– ಮತದಾರರಿಗೆ ಹಂಚಲು ತಂದಿದ್ದ ನೂರಾರು ಟಿಫಿನ್ ಬಾಕ್ಸ್ ಜಪ್ತಿ
ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಆಪ್ತ ನಾಗೇಶ್ ಮನ್ನೋಳ್ಕರ್ಗೆ (Nagesh Manolkar) ಚುನಾವಣೆ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮತಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಂದಿದ್ದ ನೂರಾರು ಟಿಫಿನ್ ಬಾಕ್ಸ್ಗಳನ್ನು (Tiffin Box) ಜಪ್ತಿ ಮಾಡಿಕೊಂಡಿದ್ದಾರೆ.
ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಟಿಫಿನ್ ಬಾಕ್ಸ್ಗಳನ್ನು ಬೆಳಗಾವಿ ಡಿಸಿ, ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಮಾರ್ಗದರ್ಶನದಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. ಬೆಳಗಾವಿ (Belagavi) ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಗಿಫ್ಟ್ ಕೊಡಲು ಟಿಫಿನ್ ಬಾಕ್ಸ್ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು
ದಾಳಿ ವೇಳೆ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಇರುವ ಟಿಫಿನ್ ಬಾಕ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. 400 ಕ್ಕೂ ಅಧಿಕ ಟಿಫಿನ್ ಬಾಕ್ಸ್ ಜಪ್ತಿ ಮಾಡಿಕೊಂಡ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಅಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು
ಇತ್ತೀಚೆಗೆ ಬಾಡೂಟ ಆಯೋಜನೆ ಹಿನ್ನೆಲೆ ನಾಗೇಶ್ ಮನ್ನೋಳ್ಕರ್ ಸೇರಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿತ್ತು.