
ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ನೀಡಿದ ಬೆನ್ನಲ್ಲೇ ಹೊಸ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಪಡ್ಡೆಹುಡುಗರ ಹಾರ್ಟ್‌ನಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಪಿಂಕ್ ಕಲರ್ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಆಲಿಯಾ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಖತ್ ಸದ್ದು ಮಾಡುತ್ತಿದೆ.
View this post on Instagram
ರಣ್‌ಬೀರ್ ಮತ್ತು ಆಲಿಯಾ ಭಟ್ ಏಪ್ರಿಲ್ 14ರಂದು ಹಸೆಮಣೆ ಏರಿದ್ದರು. ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಆಲಿಯಾ ಅಮ್ಮನಾಗುತ್ತಿರುವ ಗುಡ್ ನ್ಯೂಸ್ ಕೂಡ ಕೊಟ್ಟಿದ್ದರು. ಇನ್ನು ಮದುವೆಯ ನಂತರ ಮೊದಲ ಬಾರಿಗೆ ಫೋಟೋಶೂಟ್ ಮಾಡಿಸಿರುವ ಆಲಿಯಾ ಪಿಂಕ್ ಕಲರ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ನಯನತಾರಾ ಪ್ರೀತಿಯ ಅಪ್ಪುಗೆಯಲ್ಲಿ ಮೈಮರೆತ ವಿಘ್ನೇಶ್: ಫೋಟೋ ವೈರಲ್
View this post on Instagram
ನಟಿ ಆಲಿಯಾ ಭಟ್ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಜತೆಗೆ ಈಗ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಆಲಿಯಾ `ಡಾರ್ಲಿಂಗ್ಸ್’ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ಒಟಿಟಿನಲ್ಲಿ ಆಗಸ್ಟ್ 5ಕ್ಕೆ ತೆರೆ ಕಾಣಲಿದೆ.
Live Tv