ಕನ್ನಡದ ಮತ್ತೊಂದು ಭಾರೀ ಬಜೆಟ್ ಸಿನಿಮಾ ‘ಕಬ್ಜ’ (Kabzaa) ಇನ್ನೇನು ತೆರೆಗೆ ಬರಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫೆ.4 ರಂದು ಹೈದರಾಬಾದ್ ನಲ್ಲಿ ಈ ಸಿನಿಮಾದ ಹಾಡೊಂದನ್ನು ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಆಂಧ್ರ (Andhra Pradesh) ಮತ್ತು ತೆಲಂಗಾಣದ (Telangana) ವಿತರಣಾ ಹಕ್ಕು ಮಾರಾಟವಾಗಿದೆ. ತೆಲುಗಿನ ಖ್ಯಾತ ನಟ ನಿತಿನ್ (Nitin) ಈ ಸಿನಿಮಾವನ್ನು ಎರಡೂ ರಾಜ್ಯಗಳಿಗೆ ವಿತರಣೆ ಮಾಡುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಉಪೇಂದ್ರ (Upendra) ಮತ್ತು ಸುದೀಪ್ (Sudeep) ಅವರನ್ನು ನಿಮ್ಮ ಮುಂದೆ ತರಲು ಖುಷಿ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಕಬ್ಜ ಸಿನಿಮಾದ ಹಿಂದಿ ಹಕ್ಕುಗಳು ಈಗಾಗಲೇ ಭರ್ಜರಿಯಾಗಿಯೇ ಮಾರಾಟವಾಗಿವೆ. ಬಾಲಿವುಡ್ ನ ಪ್ರತಿಷ್ಠಿತ ಸಂಸ್ಥೆಯೇ ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದೆ. ಅಲ್ಲದೇ, ಚಿತ್ರದ ಟ್ರೈಲರ್ ಬಿಡುಗಡೆಯನ್ನು ಮುಂಬೈನಲ್ಲಿ ಮಾಡಲು ಸಿದ್ಧತೆ ಕೂಡ ನಡೆಸಿದೆ. ಈ ಹೊತ್ತಿನಲ್ಲಿ ತೆಲುಗಿನ ಹಕ್ಕು ಮತ್ತೋರ್ವ ಖ್ಯಾತ ನಟನ ಸಂಸ್ಥೆಗೆ ಮಾರಾಟವಾಗಿದ್ದು, ಸಹಜವಾಗಿಯೇ ನಿರ್ದೇಶಕ ಆರ್.ಚಂದ್ರು ಅವರಿಗೆ ಸಂಭ್ರಮ ತಂದಿದೆ. ನಟ ನಿತಿನ್ ಅವರಿಗೆ ಚಂದ್ರು (R. Chandru) ಕೂಡ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್ ತೇಜ್
ಕಬ್ಜ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಒಂಬತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್ 2 ಸಿನಿಮಾದ ನಂತರ ಮತ್ತೊಂದು ಕನ್ನಡದ ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ಈಗಾಗಲೇ ಭಾರತೀಯ ಸಿನಿಮಾ ರಂಗ ಮತ್ತೊಮ್ಮೆ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುತ್ತಿದೆ. ಈಗಾಗಲೇ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿರುವ ಚಂದ್ರು, ಈಗ ಮತ್ತೊಂದು ಅದ್ಧೂರಿ ಸಿನಿಮಾವನ್ನೇ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಭಾರೀ ನಿರೀಕ್ಷೆ ಮೂಡಿಸಿದ್ದಾರೆ.
ಉಪೇಂದ್ರ, ಸುದೀಪ್ ಮತ್ತು ಚಂದ್ರು ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಮೇಕಿಂಗ್ ನಿಂದಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ಅದ್ಧೂರಿ ಮೇಕಿಂಗ್, ಭರ್ಜರಿ ತಾರಾಗಣ, ಸೆಟ್, ಹಿನ್ನೆಲೆ ಸಂಗೀತ ಹೀಗೆ ಪ್ರತಿ ವಿಭಾಗದಲ್ಲೂ ಸಿನಿಮಾ ಶ್ರೀಮಂತಿಕೆಯನ್ನು ಹೊತ್ತು ತರುತ್ತಿದೆ. ಹಾಗಾಗಿ ಈ ಸಿನಿಮಾ ಕೂಡ ಮತ್ತೊಂದು ಇತಿಹಾಸ ಬರೆಯಲಿದೆ ಎಂದು ಬಣ್ಣಿಸಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k