ಮುಂಬೈ: ಟಿಸಿಎಸ್ ಕಾರ್ಪೊರೇಟ್ ಜಿಹಾದ್(TCS Corporate Jihad) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಕ್ಕೆ (SIT) ಬೇಕಾಗಿರುವ ಪ್ರಮುಖ ಆರೋಪಿ ನಿದಾ ಖಾನ್(Nida Khan) ಎಲ್ಲಿದ್ದಾಳೆ ಎನ್ನುವುದು ತನಗೆ ತಿಳಿದಿಲ್ಲ ಎಂದು ಪತಿ ಹೇಳಿದ್ದಾರೆ.
ಟಿಸಿಎಸ್‌ನ ನಾಸಿಕ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನಿದಾ ಖಾನ್ ಎರಡು ತಿಂಗಳ ಹಿಂದೆ ಮಲಾಡ್ ಮತ್ತು ಹಿರಾನಂದನಿಯಲ್ಲಿರುವ ಮುಂಬೈ ಕಚೇರಿಗಳಿಗೆ ವರ್ಗಾಯಿಸಲಾಗಿತ್ತು. ಈಕೆಯ ಪತಿ ನವೀದ್ ಇಕ್ಬಾಲ್ ಖಾನ್ ಥಾಣೆಯ ಮುಂಬ್ರಾದಲ್ಲಿ ಅಮೆಜಾನ್ ವೆಬ್ ಸರ್ವೀಸಸ್‌ನಲ್ಲಿ ಲಾಜಿಸ್ಟಿಕ್ಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿದಾ ಖಾನ್ ಪತಿ ಮೊಯಿನ್ ನವೀದ್ ಇಕ್ಬಾಲ್ ಖಾನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿದಾ ಖಾನ್ ಏಪ್ರಿಲ್ 14 ರಂದು ಮನೆಯಿಂದ ತೆರಳಿದ್ದು ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಜಾಗಕ್ಕೆ ತೆರಳಿದಾಗ ನಿದಾ ಖಾನ್ ಮತ್ತು ಸಂಬಂಧಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.
ಪೊಲೀಸರು ಮತ್ತೆ ಪತಿಯನ್ನು ವಿಚಾರಿಸಿದ ಪತ್ನಿಯನ್ನು ಸೋದರತ್ತೆ ನೂರಿ ಶೇಖ್ ನಾಸಿಕ್‌ಗೆ ಕರೆದೊಯ್ದಿದ್ದಾರೆ. ಆದರೆ ಈಗ ನಿದಾಖಾನ್ ಎಲ್ಲಿದ್ದಾಳೆ ಎನ್ನುವುದು ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ನಾನು ತುಂಬು ಗರ್ಭಿಣಿ: ಜಾಮೀನಿಗೆ ಕೋರ್ಟ್ ಮೊರೆ ಹೋದ ಟಿಸಿಎಸ್ ‘ಮತಾಂತರ’ ಆರೋಪಿ ನಿದಾ ಖಾನ್
ಪತಿ ನೀಡಿದ ವಿಳಾಸದ ಆಧಾರದ ಮೇಲೆ ಪೊಲೀಸರು ಮುಂಬ್ರಾ ಮತ್ತು ನಾಸಿಕ್‌ನಲ್ಲಿರುವ ಸಂಬಂಧಿಕರ ಮನೆಗಳಿಗೆ ತೆರಳಿದಾಗ ಆ ಮನೆಗಳು ಬೀಗ ಹಾಕಲ್ಪಟ್ಟಿರುವುದು ಕಂಡುಬಂದಿದೆ. ಈಗ ಪೊಲೀಸರ 3 ತಂಡ ನಿದಾ ಖಾನ್ ಪತ್ತೆ ಹಚ್ಚಲು ಶೋಧ ಕಾರ್ಯ ನಡೆಸುತ್ತಿದೆ. ಇದನ್ನೂ ಓದಿ: ಇನ್ಫೋಸಿಸ್‌ನಲ್ಲೂ ಕಾರ್ಪೋರೇಟ್ ಜಿಹಾದ್ ಆರೋಪ – ಮಹಾ ಸಚಿವರಿಗೆ ದೂರು
ಆರಂಭದಲ್ಲಿ ನಿದಾ ಖಾನ್ ಹೆಚ್‌ಆರ್ ಮ್ಯಾನೇಜರ್ ಎಂದು ಹೇಳಲಾಗಿತ್ತು. ಆದರೆ ಆಕೆ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ.

