ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ‘ಅನಿಮಲ್’ (Animal) ಖ್ಯಾತಿಯ ಅನಿಲ್ ಕಪೂರ್ (Anil Kapoor) ಎಂಟ್ರಿ ಕೊಟ್ಟಿದ್ದಾರೆ.
ಆಲಿಯಾ ಭಟ್ ಹೀರೋಯಿನ್ ಆಗಿ ಡ್ಯುಯೇಟ್ ಹಾಡೋಕೆ ಸೈ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸೋದಕ್ಕೂ ಮುಂದಿದ್ದಾರೆ. ಹೀಗಿರುವಾಗ ಆಲಿಯಾ ಆ್ಯಕ್ಷನ್ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಫೋಟೋಗೆ ರಶ್ಮಿಕಾರನ್ನು ಹೋಲಿಸಿದ ನೆಟ್ಟಿಗರು
ಪತ್ತೇದಾರಿ ಸಿನಿಮಾದಲ್ಲಿ ಆಲಿಯಾ ಭಟ್ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಆಲಿಯಾಗೆ ಸಾಥ್ ನೀಡಲು ಅನಿಲ್ ಕಪೂರ್ ಕೂಡ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾ ಏಜೆಂಟ್ ಮುಖ್ಯಸ್ಥ ಪಾತ್ರದಲ್ಲಿ ಅನಿಲ್ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಹೆಣ್ಣಿಗೆ ನೋವು ಕೊಟ್ಟರೆ ಉದ್ಧಾರ ಆಗಲ್ಲ- ಅಶ್ವಿನಿ ಬೆಂಬಲಕ್ಕೆ ನಿಂತ ಜಗ್ಗೇಶ್
ಟೈಗರ್ 3, ವಾರ್ 2 ಸಿನಿಮಾದ ನಂತರ ಆಲಿಯಾ ಹೊಸ ಸಿನಿಮಾ ಸೆಟ್ಟೇರಲಿದೆ. ಸದ್ಯದಲ್ಲಿ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ.