ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ, ಸಿಹಿಸುದ್ದಿ ಯಾವಾಗ ಎಂದ ಫ್ಯಾನ್ಸ್

ತಮಿಳು ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದ್ರ (Producer Ravindra) ಮದುವೆಯಾದ ದಿನಗಳಿಂದ ಸದಾ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಬೆಡ್‌ರೂಮ್ ಫೋಟೋ ಹಂಚಿಕೊಂಡಿದ್ದು, ಮಗುವಿನ (Child) ಬಗ್ಗೆ ಗುಡ್ ನ್ಯೂಸ್ ಯಾವಾಗ ಕೊಡ್ತೀರಾ ಎಂದು ಬಗೆ ಬಗೆಯ ಕಾಮೆಂಟ್ ಮಾಡ್ತಿದ್ದಾರೆ.
ಸಾಕಷ್ಟು ಟ್ರೋಲ್ ಮತ್ತು ಟೀಕೆಯ ಮಧ್ಯೆಯೂ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ (Producer Ravindra) ಖುಷಿಯಿಂದ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಈ ವಿಶೇಷ ಜೋಡಿಯ ಫೋಟೋಸ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇದೀಗ ಮಹಾಲಕ್ಷ್ಮಿ ಮಲಗುವ ಕೋಣೆಯ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ನೈಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ನೈಟ್ ಡ್ರೆಸ್ ಧರಿಸಿ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ನಟಿಗೆ ಪ್ರಶ್ನೆಗಳ ಸುರಿಮಳೆ ಶುರುವಾಗಿದೆ. ಮಹಾಲಕ್ಷ್ಮಿ ಮದುವೆಯಾಗಿ ಈಗಾಗಲೇ ನಾಲ್ಕು ತಿಂಗಳಾಗಿದೆ. ಹಾಗಾಗಿ ಅಭಿಮಾನಿಗಳು ಯಾವಾಗ ಗುಡ್‌ನ್ಯೂಸ್ ಕೊಡುತ್ತೀರಿ ಎಂದು ಕಾಮೆಂಟ್ ಮಾಡಿ ಕೇಳುತ್ತಿದ್ದಾರೆ.
View this post on Instagram
ನೀವು ಯಾವಾಗ ಮಗುವಿಗೆ ಜನ್ಮ ಕೊಡುತ್ತೀರಿ. ನಿಮ್ಮ ಈ ಶುಭ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರಳತೆ ಯಾವಾಗಲೂ ಮನುಷ್ಯನ ಗುರುತಾಗಿರಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಇದನ್ನೂ ಓದಿ: ಮಗಳ ಬಟ್ಟೆ ಧರಿಸಿದ್ದೀರಾ ಎಂದು ಅನುಷ್ಕಾ ಶರ್ಮಾಗೆ ನೆಟ್ಟಿಗರಿಂದ ತರಾಟೆ
View this post on Instagram
ಇನ್ನೂ ನಟಿ ಮಹಾಲಕ್ಷ್ಮಿ ಅವರು ರವೀಂದ್ರ ಜೊತೆ ಎರಡನೇ ಮದುವೆಯಾಗಿದ್ದಾರೆ. ಇದಕ್ಕೂ ಮುನ್ನ ಅವರ ವಿವಾಹವಾಗಿದ್ದು, ನಂತರ ಡಿವೋರ್ಸ್ ಆಗಿದೆ. ಈಗ ಪತಿ ರವೀಂದ್ರ ಜೊತೆ ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯುತ್ತಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k