಾಟು ಯೋಜನೆ ಪ್ರಕರಣ ಸಂಬಂಧ ತಮಿಳನಾಡು ಅರ್ಜಿ ವಜಾ ಆಗಿದೆ. ಆದರೂ ಸಹ ಆ ಯೋಜನೆಗೆ ಬಜೆಟ್‌ನಲ್ಲಿ ಹಣ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು, ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್‌ಡಿಕೆ

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ಕೊಟ್ಟಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಕ್ಲಿಯರ್ ಮಾಡುವುದಾಗಿ ಯಡಿಯೂರಪ್ಪ ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದರು. ಆದರೆ, ಕೇಂದ್ರ ಪರಿಸರ ಇಲಾಖೆ ಬಜೆಟ್‌ನಲ್ಲಿ ಈ ಬಾರಿ ಸಹ ಅನುಮತಿ ಕೊಟ್ಟಿಲ್ಲ. ಈ ಮೂಲಕ ಕರ್ನಾಟಕದ ಜನತೆಗೆ ಕೇಂದ್ರ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಬೇಳೆಕಾಳುಗಳಿಗೆ ಸಹಾಯ ಮಾಡಿ ಅಂತ ಕೇಳಿದರೂ ಅದು ಸಹ ಮಾಡಿಲ್ಲ. 15ನೇ ಹಣಕಾಸು ಆಯೋಗ ಆರಂಭವಾಗಿದೆ. ನಾವು ಕನಿಷ್ಟ 50% ಕೊಡಿ ಅಂತಾ ಕೇಳಿದ್ವಿ. ಆದರೆ, 41% ಮಾತ್ರ ಕೊಟ್ಟಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 4.71% ಮಾತ್ರ. 14ನೇ ಹಣಕಾಸಿಗಿಂತ ಜಾಸ್ತಿ ಮಾಡಿ ಕೊಡಿ ಅಂದ್ರೆ 4.131 ಮಾತ್ರ ಕೊಟ್ಟಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ 14ನೇ ಹಣಕಾಸಿನಷ್ಟು ಸಹ ಹಣ ನೀಡಿಲ್ಲ. ಉತ್ತರ ಪ್ರದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹಣಕಾಸಿನ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿ ನಮಗೆ ಅನ್ಯಾಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Union Budget 2026 | ಕರ್ನಾಟಕಕ್ಕೆ ಸಿಕ್ಕಿದ್ದೇನು? – ಈಡೇರದ ನಿರೀಕ್ಷೆಗಳೇನು?

ರಾಜ್ಯವಾರು ಹಣ ಹಂಚಿಕೆ ನೋಡಿದ್ರೆ ಬಿಹಾರ 9.948, ಯುಪಿ-17.691, ಗುಜರಾತ್ 3.755, ಕರ್ನಾಟಕಕ್ಕೆ 4.131, ಆಂಧ್ರ- 4.271 ಇದೆ. ನಾವು ತಲಾ ಆದಾಯದಲ್ಲಿ ನಂಬರ್ 1, ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ಹೀಗಿದ್ರು ನಮಗೆ ಅನುದಾನ ಬಂದಿಲ್ಲ. ಬಜೆಟ್‌ಗೂ ಮುನ್ನ ನಮ್ಮ ರಾಜ್ಯದ ನೀರಾವರಿ, ಮೆಟ್ರೋ ಯೋಜನೆ, ಏಮ್ಸ್ ಕೊಡಬೇಕು, ಕೆಕೆಆರ್ ಡಿಬಿಗೆ ಮ್ಯಾಚಿಂಗ್ ಗ್ರ‍್ಯಾಂಟ್ ಕೊಡಲು ಸಹ ಹೇಳಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ 13 ಸಾವಿರ ಕೋಟಿ ಅನುದಾನ ಕೊಟ್ಟಿದ್ದೇವೆ. ನಾವು 100 ತೆರಿಗೆ ಕೊಟ್ಟರೆ 14 ರೂಪಾಯಿ ವಾಪಸ್ ಬರುತ್ತದೆ. ಉಳಿದ ಹಣ ಕೇಂದ್ರ ಸರ್ಕಾರ ಬಳಸುತ್ತದೆ. ಸೆಸ್ ಸಬ್‌ಚಾಜ್9 ಸಹ ಕೇಂದ್ರ ಕಲೆಕ್ಟ್ ಮಾಡಿ ರಾಜ್ಯಗಳಿಗೆ ಕೊಡುವುದಿಲ್ಲ. ಹೀಗಾಗಿ, 2026-27 ಬಜೆಟ್ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಟೀಕಿಸಿದರು.

Share This Article