ಸ್ಯಾಂಡಲ್ವುಡ್ ಬ್ಯೂಟಿ ರಾಧಿಕಾ ಪಂಡಿತ್ (Radhika Pandit) ಸದ್ಯ ವೆಕೇಷನ್ ಮೂಡ್ನಲ್ಲಿದ್ದಾರೆ. ಯಶ್ (Yash) ಮತ್ತು ಮಗಳ ಜೊತೆ ದೂರದ ಊರಿನಲ್ಲಿದ್ದಾರೆ. ಈ ವೇಳೆ, ತನ್ನ ಪರ್ಸನಲ್ ಫೋಟೋಗ್ರಾಫರ್ ಅನ್ನು ನಟಿ ಪರಿಚಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಚೈತ್ರಾ ಆಚಾರ್ ಗೆ ಬೆಸ್ಟ್ ಗಿಫ್ಟ್ ಅಂದರೆ ರುಕ್ಮಿಣಿ ವಸಂತ್
ಈ ಬಾರಿ ರಾಧಿಕಾ ಪಂಡಿತ್ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದರು. ಈ ಬೆನ್ನಲ್ಲೇ ಕುಟುಂಬದ ಜೊತೆ ರಾಧಿಕಾ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಈ ಬಾರಿ ಪುತ್ರಿ ಐರಾ, ಅಮ್ಮನಿಗೆ ಫೋಟೋಗ್ರಾಫರ್ ಆಗಿದ್ದಾಳೆ. ಯಶ್, ರಾಧಿಕಾ ಜೊತೆಯಾಗಿ ನಿಂತು ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಅದಕ್ಕೆ ನಟಿ, ನನ್ನ ಹೊಸ ಖಾಸಗಿ ಫೋಟೋಗ್ರಾಫರ್ ಎಂದು ಅಡಿಬರಹ ನೀಡಿದ್ದಾರೆ.
View this post on Instagram
ಸಮ್ಮರ್ ಲುಕ್ನಲ್ಲಿ ರಾಧಿಕಾ ಕೂಡ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ನಟ ಯಶ್ ಕೂಡ ಸಖತ್ ಸ್ಮಾರ್ಟ್ ಆಗಿ ಮಗಳ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅಪ್ಪನ ಬದಲು ಈಗ ಮಗಳು ಫೋಟೋ ಕ್ಲಿಕ್ಕಿಸುವ ಕೆಲಸ ಮಾಡುತ್ತಿದ್ದಾಳೆ ಎಂದು ನೆಟ್ಟಿಗರು ಬಗೆ ಬಗೆಯ ಕಾಮೆಂಟ್ಗಳನ್ನು ಹಾಕಿದ್ದಾರೆ.
ಸದ್ಯ ಯಶ್ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಪತ್ನಿ ಮತ್ತು ಮಕ್ಕಳ ಜೊತೆ ರಜೆಯ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ.