15 ವರ್ಷಗಳ ಹಿಂದೆ ಸಕಲೇಶಪುರ ಜೈಲಿಂದ ಪರಾರಿಯಾಗಿದ್ದ ವಿಚಾರಣಾಧಿನ ಕೈದಿ ಗೋವಾದಲ್ಲಿ ಅಂದರ್‌

1 Min Read

ಹಾಸನ: ಸುಮಾರು 15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಹಾಸನ (Hassan) ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಕಲೇಶಪುರ (Sakleshpur) ತಾಲೂಕಿನ, ನಲ್ಲುಲ್ಲಿ ಗ್ರಾಮದ ಚನ್ನಕೇಶವ ಎಂದು ಗುರುತಿಸಲಾಗಿದೆ. ಈತ ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಹಾಗೂ ದರೋಡೆ ಪ್ರಕರಣದಲ್ಲಿ ಸಕಲೇಶಪುರ ಜೈಲು ಸೇರಿದ್ದ. 2011ರಲ್ಲಿ ಜೈಲಿಂದ ಪರಾರಿಯಾಗಿ ಸುಮಾರು 15 ವರ್ಷ ತಲೆಮರೆಸಿಕೊಂಡಿದ್ದ. ಇದನ್ನೂ ಓದಿ: ಅರೆಬೈಲ್ ಘಟ್ಟದಲ್ಲಿ ಚಾಲಕನ ಸಮೇತ ಕಾರು ಸುಟ್ಟ ಕೇಸ್ – ಹ‌ತ್ಯೆ ಮಾಡಿದ ಮೂವರ ಬಂಧನ

ಆರೋಪಿ ಗೋವಾದಲ್ಲಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಈತ ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಸದ್ಯ ಗೋವಾದ (Goa) ಹೋಟೆಲ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ.

ಆರೋಪಿ ಬಂಧನಕ್ಕೆ ಎಸ್ಪಿ ಶುಭಾನ್ವಿತಾ, ಎಎಸ್ಪಿಗಳಾದ ತಮ್ಮಯ್ಯ ಹಾಗೂ ಶ್ರೀನಿಧಿ, ಕಾನ್‌ಸ್ಟೇಬಲ್‌ ಗಳಾದ ರವಿ ಕಬ್ಬತ್ತಿ, ಸೋಮಶೇಖರ್‌ ಹಾಗೂ ಬಸವರಾಜು ಭಾಗಿಯಾಗಿದ್ದರು. ಇದನ್ನೂ ಓದಿ: 38 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಎನ್‌ಸಿಬಿ

Share This Article