ಬೆಂಗಳೂರು: ವಿಶೇಷ ಕಾರ್ಯಾಚರಣೆ ವೇಳೆ ಜಪ್ತಿ ಮಾಡಿದ್ದ ಭಾರೀ ಪ್ರಮಾಣದ ಡ್ರಗ್ಸ್ ಅನ್ನು ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ನಾಶಪಡಿಸಿದೆ.
ಮಾದಕ ವಸ್ತುಗಳ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆ ವೇಳೆ ಎನ್‌ಸಿಬಿ 38 ಕೋಟಿ ಮೌಲ್ಯದ ಮಾದಕ ವಸ್ತುವನ್ನ ಜಪ್ತಿ ಮಾಡಿತ್ತು. ಇಂದು ಹೊಸಕೋಟೆ ಬಳಿಯ ಸೆಂಚುರಿ ರಿಫೈನರಿ ಘಟಕದಲ್ಲಿ 128 ಕೆ.ಜಿ. ಡ್ರಗ್ಸ್ ನಾಶ ಮಾಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಟ್ರೆಕ್ಕಿಂಗ್‌ಗೆ ಹೊಸ ಗೈಡ್‌ಲೈನ್ಸ್ – ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ: ಈಶ್ವರ್ ಖಂಡ್ರೆ

ಹೈಡ್ರೋಗಾಂಜಾ, ಕೊಕೇನ್, ಮೆಥಾಂಪೈಟಮನ್ ಸೇರಿದಂತೆ ಒಟ್ಟು ಸುಮಾರು 38 ಕೋಟಿ ಮೌಲ್ಯದ ಹಲವು ಬಗೆಯ ಮಾದಕ ವಸ್ತುಗಳನ್ನ ಒಮ್ಮೆಲೆ ನಾಶಪಡಿಸಿದೆ.
ಕಳೆದ ಫೆಬ್ರುವರಿ 5 ರಂದು 11 ಕೋಟಿ ಮೌಲ್ಯದ 1,607 ಕೆಜಿ ಮಾದಕವಸ್ತುವನ್ನ ನಾಶ ಮಾಡಿತ್ತು ಎನ್‌ಸಿಬಿ. ಒಟ್ಟಾರೆ ಈ ವರ್ಷ 49 ಕೋಟಿ ಮೌಲ್ಯದ 1,735 ಕೆಜಿ ಡ್ರಗ್ಸ್ ನಾಶಪಡಿಸಿದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ಕಿರಿಕ್ – ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನ ಕೊಲೆ

