ಬೆಂಗಳೂರು: ಕಾಂಗ್ರೆಸ್ (Congress) ಮಹಿಳಾ ಮೀಸಲಾತಿ ವಿರೋಧಿ ಅಲ್ಲ. ಬಿಜೆಪಿ ರಾಜಕೀಯ ಮಾಡಲು ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಷನ್ ಒಟ್ಟಾಗಿ ಸಂವಿಧಾನದ ತಿದ್ದುಪಡಿ ಮಾಡಲು ಮುಂದಾಗಿದ್ದಕ್ಕೆ ಬಿಲ್ ಫೇಲ್ ಆಯ್ತು ಅಂತ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮಹಿಳಾ ಮೀಸಲಾತಿಗೆ (Women’s Reservation Bill) ಕಾಂಗ್ರೆಸ್ ವಿರೋಧ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮಹಿಳಾ ಮೀಸಲಾತಿ ಪರ ಇದೆ. ನಾವು ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. 2023 ರಲ್ಲಿ ಸಂಸತ್‌ನಲ್ಲಿ ಬಿಲ್ ಪಾಸ್ ಆಗಿದೆ. ಅದನ್ನ ಅವರು ಜಾರಿ ಮಾಡಬೇಕು. ಮುಂದಿನ ಚುನಾವಣೆಗೆ ಮೀಸಲಾತಿ ಜಾರಿ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ವಿಪಕ್ಷ ತಪ್ಪು ಮಾಡಿದೆ, ಅದರ ಪರಿಣಾಮ ಎದುರಿಸುತ್ತೆ: ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ್ದಕ್ಕೆ ಮೋದಿ ಕಿಡಿ
ಬಿಜೆಪಿ ಅವರು ಸಂವಿಧಾನಕ್ಕೆ ತಿದ್ದುಪಡಿ ತರೋದಕ್ಕೆ ಹೋಗಿದ್ದಕ್ಕೆ ನಿನ್ನೆ ಬಿಲ್ ಬಿದ್ದು ಹೋಯ್ತು. ಮಹಿಳಾ ಮೀಸಲಾತಿಗೆ ಮಾತ್ರ ಸಂವಿಧಾನದ ತಿದ್ದುಪಡಿ ಮಾಡಿದ್ರೆ, ಡಿಲಿಮಿಟೇಷನ್ ಸೇರಿಸದೇ ಅದೊಂದೆ ಮಾಡಿದ್ರೆ ಪಾಸ್ ಆಗ್ತಿತ್ತು. ಅದನ್ನ ಮಿಕ್ಸ್ ಮಾಡಿ ಮಾಡಿದ್ರು. ಅದಕ್ಕೆ ಬಿದ್ದು ಹೋಯ್ತು ಎಂದು ತಿಳಿಸಿದರು.
ಬಿಜೆಪಿ ಅವರು ರಾಜಕೀಯ ಮಾಡೋದಕ್ಕಾಗಿಯೇ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಷನ್ ಎರಡು ಒಟ್ಟಿಗೆ ತಂದರು. ನಾವು ಡಿಲಿಮಿಟೇಷನ್‌ಗೆ ಮಾತ್ರ ವಿರೋಧ. ನಾವು ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ʻನಾರಿಶಕ್ತಿ ಬಿಲ್ʼ ತಿರಸ್ಕಾರ – ಗೆದ್ದ ವಿಪಕ್ಷಗಳ ಹಠ; NDA ಸರ್ಕಾರಕ್ಕೆ ಮುಖಭಂಗ

