Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮೆರಿಕ ಇರಾನ್‌ ನಡುವೆ ಶಾಂತಿ ಮಾತುಕತೆ – ಇಸ್ಲಾಮಾಬಾದ್‌ನಲ್ಲಿ ಕೌಂಟ್‌ಡೌನ್ ಶುರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಮೆರಿಕ ಇರಾನ್‌ ನಡುವೆ ಶಾಂತಿ ಮಾತುಕತೆ – ಇಸ್ಲಾಮಾಬಾದ್‌ನಲ್ಲಿ ಕೌಂಟ್‌ಡೌನ್ ಶುರು

Latest

ಅಮೆರಿಕ ಇರಾನ್‌ ನಡುವೆ ಶಾಂತಿ ಮಾತುಕತೆ – ಇಸ್ಲಾಮಾಬಾದ್‌ನಲ್ಲಿ ಕೌಂಟ್‌ಡೌನ್ ಶುರು

Public TV
Last updated: April 21, 2026 10:53 pm
Public TV
Share
3 Min Read
mojtaba khamenei and trump
SHARE

– ಇರಾನ್ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಪಾಕ್

ಟೆಹ್ರಾನ್‌/ವಾಷಿಂಗ್ಟನ್‌: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಬುಧವಾರ ನಿರ್ಣಾಯಕ ದಿನ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಮುಂದಾಗಿರುವ ಪಾಕಿಸ್ತಾನ ಎರಡು ದೇಶಗಳ ನಡುವೆ ಮತ್ತೊಂದು ಕದನ ವಿರಾಮಕ್ಕೆ ಸಂಬಂಧಿಸಿದ ಶಾಂತಿ ಮಾತುಕತೆಯ ಸಭೆ ಆಯೋಜಿಸಿದೆ. ಅಮೆರಿಕ ಇಸ್ಲಾಮಾಬಾದ್‌ಗೆ ಹೊರಟು ನಿಂತರೆ ಇತ್ತ ಇರಾನ್ ಬರುವಿಕೆ ಇನ್ನೂ ಅಸ್ಪಷ್ಟವಾಗಿದೆ. ಈ ನಡುವೆ ಮಾತುಕತೆಗೂ ಮುನ್ನ ಪಾಕ್ ಇಟ್ಟ ಪ್ರಸ್ತಾಪವೊಂದನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಏರ್ಪಟ್ಟಿರುವ ಸಂಘರ್ಷವನ್ನ ಅಂತ್ಯಗೊಳಿಸುವ ನಿಟ್ಟಿನಲ್ಲಿ ಬುಧವಾರ (ಏ.22) ಅತ್ಯಂತ ನಿರ್ಣಾಯಕ ದಿನ. ಅಮೆರಿಕ ಮತ್ತು ಇರಾನ್ ನಡುವೆ ಇಂದು 2ನೇ ಸುತ್ತಿನ ಶಾಂತಿ ಮಾತುಕತೆ ನಡೆಯುವ ಸಾಧ್ಯತೆಗಳಿವೆ. ಇಸ್ಲಾಮಾಬಾದ್‌ ನಲ್ಲಿ ಸಭೆ ಆಯೋಜಿಸಿರುವ ಪಾಕಿಸ್ತಾನದ ನಾಯಕರು ಎರಡು ದೇಶಗಳ ನಾಯಕತ ಬರುವಿಕೆ ಕಾಯುತ್ತಿದ್ದಾರೆ.

Pakistan PM Shehbaz Sharif gets trolled over post on US Iran ceasefire Donald Trump

ಪಾಕ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನೇತೃತ್ವದ ನಿಯೋಗ ಈಗಾಗಲೇ ಅಮೆರಿಕದಿಂದ ಹೊರಟಿದೆ. ಭದ್ರತೆಯ ಕಾರಣಗಳಿಗಾಗಿ ನಿಯೋಗದಲ್ಲಿ ಯಾರಿದ್ದಾರೆ ಮತ್ತು ಅವರು ಯಾವ ಸಮಯಕ್ಕೆ ಪಾಕ್ ತಲುಪಲಿದ್ದಾರೆ ಎನ್ನುವ ಮಾಹಿತಿ ಗೌಪ್ಯವಾಗಿಡಲಾಗಿದೆ. ಆದರೆ ಸಭೆಯಲ್ಲಿ ಇರಾನ್‌ನ ನಿಯೋಗ ಪಾಲ್ಗೊಳ್ಳುತ್ತದೆಯೇ ಮತ್ತು ಪಾಲ್ಗೊಂಡರೆ ಅದರ ನೇತೃತ್ವವನ್ನ ಯಾರು ವಹಿಸುತ್ತಾರೆ ಎಂಬ ಬಗ್ಗೆ ಇರಾನ್ ಯಾವುದೇ ಮಾಹಿತಿ ನೀಡಿಲ್ಲ. ಈ‌ನಡುವೆ ಇರಾನ್‍ನಿಂದ ಯಾವುದೇ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ ನೀಡಿಲ್ಲ ಎಂದು ಇರಾನ್‍ನ ಸರಕಾರಿ ಸ್ವಾಮ್ಯದ ಸುದ್ದಿ ವಾಹಿನಿ ಹೇಳಿಕೆ ನೀಡಿದೆ.

ಇರಾನ್ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಪಾಕ್
ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂತಿ ಮಾತುಕತೆಗೆ ನಿಯೋಗವನ್ನ ಕಳುಹಿಸುವುದೇ ಅಥವಾ ಇಲ್ಲವೇ ಎಂಬುದರ ಕುರಿತು ಇರಾನ್‌ನಿಂದ ಔಪಚಾರಿಕ ಪ್ರತಿಕ್ರಿಯೆಗಾಗಿ ಇನ್ನೂ ಕಾಯುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ. ಇಸ್ಲಾಮಾಬಾದ್ ಇರಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ರಾಜತಾಂತ್ರಿಕತೆಯನ್ನು ಹಳಿಯಲ್ಲಿಡಲು ಪ್ರಯತ್ನಗಳನ್ನ ಮುಂದುವರೆಸುತ್ತಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಹೇಳಿದ್ದಾರೆ. ಇರಾನ್ ಭಾಗವಹಿಸುವಿಕೆಯ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ ಪಾಕಿಸ್ತಾನವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂವಾದ ಮತ್ತು ನಿಶ್ಚಿತಾರ್ಥವನ್ನ ಮುಂದುವರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Pakistan signs MoU with Donald Trump linked World Liberty Finance

2 ವಾರಗಳ ಕದನ ವಿರಾಮ ವಿಸ್ತರಿಸಲು ಪಾಕ್‌ ಒತ್ತಾಯ
ಬುಧವಾರ ನಡೆಯಬೇಕಿರುವ ಸಭೆಗೂ ಮುನ್ನ ಪಾಕಿಸ್ತಾನವು ಅಮೆರಿಕ ಮತ್ತು ಇರಾನ್‌ಗಳಿಗೆ ಎರಡು ವಾರಗಳ ಕದನ ವಿರಾಮವನ್ನು ವಿಸ್ತರಿಸುವಂತೆ ಕರೆ ನೀಡಿದೆ, ಎರಡೂ ಕಡೆಯವರು ರಾಜತಾಂತ್ರಿಕ ಮಾರ್ಗಗಳನ್ನು ಮುಕ್ತವಾಗಿರಿಸಿಕೊಳ್ಳುವಂತೆ ಒತ್ತಾಯಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ವಿದೇಶಾಂಗ ಸಚಿವೆ ಇಶಾಕ್ ದಾರ್ ಅವರು ಅಮೆರಿಕದ ಉಸ್ತುವಾರಿ ನಟಾಲಿ ಎ. ಬೇಕರ್ ಅವರೊಂದಿಗಿನ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನಿರಂತರ ಮಾತುಕತೆಯ ಅಗತ್ಯವನ್ನು ದಾರ್ ಒತ್ತಿ ಹೇಳಿದ್ದು, ಮಾತುಕತೆಗೆ ಹೆಚ್ಚಿನ ಸಮಯವನ್ನ ನೀಡಲು ಕದನ ವಿರಾಮವನ್ನ ವಿಸ್ತರಿಸುವುದನ್ನು ಪರಿಗಣಿಸುವಂತೆ ಎರಡೂ ದೇಶಗಳನ್ನು ಒತ್ತಾಯಿಸಿದ್ದಾರೆ.

ಕದನ ವಿರಾಮ ವಿಸ್ತರಣೆ ತಿರಸ್ಕರಿಸಿದ ಟ್ರಂಪ್
ಶಾಂತಿ ಮಾತುಕತೆಗೂ ಮುನ್ನ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ. ಇರಾನ್ ಜೊತೆಗಿನ ಬಿಕ್ಕಟ್ಟು ಮಹಾನ್ ಒಪ್ಪಂದದೊಂದಿಗೆ ಕೊನೆಗೊಳ್ಳಬಹುದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಮಾತುಕತೆ ಮುರಿದು ಬಿದ್ದರೆ ಅಗತ್ಯಬಿದ್ದರೆ ಇರಾನ್ ವಿರುದ್ಧ ಕ್ರಮ ಕೈಗೊಳ್ಳಲು ಅಮೆರಿಕ ಮಿಲಿಟರಿ ಸಿದ್ಧವಾಗಿದೆ ಎಂದು ಎಚ್ಚರಿಸಿದ್ದಾರೆ.

ಇರಾನ್‍ನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಯಶಸ್ವಿಯಾಗಿದ್ದು ಇದು ಮಾತುಕತೆಯ ಸಂದರ್ಭ ಅಮೆರಿಕಕ್ಕೆ `ಚೌಕಾಶಿಯ ಶಕ್ತಿ’ಯನ್ನು ಒದಗಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸುವ ಸಾಧ್ಯತೆಯೇ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಟ್ರಂಪ್ ಅಮೆರಿಕ ಪ್ರಸ್ತಾಪವನ್ನ ತಿರಸ್ಕರಿಸಿದ್ದು ಇರಾನ್ ಅಮೆರಿಕದ ಷರತ್ತುಗಳನ್ನು ಒಪ್ಪಬೇಕು ಇಲ್ಲ ಪರಿಣಾಮ ಎದುರಿಸಬೇಕು ಎಂದು ನೇರ ಎಚ್ಚರಿಕೆ ರವಾನಿಸಿದ್ದಾರೆ.

TAGGED:American Militarydonald trumpIran CeasefirepakistanUS Presidentwarಅಮೆರಿಕಅಮೆರಿಕ ಇರಾನ್‌ ಒಪ್ಪಂದಇರಾನ್ಪಾಕಿಸ್ತಾನ
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Abhishek Sharma 3
Cricket

ಹೈದ್ರಾಬಾದ್‌ನಲ್ಲಿ ಸನ್‌ ರೈಸರ್ಸ್‌ ದರ್ಬಾರ್, ಶತಕ ಸಿಡಿಸಿ ಮೆರೆದಾಡಿದ ಅಭಿ – SRHಗೆ 47 ರನ್‌ಗಳ ಭರ್ಜರಿ ಜಯ

Public TV
By Public TV
55 minutes ago
NIA 2
Bengaluru City

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ – ಪ್ರಕರಣದ 3ನೇ ಅಪರಾಧಿಗೆ 6 ವರ್ಷ ಜೈಲು

Public TV
By Public TV
1 hour ago
Rahul Gandhi 1
Latest

ರಾಹುಲ್‌ ಗಾಂಧಿ ಕೋಲ್ಕತ್ತಾ ಭೇಟಿ ರದ್ದು – ಅನುಮತಿ ನಿರಾಕರಣೆಗೆ ದೀದಿ ಸರ್ಕಾರವೇ ಕಾರಣ: ಕಾಂಗ್ರೆಸ್ ಆರೋಪ

Public TV
By Public TV
2 hours ago
Odisha dog
Latest

30 ಮಕ್ಕಳ ರಕ್ಷಣೆಗೆ ವಿಷಪೂರಿತ ಹಾವಿನೊಂದಿಗೆ ಕಾದಾಡಿ ನಾಯಿ ಸಾವು – ಮೆರವಣಿಗೆ ಮಾಡಿ, ಗ್ರಾಮಸ್ಥರಿಂದ ಅಂತ್ಯಕ್ರಿಯೆ

Public TV
By Public TV
2 hours ago
Bengaluru 2
Bengaluru City

ಫಾರಿನ್ ಸ್ಟೈಲಲ್ಲಿ ಪ್ರಪೋಸ್‌ ಮಾಡ್ತೀನಿ ಅಂತ ಸೀಮೆ ಎಣ್ಣೆ ಸುರಿದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ..!

Public TV
By Public TV
4 hours ago
Pappu Yadav
Latest

90% ಮಹಿಳೆಯರ ರಾಜಕಾರಣ ನಾಯಕರ ಬೆಡ್‌ರೂಮ್‌ನಿಂದ ಪ್ರಾರಂಭವಾಗುತ್ತೆ – ಸಂಸದ ಪಪ್ಪು ಯಾದವ್

Public TV
By Public TV
4 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?