Budget 2026 | ಇರಾನ್‌ಗೆ ಇಲ್ಲ, ಬಾಂಗ್ಲಾ ಅನುದಾನ ಅರ್ಧ ಕಡಿತ

2 Min Read

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ (Union Budget) ಬಾಂಗ್ಲಾದೇಶಕ್ಕೆ (Bangladesh) ನೀಡುವ ಅನುದಾನದಲ್ಲಿ ಅರ್ಧ ಕಡಿತವಾದರೆ ಇರಾನ್‌ನಲ್ಲಿನ (Iran) ಚಾಬಹಾರ್ ಬಂದರು ಯೋಜನೆಗೆ ಯಾವುದೇ ಹಣವನ್ನು ಹಂಚಿಕೆ ಮಾಡಿಲ್ಲ.

- Advertisement -

ಪ್ರತಿವರ್ಷ ದೇಶಗಳಿಗೆ ನೆರವು ಅಡಿ ಹಣವನ್ನು ಹಂಚಿಕೆ ಮಾಡುತ್ತದೆ. ಕಳೆದ ವರ್ಷ 5,483 ಕೋಟಿ ರೂ. ಹಂಚಿಕೆ ಮಾಡಿದ್ದರೆ ಈ ವರ್ಷ 4% ಏರಿಕೆಯಾಗಿದ್ದು ಒಟ್ಟು 5,686 ಕೋಟಿ ರೂ. ಹಣವನ್ನು ಹಂಚಿಕೆ ಮಾಡಿದೆ.

- Advertisement -

ಇರಾನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಾಬಹಾರ್ ಬಂದರು (Chabahar Port) ಯೋಜನೆಗೆ ಪ್ರತಿವರ್ಷ ಅನುದಾನ ನೀಡಲಾಗುತ್ತಿತ್ತು. ಕಳೆದ ವರ್ಷ 100 ಕೋಟಿ ರೂ. ನೀಡಿದ್ದರೆ ಈ ವರ್ಷ ಯಾವುದೇ ಅನುದಾನವನ್ನು ಪ್ರಕಟಿಸಿಲ್ಲ.

- Advertisement -

- Advertisement -

ಪಾಕಿಸ್ತಾನವನ್ನು ಬೈಪಾಸ್ ಮಾಡಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಭಾರತದ ಪ್ರವೇಶಕ್ಕೆ ಪ್ರಮುಖವೆಂದು ಪರಿಗಣಿಸಲಾದ ಯೋಜನೆಯಾದ ಚಾಬಹಾರ್‌ನಲ್ಲಿರುವ ಶಾಹಿದ್ ಬೆಹೆಶ್ಟಿ ಟರ್ಮಿನಲ್ ಅನ್ನು ನಿರ್ವಹಿಸಲು ಭಾರತ 2024 ರಲ್ಲಿ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಈ ನಿರ್ಧಾರ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ 25% ಸುಂಕ ವಿಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಕಾರಣಕ್ಕೆ ಭಾರತ ಈ ಬಜೆಟ್‌ನಲ್ಲಿ ಚಾಬಹಾರ್‌ ಯೋಜನೆಗೆ ಯಾವುದೇ ಅನುದಾನ ನೀಡಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಒಂದು ಚೊಂಬು ಕೊಟ್ಟಿದ್ದಾರೆ: ಬಜೆಟ್‌ನಿಂದ ಅನ್ಯಾಯ ಆಗಿದೆ ಎಂದ ಸಿದ್ದರಾಮಯ್ಯ

ಬಾಂಗ್ಲಾದೇಶದ ಹಂಚಿಕೆಯನ್ನು 120 ಕೋಟಿ ರೂ.ಗಳಿಂದ 60 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಭಾರತದ ಅತಿ ಹೆಚ್ಚು ಪ್ರಮಾಣದಲ್ಲಿ ಭೂತಾನ್‌ಗೆ ಈಗ ನೆರವು ನೀಡುತ್ತಿದೆ.ಭೂತಾನ್‌ನ ಹಂಚಿಕೆಯು ಸುಮಾರು 6% ರಷ್ಟು ಹೆಚ್ಚಾಗಿ 2,289 ಕೋಟಿ ರೂ.ಗಳಿಗೆ ತಲುಪಿದೆ. ನೇಪಾಳದ ಹಂಚಿಕೆಯು ಸುಮಾರು 14% ರಷ್ಟು ಹೆಚ್ಚಾಗಿ 800 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಶ್ರೀಲಂಕಾಗೆ 400 ಕೋಟಿ ರೂ. ಹಂಚಿಕೆಯಾಗಿದೆ

ಮಾಲ್ಡೀವ್ಸ್‌ಗೆ ನೀಡುವ ನೆರವು ಸುಮಾರು 8% ರಷ್ಟು ಕಡಿಮೆಯಾಗಿ 550 ಕೋಟಿ ರೂ.ಗಳಿಗೆ ತಲುಪಿದೆ. ಆದರೆ ಮಾರಿಷಸ್‌ಗೆ ನೀಡುವ ಅನುದಾನ 10% ಏರಿಕೆಯಾಗಿದ್ದು 550 ಕೋಟಿ ರೂ. ಹಂಚಿಕೆಯಾಗಿದೆ.

ಅಫ್ಘಾನಿಸ್ತಾನಕ್ಕೆ ಮಾನವೀಯ ನೆಲೆಗಾಗಿ ಕಳೆದ ವರ್ಷದಂತೆ ಈ ಬಾರಿಯೂ 150 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಮ್ಯಾನ್ಮಾರ್‌ನ ಹಂಚಿಕೆ ಸುಮಾರು 14% ರಷ್ಟು ಕಡಿತವಾಗಿದ್ದು 300 ಕೋಟಿ ರೂ.ಗಳಿಗೆ ತಲುಪಿದೆ. ಆಫ್ರಿಕನ್ ದೇಶಗಳಿಗೆ ಕಳೆದ ವರ್ಷದಂತೆ 225 ಕೋಟಿ ರೂ. ನೀಡಲಾಗುತ್ತದೆ.

Share This Article