
ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಸದಾ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮ ಹೊಸ ಫೋಟೋಶೂಟ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ʻಮಗಳ ಡ್ರೆಸ್ ಹಾಕಿದ್ದೀರಾʼ ಎಂದು ನಟಿಯನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.
ಹಿಂದಿ ಸಿನಿಮಾಗಳ ಮೂಲಕ ಹೈಪ್ ಕ್ರಿಯೆಟ್ ಮಾಡಿರುವ ನಟಿ ಅನುಷ್ಕಾ ಶರ್ಮಾ ಸದ್ಯ ಮುದ್ದು ಮಗಳ ಪಾಲನೆಯ ಜೊತೆ ಒಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇತ್ತೀಚಿನ ಹೊಸ ಫೋಟೋವೊಂದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.
ನೀಲಿ ಬಣ್ಣದ ಜೀನ್ಸ್‌ಗೆ ಹಳದಿ ಬಣ್ಣದ ಸ್ಲೀವ್ ಲೆಸ್ ಶಾರ್ಟ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನ ಅನುಷ್ಕಾ ಹಂಚಿಕೊಂಡಿದ್ದರು. ದೇಹ ಪೂರ್ತಿ ಮುಚ್ಚಿರದ ಹಳದಿ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸಿಕ್ಕಿದ್ದೆ ಚಾನ್ಸ್ ಅಂತಾ ಈ ಫೋಟೋವನ್ನ ಟ್ರೋಲ್ (Troll) ಮಾಡಲಾಗಿತ್ತು. ಇದನ್ನೂ ಓದಿ: ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ ಸ್ವತಿಷ್ಠ ಕೃಷ್ಣನ್
View this post on Instagram
ಮಗಳ ಬಟ್ಟೆ ಹಾಕಿದ್ದೀರಾ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ಮದುವೆ ಆಗಿ ಮಗು ಆದ್ರೂ ನಿಮಗೆ ಹೇಗೆ ಬಟ್ಟೆ ಹಾಕಬೇಕು ಎಂಬುದು ಗೊತ್ತಿಲ್ಲ ಎಂದು ಬಗೆ ಬಗೆಯ ರೀತಿ ಕಾಮೆಂಟ್ ಮಾಡಿದ್ದಾರೆ. ನಟಿಯ ಬಟ್ಟೆಯ ವಿಚಾರಕ್ಕೆ ನೆಗೆಟಿವ್ ಕಾಮೆಂಟ್ಸ್ ಹರಿದು ಬಂದಿದ್ರು ಕೂಡ ಯಾವುದಕ್ಕೂ ಅನುಷ್ಕಾ ಪ್ರತಿಕ್ರಿಯೆ ನೀಡಿಲ್ಲ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k