ಬೆಂಗಳೂರು: ಉದ್ಯಮಿ ಆದಿಕೇಶವುಲು (Adikesavulu) ಮೊಮ್ಮಗ ಮತ್ತೆ ಸುದ್ದಿಯಲ್ಲಿದ್ದಾರೆ. ಬೆಂಕಿಪೊಟ್ಟಣ ಇಟ್ಟಿಲ್ಲ ಅಂತಾ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ ಪ್ರಕೃತಿ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಎಂಬವರ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ತಲೆ ಎತ್ತಿದ ಅಕ್ರಮ ಡೀಸೆಲ್ ದಂಧೆ – ಸ್ವಲ್ಪ ಯಾಮಾರಿದ್ರೂ ಬಹುದೊಡ್ಡ ಕಂಟಕ
ಆದಿಕೇಶವುಲು ಮೊಮ್ಮಗ ಸಿಗರೇಟ್ ಸೇದಲು ಬೆಂಕಿಪಟ್ಟಣ ಕೇಳಿದ್ದರು. ಇಲ್ಲ ಎಂದಿದ್ದಕ್ಕೆ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಪಾರ್ಕಿಂಗ್ ಲಾಟ್‌ನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿರುವ ಆರೋಪವೂ ಕೇಳಿಬಂದಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಗೆ ಸೆಕ್ಯುರಿಟಿ ಗಾರ್ಡ್, ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಎನ್‌ಸಿಆರ್ ಅಷ್ಟೇ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸುವಂತೆ ಡಿಸಿಪಿಗೆ ದೂರು ಕೊಡಲಾಗಿದೆ. ಇದನ್ನೂ ಓದಿ: ಡೆಲಿವರಿ ಬಾಯ್‌ನಿಂದ ಕಿರುಕುಳ ಆರೋಪ – ಮೊಬೈಲ್ ನಂಬರ್ ಕೊಡುವಂತೆ ಒತ್ತಾಯ, ವಿಡಿಯೋ ಹಂಚಿಕೊಂಡ ಯುವತಿ
2019 ರಲ್ಲಿ ಆದಿಕೇಶವುಲು ಆಪ್ತ ರಘುನಾಥ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು, ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಮೇಲೆ ದಾಖಲಾಗಿದ್ದ ಹಲ್ಲೆ ಪ್ರಕರಣ, 2017 ರಲ್ಲಿ SUV ಅಪಘಾತ ಮತ್ತು ಪೊಲೀಸ್ ಕಸ್ಟಡಿಯಿಂದ ಪರಾರಿ ಪ್ರಕರಣ, ನಾಯಿ ಮೇಲೆ ಕಾರು ಹತ್ತಿಸಿದ್ದಕ್ಕೆ ಆದಿಕೇಶವುಲು ಮೊಮ್ಮಗ ಆದಿ ಮೇಲೆ ಕೇಸ್ ಮೊದಲಾದ ಕೇಸ್‌ಗಳು ಉದ್ಯಮಿ ಆದಿಕೇಶವುಲು ಕುಟುಂಬದ ಮೇಲಿವೆ.
