ಕಲಬುರಗಿಯಲ್ಲಿ ನಿತ್ಯ 44 ರಿಂದ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

0 Min Read

ಕಲಬುರಗಿ: ಬೇಸಿಗೆ ಆರಂಭವಾದ ಬಳಿಕ ಕಲಬುರಗಿಯಲ್ಲಿ (Kalaburagi) ದಿನದಿಂದ ದಿನಕ್ಕೆ ಉಷ್ಣಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಏಪ್ರಿಲ್ ತಿಂಗಳಲ್ಲಿಯೇ ನಿತ್ಯ 44 ರಿಂದ 45.05 ಡಿಗ್ರಿ ಸೆಲ್ಸಿಯಸವರೆಗೆ ಗರಿಷ್ಟ ತಾಪಮಾನ ದಾಖಲಾಗುತ್ತಿದ್ದು, ಕಳೆದ 25 ವರ್ಷಗಳಲ್ಲಿಯೇ ಇದು ಗರಿಷ್ಟ ಮಟ್ಟದ ಬಿಸಿಲಿನ ತಾಪಮಾನ ಅಂತಾ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನವಾದ್ರೆ ಸಾಕು ಕಲಬುರಗಿ ಜಿಲ್ಲೆ ಸೂರ್ಯನ ತಾಪಮಾನಕ್ಕೆ ಭೂಮಿ ಕಾದು ಕೆಂಡದಂತಾಗುತ್ತಿದೆ. ಹೀಗಾಗಿ, ಜನ ಇದೀಗ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

Share This Article