Connect with us

Bengaluru City

‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕರಿಂದ ಲೈಂಗಿಕ ಕಿರುಕುಳ ಆರೋಪ – ನಟಿ ಅವಂತಿಕಾ ಶೆಟ್ಟಿ ಕಣ್ಣೀರು

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನ ನಿರ್ಮಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ರಂಗಿತರಂಗ ಫೇಮ್ ಚಿತ್ರನಟಿ ಅವಂತಿಕಾ ಶೆಟ್ಟಿ ಸ್ಯಾಂಡಲ್‍ವುಡ್ ನಿರ್ಮಾಪಕ ಸುರೇಶ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಮೂಲಕ ಕಣ್ಣೀರಿಟ್ಟು ತನಗಾದ ದೌರ್ಜನ್ಯವನ್ನ ಅವಂತಿಕಾ ಶೆಟ್ಟಿ ಹೊರಹಾಕಿದ್ದಾರೆ.

ರಂಗಿತರಂಗ, ಕಲ್ಪನಾ-2 ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರೋ ಅವಂತಿಕಾ ಶೆಟ್ಟಿ ಚಿತ್ರೀಕರಣಕ್ಕೆ ಸರಿಯಾಗಿ ಬರ್ತಿಲ್ಲ ಎಂಬ ಕಾರಣಕ್ಕೆ ರಾಜು ಕನ್ನಡ ಮೀಡಿಯಂ ಚಿತ್ರದಿಂದ ಹೊರಬಿದ್ದಿದ್ದರು. ಸಿನಿಮಾದಿಂದ ಹೊರಬಿದ್ದ ಬೆನ್ನಲ್ಲೇ ಚಿತ್ರ ನಿರ್ಮಾಪಕ ಸುರೇಶ್ ಹಾಗೂ ಲೈಟ್‍ಬಾಯ್ಸ್ ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲೈಟ್ ಬಾಯ್ ಮೈ ಕೈ ಮುಟ್ಟಿ ಮಾತನಾಡಿಸಿದ್ರು. ಇದಕ್ಕೆ ಚಿತ್ರತಂಡ ಸಾರಿ ಕೇಳಿಸಿ ಸುಮ್ಮನಾಯ್ತು ಎಂದು ಆವಂತಿಕಾ ಹೇಳಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ ಆವಂತಿಕಾ, ಇಲ್ಲಿಯವರೆಗೂ ನಾನು ಎಲ್ಲೂ ಈ ಬಗ್ಗೆ ಹೇಳಿರಲಿಲ್ಲ. ಆದ್ರೆ ಚೆಕ್‍ಬೌನ್ಸ್ ಬಗ್ಗೆ ಕೋರ್ಟ್ ಮೆಟ್ಟಿಲೇರಿದಾಗ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ಸುಳ್ಳು ಸ್ಟೋರಿ ಸೃಷ್ಟಿಸಿದ್ದಾರೆ. ನನಗೆ ಸೆಟ್‍ನಲ್ಲಿ ತುಂಬಾ ತೊಂದರೆ ಆಗ್ತಿತ್ತು. ಎಲ್ಲವನ್ನೂ ಸಹಿಸಿಕೊಂಡೆ. ಬ್ಯಾಂಕಾಕ್ ಚಿತ್ರೀಕರಣ ಬಾಕಿ ಉಳಿದಿತ್ತು. ಅದನ್ನು ಮುಗಿಸಿ ಹೊರಟುಬಿಡೋಣ ಅಂತ ಸುಮ್ಮನಿದ್ದೆ. ಒಂದು ದಿನ ನನ್ನ ಜೊತೆ ಮಾತಾಡ್ಬೇಕು ಅಂದ್ರು. ಡೇಟ್ ಸಮಸ್ಯೆ ಬಗ್ಗೆ ಕೇಳೋದಿರಬಹುದು ಅಂದುಕೊಂಡೆ. ಆದ್ರೆ ಅವರು ನಿಮಗೆ ನನ್ನ ಜೊತೆ ಏನಾದ್ರೂ ಪ್ರಬ್ಲಮ್ ಇದ್ಯಾ ಅಂದ್ರು. ಇಲ್ಲ, ಇನ್ನೆರಡು ಮೂರು ದಿನ ಚಿತ್ರೀಕರಣ ಅಲ್ವಾ, ಮುಗಿಸೋಣ ಅಂದೆ. ಆದ್ರೆ ಅವರು ನೀನು ನಮ್ಮ ಜೊತೆ ಫ್ರೆಂಡ್ಲಿ ಇಲ್ಲ ಅಂದ್ರು. ನಾನು ಫ್ರೆಂಡ್ಲಿ ಇಲ್ಲ ಅನ್ನೋದು ಅವರ ಪ್ರಾಬ್ಲಮ್ ಆಗಿತ್ತು. ಫ್ರೆಂಡ್ಲಿ ಅಂದ್ರೆ ಏನು ಅಂತ ಕೇಳಿದ್ದಕ್ಕೆ ಜೋರಾಗಿ ಕಿರುಚಾಡಲು ಶುರು ಮಾಡಿದ್ರು. ನಾನು ಅಳುತ್ತಾ ಅಲ್ಲಿಂದ ಹೊರಟುಬಿಟ್ಟೆ.

ಚಿತ್ರದ ಮೊದಲನೇ ಶೆಡ್ಯೂಲ್ ನಂತರ ಎರಡನೇ ಶೆಡ್ಯೂಲ್‍ಗೆ ದೀರ್ಘವಾದ ಗ್ಯಾಪ್ ಇತ್ತು. ಈ ವೇಳೆ ಡೇಟ್ಸ್ ತೊಂದರೆಯಾಗಬಾರದು ಅಂತ ತುಂಬಾ ಸಲ ಮೆಸೇಜ್ ಮಾಡಿದ್ದೇನೆ. ಆದ್ರೆ ಯಾವುದಕ್ಕೂ ರಿಪ್ಲೈ ಬಂದಿಲ್ಲ. ನಂತರ ಫಿಲಂ ಚೇಂಬರ್‍ಗೆ ಹೋಗೋಣ ಅಲ್ಲಿ ಏನು ಹೇಳ್ತಾರೋ ಹಾಗೆ ಮಾಡ್ತೀನಿ ಅಂದ್ರು. ಎರಡು ದಿನಗಳ ನಂತರ ಅವರ ಮ್ಯಾನೇಜರ್ ಬಂದು ನಿಮ್ಮ ಟಿಕೆಟ್ ರೆಡಿ ಇದೆ. ನೀವು ಹೋಗ್ಬೆಕು ಅಂದ್ರು. ಅವರೇ ಕಳಿಸಿದ್ದು, ನಾನು ಚಿತ್ರದಿಂದ ಹೊರಹೋಗಿಲ್ಲ. ಈ ಬಗ್ಗೆ ವಿವರಿಸಿ ಫಿಲಂ ಚೇಂಬರ್‍ಗೂ ಪತ್ರ ಬರೆದಿದ್ದೇನೆ. ಆದ್ರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅದಕ್ಕಾಗಿ ಕೋರ್ಟ್‍ನಲ್ಲಿ ಕೇಸ್ ಹಾಕಬೇಕಾಯ್ತು ಅಂದ್ರು. ಕೇಸ್‍ನಲ್ಲಿ ಕೂಡ ನನಗಾದ ತೊಂದರೆ ಬಗ್ಗೆ ಹೇಳಿಲ್ಲ. ಚಿತ್ರ ರಿಲೀಸ್ ಆದ್ರೆ ನಾನೇ ಡಬ್ ಮಾಡ್ಬೇಕು ಎಂದಷ್ಟೇ ಹೇಳಿದ್ದೇನೆ ಅಂದ್ರು.

https://www.youtube.com/watch?v=mrPva5qVTHE

 ನನಗಾದ ಅನ್ಯಾಯ ಇನ್ನೊಬ್ಬ ಹುಡುಗಿಗೆ ಆಗದಿರಲಿ ಎಂದು ಅವಂತಿಕಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಆದ್ರೆ ನಟಿ ಅವಂತಿಕಾ ಶೆಟ್ಟಿಯ ಆರೋಪವನ್ನ ನಿರ್ಮಾಪಕ ಸುರೇಶ್ ತಳ್ಳಿಹಾಕಿದ್ದಾರೆ. ನಾನು ಆ ರೀತಿ ಅಲ್ಲ. ಬೇಕಿದ್ರೆ ಸೆಟ್‍ನಲ್ಲಿದ್ದವರನ್ನು ಕೇಳಿ. ಅವಂತಿಕಾ ಸೆಟ್‍ಗೆ ಲೇಟ್ ಆಗಿ ಬರ್ತಿದ್ರು. ಚಿತ್ರೀಕರಣ ತಡವಾಗ್ತಿತ್ತು. ರಾತ್ರಿ ನಿದ್ದೆ ಮಾಡದೇ ಸೆಟ್‍ಗೆ ಬರ್ತಿದ್ರು. ಕೇಳಿದ್ರೆ ಪ್ರಾಕ್ಟೀಸ್ ಮಾಡ್ತಿದ್ದೆ ಅಂತಿದ್ರು. ರಾತ್ರಿಯೆಲ್ಲಾ ಪ್ರಾಕ್ಟೀಸ್ ಮಾಡಲು ಇದೇನು ಪೌರಾಣಿಕ ಚಿತ್ರನಾ. ನಿದ್ರೆ ಮಾಡದಿದ್ರೆ ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣಲ್ಲ ಎಂದಿದ್ದೇವೆ ಅಷ್ಟೆ ಅಂತ ಸುರೇಶ್ ಹೇಳಿದ್ರು.

https://www.youtube.com/watch?v=d6e1Abm0zIU&spfreload=10

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಪದೇ ಪದೇ ನಟಿಯರ ಮೇಲೆ ನಡೆಯುತ್ತಿರೋ ದೌರ್ಜನ್ಯವನ್ನ ಸಹಿಸಲು ಸಾಧ್ಯವಿಲ್ಲ. ಯಾರೇ ತಪ್ಪು ಮಾಡಿದ್ರೂ ತಪ್ಪೇ. ಅದ್ರಲ್ಲೂ ಒಂದು ಹೆಣ್ಣಿಗೆ ನೋವಾದ್ರೆ ಸುಮ್ಮನಿರಲ್ಲ ಅಂದ್ರು

ನಟಿ ಅವಂತಿಕಾ ಶೆಟ್ಟಿಗೆ ನಿರ್ಮಾಪಕರು ಲೈಂಗಿಕ ಕಿರುಕುಳ ಕೊಟ್ಟಿದ್ರೆ ಕ್ರಮ ನಿಶ್ಚಿತ. ಅವಂತಿಕಾ, ನಿರ್ಮಾಪಕ ಸುರೇಶ್, ನಿರ್ದೇಶಕ ನರೇಶ್‍ರನ್ನ ಕರೆಸಿ ಮಾತನಾಡುತ್ತೇನೆ. ನಟಿ ಅವಂತಿಕಾ ಕೊಟ್ಟ ದೂರನ್ನ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳಿದ್ರು.

Click to comment

Leave a Reply

Your email address will not be published. Required fields are marked *