ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

2 Min Read

ನವದೆಹಲಿ: ಭಾರತ (India) ಮತ್ತು ಅನಿವಾಸಿ ಭಾರತೀಯರ (NRI) ಬಗ್ಗೆ ಬಾಯಿ ಬಂದಂತೆ ವಿವಾದಾತ್ಮಕ ಪೋಸ್ಟ್ ಒಂದನ್ನು ಡೊನಾಲ್ಡ್‌ ಟ್ರಂಪ್‌ (Donald Trump) ಹಂಚಿಕೊಂಡ ನಂತರ ಆಗಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ (USA) ಈಗ ಡ್ಯಾಮೇಜ್ ಕಂಟ್ರೋಲ್‌ಗೆ ಇಳಿದಿದೆ.

- Advertisement -

ಈ ಹೇಳಿಕೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಭಾರತವು ಅತ್ಯುತ್ತಮ ದೇಶ ಮತ್ತು ಅಲ್ಲಿ ನನ್ನ ಅತ್ಯಂತ ಆಪ್ತ ಸ್ನೇಹಿತ (ಪ್ರಧಾನಿ ಮೋದಿ) ಅಧಿಕಾರದಲ್ಲಿದ್ದಾರೆ ಎಂದು ಟ್ರಂಪ್‌ ಹೊಗಳಿದ್ದಾರೆ ಎಂದು ತಿಳಿಸಿದೆ.

- Advertisement -

ಟ್ರಂಪ್ ಅವರು ಪ್ರಧಾನಿ ಮೋದಿಯನ್ನು (Narenndra Modi) “ಗೆಟ್ಸ್ ಥಿಂಗ್ಸ್ ಡನ್” (ಕೆಲಸ ಮಾಡುವ ವ್ಯಕ್ತಿ) ಎಂದು ಹೊಗಳಿದ್ದಾರೆ ಮತ್ತು ಭಾರತ-ಅಮೆರಿಕ ಸಂಬಂಧವು ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದೆ. ಇದನ್ನೂ ಓದಿ: ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್‌ ಕೆಂಡಾಮಂಡಲ

- Advertisement -

ಭಾರತದ ವಿದೇಶಾಂಗ ವ್ಯವಹಾರಗಳ (MEA) ಸಚಿವಾಲಯವು ಈ ಬಗ್ಗೆ ಅತ್ಯಂತ ಎಚ್ಚರಿಕೆಯ ಮತ್ತು ಸಂಯಮದ ಪ್ರತಿಕ್ರಿಯೆ ನೀಡಿದೆ. ವಕ್ತಾರ ರಂಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ನಾವು ಕೆಲವು ವರದಿಗಳನ್ನು ಗಮನಿಸಿದ್ದೇವೆ, ಅದಕ್ಕಿಂತ ಹೆಚ್ಚು ಹೇಳಲು ಏನೂ ಇಲ್ಲ ಎಂದು ಹೇಳುವ ಮೂಲಕ ವಿಷಯವನ್ನು ದೊಡ್ಡದು ಮಾಡದಿರಲು ನಿರ್ಧರಿಸಿದೆ

- Advertisement -

ರಾತ್ರಿ ವಿದೇಶಾಂಗ ಇಲಾಖೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ನಾವು ಆ ಕಾಮೆಂಟ್‌ಗಳನ್ನು ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ರಾಯಭಾರ ಕಚೇರಿ ನೀಡಿದ ಹೇಳಿಕೆಯನ್ನು ನೋಡಿದ್ದೇವೆ. ಈ ಹೇಳಿಕೆಗಳು ಸ್ಪಷ್ಟವಾಗಿ ಮಾಹಿತಿರಹಿತ, ಅನುಚಿತ ಮತ್ತು ಕಳಪೆ ಅಭಿರುಚಿಯಿಂದ ಕೂಡಿವೆ. ಅವು ಖಂಡಿತವಾಗಿಯೂ ಪರಸ್ಪರ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿಗಳನ್ನು ಆಧರಿಸಿದ ಭಾರತ-ಅಮೆರಿಕ ಸಂಬಂಧದ ವಾಸ್ತವತೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: Kissing My Ass – ಸೌದಿ ರಾಜ ಎಂಬಿಎಸ್‌ಗೆ ಟ್ರಂಪ್‌ ವ್ಯಂಗ್ಯ

ಟ್ರಂಪ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಅಥವಾ ಅವರ ಹೇಳಿಕೆಯನ್ನು ಟೀಕಿಸದೆ ಭಾರತವು ಈ ವಿವಾದದಿಂದ ದೂರವಿರಲು ಪ್ರಯತ್ನಿಸಿದೆ.

ಡೊನಾಲ್ಡ್‌ ಟ್ರಂಪ್‌ ಪ್ರತಿ ಎರಡು ಗಂಟೆಗೊಮ್ಮೆ ಏನನ್ನಾದರೂ ಪೋಸ್ಟ್ ಮಾಡುತ್ತಿರುತ್ತಾರೆ. ನಾವು ಪ್ರತಿಯೊಂದಕ್ಕೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಮಾಧ್ಯಮವೊಂದು ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತದ ಮೇಲೆ ಟ್ರಂಪ್‌ಗೆ ಸಿಟ್ಯಾಕೆ?

ಡೊನಾಲ್ಡ್‌ ಟ್ರಂಪ್‌ ಈ ಹಿಂದೆ ಭಾರತದ ಆರ್ಥಿಕತೆಯನ್ನು ಡೆಡ್‌ ಎಕಾನಮಿ ಎಂದು ಕರೆದಿದ್ದರು. ಟ್ರಂಪ್‌ ಬೇರೆ ದೇಶಗಳನ್ನು ನಾಯಕರ ಬಗ್ಗೆ ಬಹಿರಂಗವಾಗಿಯೇ ಕೇವಲವಾಗಿ ಮಾತನಾಡುತ್ತಾರೆ. ಈ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟ್ರಂಪ್‌ ಶ್ವೇತ ಭವನದಲ್ಲೇ ಅವಮಾನ ಮಾಡಿ ಕಳುಹಿಸಿದ್ದರು.

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಈ ವಿಷಯದಲ್ಲಿ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿವೆ ಮತ್ತು ಇದು 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ ಎಂದು ಟೀಕಿಸಿವೆ.

Share This Article