ಮುಂಬೈ: ಕ್ರಿಕೆಟರ್ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಅವರ ಜೊತೆಯಲ್ಲಿ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ನದಿ ತೀರದಲ್ಲಿ ಕಲ್ಲಿನ ಮೇಲೆ ಕುಳಿತುಕೊಂಡಿರುವ ಸುಂದರ ಫೋಟೊ ಒಂದನ್ನು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನೀನು ನನ್ನ ಜೊತೆಗಿರುವಾಗ, ನಾನು ಎಲ್ಲಿದ್ದರೂ ಮನೆಯಲ್ಲಿರುವಂತೆ ಅನ್ನಿಸುತ್ತಿದೆ ಎನ್ನುವ ಸಾಲುಗಳನ್ನು ಬರೆದುಕೊಂಡು ಪತ್ನಿಯ ಕುರಿತಾಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ
View this post on Instagram
ಈ ಪೋಸ್ಟ್ಗೆ ಅನುಷ್ಕಾ ಶರ್ಮಾ ಕೂಡ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದು, ಗ್ರೇಟ್, ಯಾಕೆಂದರೆ ನೀನು ಮನೆಯಲ್ಲಿರುವುದೇ ಅಪರೂಪ ಎಂಬರ್ಥದಲ್ಲಿ ಎಂದು ಕಾಮೆಂಟ್ ಮಾಡಿ ನಗುವಿನ ಎಮೋಜಿ ಹಾಕಿದ್ದಾರೆ. ಈ ಮುದ್ದಾದ ಜೋಡಿ ಫೋಟೋ ನೋಡಿದ ಅಭಿಮಾನಿಗಳು ನೀವು ಹೀಗೆ ಇರಿ ಎಂದು ಕಾಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಒಬ್ಬರಿಗೊಬ್ಬರು ಪ್ರೀತಿಸುವುದಕ್ಕಿಂತಲೂ ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಇಬ್ಬರು ತಮ್ಮ ಕೆಲವನ್ನು ಗೌರವಿಸುತ್ತಿದ್ದಾರೆ.