ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ದತ್ತು ಪಡೆದ ದುಬೈ ದಂಪತಿ

2 Min Read

– ಹೊಸ ಅಪ್ಪ, ಅಮ್ಮನೊಂದಿಗೆ ದುಬೈಗೆ ಹಾರಿದ ಬಾಲಕಿ
– ಚಿಕಿತ್ಸೆ ಕೊಡಿಸೋದಾಗಿ ಭರವಸೆ ನೀಡಿದ ದಂಪತಿ

ಚಿಕ್ಕಬಳ್ಳಾಪುರ: ಆ ಮಗುವಿಗೆ ಅಪ್ಪ ಇರಲಿಲ್ಲ. ಅಮ್ಮನಿಗೆ ಸಾಕೋ ಶಕ್ತಿ ಇರಲಿಲ್ಲ. ಭಿಕ್ಷೆ ಬೇಡಿ ಮಗು ಸಾಕೋಕೆ ಆಗದೇ ಕೊನೆಗೆ ಮಾರಾಟ ಮಾಡೋಕೆ ಮುಂದಾಗಿದ್ದಳು. ಇಂದು ಅದೇ ಬಾಲಕಿ ದುಬೈ (Dubai) ದಂಪತಿಯ ಮಡಿಲು ಸೇರಿದೆ. ಈ ಮೂಲಕ ಮಗುವಿನ ಭವಿಷ್ಯದ ಬದುಕಿಗೆ ಹೊಸ ಬೆಳಕು ಮೂಡಿದಂತಾಗಿದೆ.

- Advertisement -

ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ ಕಳೆದ ಐದು ವರ್ಷಗಳ ಹಿಂದೆ ಭಿಕ್ಷೆ ಬೇಡುತ್ತಿದ್ದ ಮಹಿಳೆ ಮಗುವನ್ನ ಮಾರಾಟ ಮಾಡೋಕೆ ಮುಂದಾಗಿದ್ದಾಳೆ. ಈ ವಿಚಾರ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಗುವಿನ ತಾಯಿಯ ಮನವೊಲಿಸಿ ಮಗುವನ್ನ ವಶಕ್ಕೆ ಪಡೆದುಕೊಂಡಿದ್ದರು. ಮಗು ವಶಕ್ಕೆ ಪಡೆದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಗುವಿಗೆ ಹೃದಯ ಸಮಸ್ಯೆ ಇರುವುದು ಬೆಳಕಿಗೆ ಬಂದಿತ್ತು. ಐದು ವರ್ಷಗಳಿಂದ ಮಗುವಿನ ಆರೈಕೆ ಮಾಡಿದ ಅಧಿಕಾರಿಗಳು ಇಂದು ದತ್ತು ಪ್ರಕ್ರಿಯೆಯಡಿ ಏಳು ವರ್ಷದ ಬಾಲಕಿಯನ್ನು ದುಬೈ ದಂಪತಿಗಳಿಗೆ ದತ್ತು ನೀಡಿದ್ದಾರೆ. ಇದನ್ನೂ ಓದಿ: SSLC Results| ಸರ್ಕಾರಿ ಶಾಲೆಯಲ್ಲಿ ಓದಿದ ಚಿಕ್ಕೋಡಿಯ ಪ್ರಾರ್ಥನಾ ರಾಜ್ಯಕ್ಕೆ ಫಸ್ಟ್‌

- Advertisement -

- Advertisement -

- Advertisement -

ಭಾರತೀಯ ಮೂಲದ ದುಬೈನಲ್ಲಿ ನೆಲೆಸಿರುವ ದಂಪತಿ ಬಾಲಕಿಗೆ ಹೃದಯದ ಸಮಸ್ಯೆ ಇದ್ದರೂ ಸಹ ಬಾಲಕಿಗೆ ಚಿಕಿತ್ಸೆ ಕೊಡಿಸಿ ಸಾಕಿಕೊಳ್ಳುವುದಾಗಿ ಹೇಳಿ ಹಾಗೂ ಆಕೆಯನ್ನ ಉತ್ತಮ ಸಾಧಕಿಯನ್ನಾಗಿ ಮಾಡುವ ಭರವಸೆಯನ್ನು ನೀಡಿ ದತ್ತು ಪಡೆದುಕೊಂಡಿದ್ದಾರೆ. ಇದರಿಂದ ಬಾಲಕಿಗೆ ಹೊಸ ಬೆಳಕು ಭವಿಷ್ಯ ದೊರೆತಂತಾಗಿದೆ.

ಇಂದು (ಏ.23) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kempegowda International Airport) ದಂಪತಿ ಜೊತೆಯಲ್ಲಿ ಮಗು ದುಬೈಗೆ ಪ್ರಯಾಣ ಬೆಳೆಸಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನವತಾಜ್ ಮಾಹಿತಿ ಹಂಚಿಕೊಂಡಿದ್ದು, ಬಾಲಕಿಗೆ ಹೃದಯ ಸಮಸ್ಯೆ ಇದ್ದ ಕಾರಣ ಭಾರತೀಯರು ಯಾರೂ ಕೂಡ ದತ್ತು ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ಆದರೆ ದುಬೈ ದಂಪತಿ ಮುಂದೆ ಬಂದು ಬಾಲಕಿಯನ್ನ ದತ್ತು ಪಡೆದಿದ್ದು ಸಂತಸ ತಂದಿದೆ. ಮಗುವಿಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಮುಂದೆ ಇನ್ನೂ 2 ವರ್ಷದ ನಂತರ ಸಣ್ಣ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ. ದಂಪತಿ ಚಿಕಿತ್ಸೆ ಕೊಡಿಸಿ ಸಾಕಿಕೊಳ್ಳುವುದಾಗಿ ಭರವಸೆ ನೀಡಿ ದತ್ತು ಪಡೆದುಕೊಂಡಿದ್ದಾರೆ. ಇದು ಸಂತೋಷದ ವಿಚಾರ. ಮಗುವಿನ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.ಇದನ್ನೂ ಓದಿ: West Bengal Election | ಮತದಾನ ಆರಂಭವಾಗುವ ಮೊದಲೇ ಮತಗಟ್ಟೆಗೆ ಆಗಮಿಸಿದ ಆನೆ!

Share This Article