ಬೆಂಗಳೂರು: ಎಐನಿಂದ ರಸ್ತೆಗುಂಡಿ ಗಂಡಾಂತರ ಬಯಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ಒಂದರಲ್ಲೇ 27 ಸಾವಿರ ಗುಂಡಿ ಇರುವುದು ಬಯಲಾಗಿದೆ. ಎಐ ಸರ್ವೆಯಲ್ಲಿ ಬಯಲಾಗಿದ್ದು, ಡಿಸೆಂಬರ್ ವೇಳೆಗೆ ಗುಂಡಿ ಮುಚ್ಚುವ ಗುರಿ ಹೊಂದಲಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ಸೇರಿದ್ರೆ ಕೇವಲ 3 ರಿಂದ 4 ಸಾವಿರ ಗುಂಡಿ ಇವೆ ಅಂತಾ ಅಧಿಕಾರಿಗಳು ಹೇಳುತ್ತಿದ್ದರು. ಈಗ AI ಸರ್ವೆಯಲ್ಲಿ ರಸ್ತೆ ಗುಂಡಿ ಗಂಡಾಂತರ ಬಯಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ಒಂದರಲ್ಲೇ 27 ಸಾವಿರ ಗುಂಡಿ ಇವೆ. ಸಚಿವ ಕೃಷ್ಣಬೈರೇಗೌಡರ (Krishna Byregowda) ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೂಡ ಚರ್ಚೆ ಆಗಿದೆ.
ಆರ್ಟಿರಿಯಲ್ , ಸಬ್ ಆರ್ಟಿರಿಯಲ್ ಮತ್ತು ವಾರ್ಡ್ ರಸ್ತೆಗಳಲ್ಲಿ ಎಐ ಸರ್ವೆ ಆಗಿದೆ. ಅದರಲ್ಲಿ 27 ಸಾವಿರ ಗುಂಡಿಗಳಿವೆ. ಮಹಾದೇವಪುರ, ಕೆ.ಆರ್ ಪುರಂನ 80% ಪ್ರದೇಶಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಗೆ ಬರುತ್ತವೆ. ಅಲ್ಲಿಯೇ 27 ಸಾವಿರ ಗುಂಡಿ ಇದ್ದು, ಈ ಹಿಂದೆ ರಸ್ತೆ ಗುಂಡಿ ಮುಚ್ಚಿಲ್ಲವ ಎಂಬ ಪ್ರಶ್ನೆ ಹುಟ್ಟುತ್ತೆ. ಪ್ರತಿ ವಾರ್ಡ್ ನಲ್ಲಿ ರಸ್ತೆ ಗುಂಡಿ ಮುಚ್ಚಿ ವಾರ್ಡ್ ಫ್ರೀ ರಸ್ತೆ ಗುಂಡಿ ಮಾಡೋದಕ್ಕೆ ಹೊರಟಿದ್ದಾರೆ.
