ಬೆಂಗಳೂರು: ಬಿಎಂಟಿಸಿ ಪಾಸ್(BMTC Pass) ದರ ಏರಿಕೆಯಾದ ಬೆನ್ನಲ್ಲೇ, ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಟಿಕೆಟ್ ದರದ ಜತೆಗೆ ಮಾಸಿಕ ಪಾಸ್ಗಳ ದರವನ್ನು(Monthly Pass Rate) ಗಣನೀಯವಾಗಿ ಹೆಚ್ಚಿಸಿ ಆದೇಶ ಹೊರಡಿಸಿದೆ.
ಗ್ರಾಮಾಂತರ ಪ್ರದೇಶಗಳ ವೇಗದೂತ, ತಡೆರಹಿತ ಹಾಗೂ ಸಾಮಾನ್ಯ ಬಸ್ಗಳಷ್ಟೇ ಅಲ್ಲದೆ, ಪ್ರಮುಖ ಜಿಲ್ಲಾ ಕೇಂದ್ರಗಳ ನಗರ ಸಾರಿಗೆ ಮಾಸಿಕ ಪಾಸ್ ದರಗಳನ್ನೂ ಪರಿಷ್ಕರಿಸಲಾಗಿದ್ದು, ನಿತ್ಯ ಪ್ರಯಾಣಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಭಾರಿ ಆರ್ಥಿಕ ಹೊರೆ ಎದುರಾಗಿದೆ.
ವೇಗದೂತ ಮತ್ತು ತಡೆರಹಿತ ಬಸ್ಗಳಲ್ಲಿ ಒಟ್ಟು 20 ಹಂತಗಳು ಹಾಗೂ ಸಾಮಾನ್ಯ ಸಾರಿಗೆಯಲ್ಲಿ ಒಟ್ಟು 10 ಹಂತಗಳಿಗೆ ಮಾಸಿಕ ಬಸ್ ಪಾಸ್ ನೀಡಲಾಗುತ್ತಿದ್ದು, ಪರಿಷ್ಕೃತ ದರಗಳ ವಿವರ ಈ ಕೆಳಗೆ ನೀಡಲಾಗಿದೆ.
ವೇಗದೂತ ಮತ್ತು ತಡೆರಹಿತ (Express & Non-Stop) ಬಸ್ಗಳು:
ಮೊದಲ ಹಂತ:
* ಸಾಮಾನ್ಯ ಪ್ರಯಾಣಿಕರಿಗೆ: 520 ರಿಂದ 640 ರೂ.ಗೆ ಏರಿಕೆ
* ಹಿರಿಯ ನಾಗರಿಕರಿಗೆ: 465 ರಿಂದ 570 ರೂ.ಗೆ ಏರಿಕೆ
ಗರಿಷ್ಠ ಹಂತ:
* ಸಾಮಾನ್ಯ ಪ್ರಯಾಣಿಕರಿಗೆ: 3,220 ರಿಂದ 3,960 ರೂ.ಗೆ ಹೆಚ್ಚಳ
* ಹಿರಿಯ ನಾಗರಿಕರಿಗೆ: 2,900 ರಿಂದ 3,570 ರೂ.ಗೆ ಏರಿಕೆ
ಸಾಮಾನ್ಯ (Ordinary) ಬಸ್ಗಳು:
ಕನಿಷ್ಠ ಹಂತ:
* ಸಾಮಾನ್ಯ ಪ್ರಯಾಣಿಕರಿಗೆ: 460 ರಿಂದ 570 ರೂ. ಏರಿಕೆ
* ಹಿರಿಯ ನಾಗರಿಕರಿಗೆ: 415 ರಿಂದ 510 ರೂ.ಗೆ ಏರಿಕೆ
ಗರಿಷ್ಠ ಹಂತ:
* ಸಾಮಾನ್ಯ ಪ್ರಯಾಣಿಕರಿಗೆ: 2,070 ರಿಂದ 2,550 ರೂ.ಗೆ ಏರಿಕೆ
* ಹಿರಿಯ ನಾಗರಿಕರಿಗೆ: 1,865 ರಿಂದ 2,290 ರೂ. ಏರಿಕೆ
ಪ್ರಮುಖ ನಗರಗಳ ನಗರ ಸಾರಿಗೆ ಬಸ್ಗಳ ಮಾಸಿಕ ಪಾಸ್ ದರಗಳಲ್ಲೂ ಭಾರಿ ಏರಿಕೆ ಮಾಡಲಾಗಿದೆ:
ಮೈಸೂರು ನಗರ ಸಾರಿಗೆ:
* ಸಾಮಾನ್ಯ ಪ್ರಯಾಣಿಕರಿಗೆ: 810 ರಿಂದ 990 ರೂ.ಗೆ ಏರಿಕೆ
* ಹಿರಿಯ ನಾಗರಿಕರಿಗೆ: 725 ರಿಂದ 890 ರೂ. ಏರಿಕೆ
ಮಂಗಳೂರು ನಗರ ಸಾರಿಗೆ:
* ಸಾಮಾನ್ಯ ಪ್ರಯಾಣಿಕರಿಗೆ: 750 ರಿಂದ 920 ರೂ.ಗೆ ಹೆಚ್ಚಳ
* ಹಿರಿಯ ನಾಗರಿಕರಿಗೆ: 675 ರಿಂದ 830 ರೂ. ಏರಿಕೆ
ಹಾಸನ ನಗರ ಸಾರಿಗೆ:
* ಸಾಮಾನ್ಯ ಪ್ರಯಾಣಿಕರಿಗೆ: 690 ರಿಂದ 850 ಕ್ಕೆ ಏರಿಕೆ
* ಹಿರಿಯ ನಾಗರಿಕರಿಗೆ: 620 ರಿಂದ 760 ಕ್ಕೆ ಏರಿಕೆ
ತುಮಕೂರು ನಗರ ಸಾರಿಗೆ:
* ಸಾಮಾನ್ಯ ಪ್ರಯಾಣಿಕರಿಗೆ: 635 ರಿಂದ 780 ರೂ. ಏರಿಕೆ
* ಹಿರಿಯ ನಾಗರಿಕರಿಗೆ: 570 ರಿಂದ 700 ರೂ. ಹೆಚ್ಚಳ
ಟಿಕೆಟ್ ದರ ಏರಿಕೆಯ ಬಿಸಿಯಲ್ಲಿದ್ದ ಸಾರ್ವಜನಿಕರಿಗೆ ಮಾಸಿಕ ಪಾಸ್ ದರ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ನೌಕರರು, ವಿದ್ಯಾರ್ಥಿಗಳು ಮತ್ತು ದಿನನಿತ್ಯ ಸಂಚರಿಸುವ ಜನಸಾಮಾನ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
