ಬೆಳಗಾವಿ: ವೃದ್ಧನೊಬ್ಬ ಟೆರೇಸ್ ಮೇಲೆ ಹತ್ತಿ ಗ್ಯಾಲರಿಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಶಾಹುನಗರದಲ್ಲಿ ನಡೆದಿದೆ.
ಶಿವಾಜಿ ಬಿರ್ಜೆ(65) ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಈತ ನಗರದ ಶಾಹುನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಖಾಸಗಿ ಕಾಲೇಜಿನ ಹಾಸ್ಟೆಲ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಶಿವಾಜಿ ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಆದರೆ ಇಂದು ಟೆರೇಸ್ ಮೇಲೆ ಹತ್ತಿ ಗ್ಯಾಲರಿಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ವೃದ್ಧನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದ ಯುವಕ!
ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕಟ್ಟಡದ ಮೇಲೆ ಶವ ನೇತಾಡುವುದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್