ನವದೆಹಲಿ: ಬಿಜೆಪಿಯಲ್ಲಿ ದೇಶದ ಮಟ್ಟದಲ್ಲಿ ಹಲವು ಮಹತ್ತರ ಬದಲಾವಣೆಗಳು ಸನ್ನಿಹಿತವಾಗಿದೆ. ಪಕ್ಷದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸದೀಯ ಮಂಡಳಿಯನ್ನು ಪುನಾರಚಿಸಲು ಬಿಜೆಪಿ ಮುಂದಾಗಿದೆ.
12 ಸದಸ್ಯ ಸಂಸದೀಯ ಮಂಡಳಿ ಸಭೆಯಲ್ಲಿ ಯುವ ನಾಯಕರು ಮತ್ತು ಪ್ರಸ್ತುತ ಅಧಿಕಾರದಲ್ಲಿರುವ 3ರಿಂದ 4 ಸಿಎಂಗಳನ್ನು ಮಂಡಳಿಗೆ ಸೇರ್ಪಡೆಗೊಳಿಸುವ ಚಿಂತನೆ ಪಕ್ಷದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ಅವರ ಹೆಸರೂ ಪರಿಶೀಲನೆಯಲ್ಲಿದೆ. ಆದರೆ, ಮೂಲಗಳ ಪ್ರಕಾರ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ.
ಸಂಪುಟ ಪುನಾರಚನೆ ಮಾಡುವ ಸಾಧ್ಯತೆಗಳಿದ್ದು, ಖಾಲಿ ಇರುವ 17 ಸಚಿವ ಸ್ಥಾನಗಳಿಗೆ ಮೈತ್ರಿಪಕ್ಷಗಳ ಸದಸ್ಯರಿಗೆ ಆದ್ಯತೆ ನೀಡಬಹುದು ಎನ್ನಲಾಗಿದೆ.
